ಕೃಷಿಗೆ ಒತ್ತು ನೀಡಿದ ನೂತನ ಸಂಪುಟ, ಎಪಿಎಂಸಿ ಮೂಲಕ ರೈತರಿಗೆ 1 ಲಕ್ಷ ಕೋಟಿ ರೂ. ಅನುದಾನ

'ಕೃಷಿ ಮೂಲಸೌಕರ್ಯ ನಿಧಿ'ಯನ್ನು ಇನ್ನು ರಾಜ್ಯ ಸರಕಾರಗಳು, ಎಂಪಿಎಂಸಿಗಳೂ ಬಳಸಿಕೊಳ್ಳಬಹುದಾಗಿದೆ ಎಂದಿರುವ ಕೇಂದ್ರ ಸಂಪುಟ, ಇದಕ್ಕಾಗಿ 1 ಲಕ್ಷ ಕೋಟಿ ರೂ. ನಿಧಿಯನ್ನು ಒದಗಿಸಲು ತನ್ನ ಒಪ್ಪಿಗೆ ನೀಡಿದೆ.

ಕೃಷಿಗೆ ಒತ್ತು ನೀಡಿದ ನೂತನ ಸಂಪುಟ, ಎಪಿಎಂಸಿ ಮೂಲಕ ರೈತರಿಗೆ 1 ಲಕ್ಷ ಕೋಟಿ ರೂ. ಅನುದಾನ
Linkup
ಹೊಸದಿಲ್ಲಿ: ಕಾಯಿದೆಗಳ ವಿರುದ್ಧ ಆಕ್ರೋಶಿತವಾಗಿರುವ ರೈತ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾರ್ಗವನ್ನು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಕಂಡುಕೊಂಡಿದೆ. ನೂತನ ಕೃಷಿ ಕಾಯಿದೆಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ()ಗಳು ಸ್ಥಗಿತಗೊಳ್ಳಲಿವೆ ಎಂಬ ಆತಂಕವೇ ರೈತರ ಪ್ರತಿಭಟನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಎಪಿಎಂಸಿಗಳಿಗೆ ಹಣಕಾಸು ಬಲ ಒದಗಿಸುವ ಕೆಲಸಕ್ಕೆ ಮುಂದಾಗಿದೆ. ಸಂಪುಟ ಪುನರ್‌ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ'ಕೃಷಿ ಮೂಲಸೌಕರ್ಯ ನಿಧಿ'ಯನ್ನು ಇನ್ನು ರಾಜ್ಯ ಸರಕಾರಗಳು, ಎಂಪಿಎಂಸಿಗಳು, ರಾಷ್ಟ್ರ ಮತ್ತು ರಾಜ್ಯ ಸಹಕಾರ ಒಕ್ಕೂಟಗಳು, ಸ್ವ ಸಹಾಯ ಗುಂಪುಗಳ ಒಕ್ಕೂಟ ಮತ್ತು ರೈತರು ಉತ್ಪಾದಕರ ಸಂಘಟನೆಗಳ ಒಕ್ಕೂಟ (ಇಎಫ್‌ಒಎಸ್‌) ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಸಂಪುಟವು 1 ಲಕ್ಷ ಕೋಟಿ ರೂ. ನಿಧಿಯನ್ನು ಒದಗಿಸಲು ತನ್ನ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಕೃಷಿ ಸಚಿವ ಈ ವಿಷಯವನ್ನು ತಿಳಿಸಿದರು. ಬಡ್ಡಿ ದರದಲ್ಲಿ ವಿನಾಯ್ತಿ ಎಪಿಎಂಸಿ ಪ್ರಾಂಗಣದಲ್ಲೇ ಕೈಗೊಳ್ಳಲಾಗುವ 2 ಕೋಟಿ ರೂ. ವೆಚ್ಚದ ಶೈತ್ಯಾಗಾರ, ವಿಂಗಡನೆ, ಗ್ರೇಡಿಂಗ್‌ ಮತ್ತು ಹಗೇವು, ಸಂಸ್ಕರಣಾ ಘಟಕಗಳ ನಿರ್ಮಾಣದಂಥ ಪ್ರಾಜೆಕ್ಟ್‌ಗಳಿಗೆ ಕೇಂದ್ರವು ಬಡ್ಡಿ ದರದಲ್ಲಿ ವಿನಾಯ್ತಿ ಒದಗಿಸಲಿದೆ. ಅರ್ಹತೆ ವಿಸ್ತರಣೆ ಕೇಂದ್ರದ ಕೃಷಿ ಮೂಲ ಸೌಕರ್ಯ ನಿಧಿಯನ್ನು ಈ ವರೆಗೆ ವೈಯಕ್ತಿಕವಾಗಿ, ಸಂಘಟನೆಗಳು, ಸಹಕಾರಿ ಸಂಘಗಳು, ಎಫ್‌ಒಎಗಳು, ಅಗ್ರಿ ಸ್ಟಾರ್ಟ್‌ಅಪ್‌ಗಳು, ರೈತ ಸಂಘಟನೆಗಳು ವಾರ್ಷಿಕ ಶೇ.3ರ ಬಡ್ಡಿದರಲ್ಲಿ 2 ಕೋಟಿ ರೂ. ಸಾಲ ಪಡೆಯಲು ಸಾಧ್ಯವಾಗುತ್ತಿತ್ತು. ಈಗ ಅರ್ಹತಾ ಮಿತಿಯನ್ನು ವಿಸ್ತರಿಸಲಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಿ ಸಂಸ್ಥೆಗಳು, ಎಪಿಎಂಸಿಗಳು, ಸ್ವ ಸಹಾಯ ಗುಂಪುಗಳು ಪಡೆದುಕೊಳ್ಳಬಹುದಾಗಿದೆ. ಕಾಯಿದೆ ಜಾರಿಯಾದ್ರೆ ನಿಧಿ ಬಳಕೆ ಕೇಂದ್ರದ 3 ಕೃಷಿ ಕಾಯಿದೆಗಳ ಜಾರಿಯಾದ ಬಳಿಕವೇ ಎಂಪಿಎಂಸಿಗಳು ಈಗ ನೀಡಲಾಗುತ್ತಿರುವ ಒಂದು ಲಕ್ಷ ಕೋಟಿ ರೂ. ನಿಧಿ ಬಳಕೆ ಸಾಧ್ಯವಾಗಲಿದೆ. ದೀರ್ಘಾವಧಿ ಸಾಲ ನೆರವು ಎಐಎಫ್‌ ಅಡಿ ಇನ್ನು ಮಧ್ಯಮ ಮತ್ತು ದೀರ್ಘಾವಧಿ ಹಣಕಾಸು ಸಾಲ ನೆರವು ಒದಗಿಸಲಾಗುತ್ತದೆ. ವಿಶೇಷವಾಗಿ ಸುಗ್ಗಿ ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಾಮೂದಾಯಿಕ ಕೃಷಿಗೆ ಬಡ್ಡಿ ದರದಲ್ಲಿ ವಿನಾಯ್ತಿ ಹಾಗೂ ಹಣಕಾಸು ನೆರವು ದೊರೆಯಲಿದೆ. ಬಹು ಸ್ಥಳದ ಪ್ರಾಜೆಕ್ಟ್ ಓಕೆ ಈ ಮೊದಲು ಒಂದೇ ಸ್ಥಳದಲ್ಲಿ ಕೈಗೊಳ್ಳುವ ಪ್ರಾಜೆಕ್ಟ್‌ಗೆ ನೆರವು ನೀಡಲಾಗುತ್ತಿತ್ತು. ಇದೀಗ ನಿಯಮಕ್ಕೆ ಬದಲಾವಣೆ ಮಾಡಲಾಗಿದ್ದು, ಅರ್ಹ ಸಂಸ್ಥೆಯು ತನ್ನ ಪ್ರಾಜೆಕ್ಟ್ ಅನ್ನು ಬೇರೆ ಬೇರೆ ಸ್ಥಳಗಳಲ್ಲಿ ಕೈಗೊಂಡಿದ್ದರೂ ಬಡ್ಡಿ ದರದಲ್ಲಿ ವಿನಾಯ್ತಿ ಸಿಗಲಿದೆ. ಖಾಸಗಿಗೆ ಮಿತಿ ಎಐಎಫ್‌ನಡಿ ನೆರವು ಬಯಸುವ ಖಾಸಗಿ ಸಂಸ್ಥೆಗಳು ಕೇವಲ 25 ಪ್ರಾಜೆಕ್ಟ್‌ಗಳನ್ನು ಮಾತ್ರ ಕೈಗೊಳ್ಳಬಹುದು. ಆದರೆ, ಈ ಮಿತಿ ಕೇಂದ್ರ, ರಾಜ್ಯ ಸಂಸ್ಥೆಗಳು, ಸಹಕಾರಿ ಸಂಘಗಳು, ಎಫ್‌ಪಿಒಗಳು, ಎಚ್‌ಜಿಒಗಳಿಗೆ ಅನ್ವಯವಾಗುವುದಿಲ್ಲ. ಅವಧಿ ವಿಸ್ತರಣೆ ಹಣಕಾಸಿನ ಸೌಲಭ್ಯದ ಅವಧಿಯನ್ನು 4 ರಿಂದ 6 ವರ್ಷಗಳಿಗೆ 2025-26ರವರೆಗೆ ಮತ್ತು ಯೋಜನೆಯ ಒಟ್ಟಾರೆ ಅವಧಿಯನ್ನು 10 ರಿಂದ 13 ವರ್ಷಗಳಿಗೆ 2032-33ರವರೆಗೆ ವಿಸ್ತರಿಸಲಾಗಿದೆ. ತೆಂಗು ಮಂಡಳಿಗೆ ರೈತನೇ ಅಧ್ಯಕ್ಷ ತೆಂಗು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ತೆಂಗು ಅಭಿವೃದ್ಧಿ ಮಂಡಳಿ ಕಾಯಿದೆಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ತಿದ್ದುಪಡಿ ಬಳಿಕ ಮಂಡಳಿಗೆ ಅಧಿಕಾರಿಯ ಮುಖ್ಯಸ್ಥನಾಗಿರುವುದಿಲ್ಲ. ಬದಲಿಗೆ ರೈತ ಸಮುದಾಯದವರೇ ಆಗಿರುತ್ತಾರೆ ಎಂದು ಕೃಷಿ ಸಚಿವ ತೋಮರ್‌ ತಿಳಿಸಿದರು.