ನ್ಯಾಯಾಲಯದಲ್ಲೇ ಗುಂಡಿಟ್ಟು ವಕೀಲನ ಹತ್ಯೆ: ಮೂರನೇ ಮಹಡಿಯ ಶೂಟೌಟ್ ಕಹಾನಿ!

ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ್‌ದಲ್ಲಿ ನಡೆದಿದೆ. ಹತ್ಯೆಯಾದ ವಕೀಲರನ್ನು ಭೂಪೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದ್ದು, ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಶವ ಪತ್ತೆಯಾಗಿದೆ.

ನ್ಯಾಯಾಲಯದಲ್ಲೇ ಗುಂಡಿಟ್ಟು ವಕೀಲನ ಹತ್ಯೆ: ಮೂರನೇ ಮಹಡಿಯ ಶೂಟೌಟ್ ಕಹಾನಿ!
Linkup
ಲಕ್ನೋ: ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ್‌ದಲ್ಲಿ ನಡೆದಿದೆ. ಹತ್ಯೆಯಾದ ವಕೀಲರನ್ನು ಭೂಪೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದ್ದು, ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಶವ ಪತ್ತೆಯಾಗಿದೆ. ಮೃತದೇಹದ ಬಳಿ ನಾಡ ಪಿಸ್ತೂಲು ಕೂಡ ಪತ್ತೆಯಾಗಿದೆ. ಹತ್ಯೆ ನಡೆದಾಗ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಭೂಪೇಂದ್ರ ಸಿಂಗ್ ಒಬ್ಬರೇ ಇದ್ದರು ಎನ್ನಲಾಗಿದೆ. ಇದೇ ಸಮಯವನ್ನು ಬಳಿಸಿಕೊಂಡ ಕೊಲೆಗಾರ, ಭೂಪೇಂದ್ರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹತ್ಯೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಹತ್ಯೆ ನಡೆಸಿದ್ದು ಯಾರು ಎಂಬುದು ಕೂಡ ತಿಳಿದು ಬಂದಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ತನಿಖೆ ಆರಂಭಿಸಿರಿವುದಾಗಿ ಶಹಜಹಾನ್‌ಪುರ್ ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಮೂರನೇ ಮಹಡಿಯಿಂದ ಗುಂಡಿನ ಶಬ್ಧ ಕೇಳಿ ಬಂತು. ಕೆಲವರು ಕೆಳಗೆ ಓಡಿ ಬಂದು ವಕೀಲ ಭೂಪೇಂದ್ರ ಸಿಂಗ್ ಅವರನ್ನು ಆಗಂತುಕನೋರ್ವ ಹತ್ಯೆ ಮಾಡಿದ ಎಂದು ತಿಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಕೀಲನ ಹತ್ಯೆಯನ್ನು ಖಂಡಿಸಿರುವ ಬಿಎಸ್‌ಪಿ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮಾಯಾವತಿ, ಯೋಗಿ ಆದಿತ್ಯನಾಥ್ ಅವರ ರಾಮರಾಜ್ಯ ಅಂದರೆ ಇದೇನಾ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಹಾಡಹಗಲೇ ನ್ಯಾಯಾಲಯಗಳಲ್ಲಿ ದಾಳಿಗಳಾಗುತ್ತಿದೆ. ವಕೀಲರನ್ನೇ ಗುಂಡಿಟ್ಟು ಹತ್ಯೆ ಮಾಡಲಾಗುತ್ತಿದೆ. ಆದರೆ ಯೋಗಿ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.