ನಂಜನಗೂಡಲ್ಲಿ 'ರೈಡರ್' ರೌಂಡ್ಸ್..! ನಿಖಿಲ್ ಕುಮಾರಸ್ವಾಮಿಗೆ ಫ್ಯಾನ್ಸ್ ಜೈಕಾರ..

ನಟ ನಿಖಿಲ್ ಕುಮಾರಸ್ವಾಮಿ ಅವರ 'ರೈಡರ್' ಸಿನಿಮಾ ರಿಲೀಸ್ ಆಗಿದ್ದು, ಚಿತ್ರವನ್ನು ಜನರು ಹೆಚ್ಚು ವೀಕ್ಷಣೆ ಮಾಡಲಿ ಎಂದು ಅವರು ರಾಜ್ಯಾದ್ಯಂತ ರೈಡಿಂಗ್ ಮಾಡುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ನಂಜನಗೂಡಲ್ಲಿ 'ರೈಡರ್' ರೌಂಡ್ಸ್..! ನಿಖಿಲ್ ಕುಮಾರಸ್ವಾಮಿಗೆ ಫ್ಯಾನ್ಸ್ ಜೈಕಾರ..
Linkup
ಅಭಿನಯದ '' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಸಕ್ಸಸ್ ಆಗಿದೆ . ಸ್ಯಾಂಡಲ್‌ವುಡ್‌ ಜಾಗ್ವಾರ್ ನಿಖಿಲ್ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಸೋಮವಾರ ನಂಜನಗೂಡಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ಕೊಟ್ರು. ನಗರದ ಭಾರ್ಗವಿ ಸಿನಿಮಾ ಮಂದಿರಕ್ಕೆ ಭೇಟಿ ಕೊಟ್ಟ ನಿಖಿಲ್ ಅಭಿಮಾನಿಗಳ ಜತೆ ಕೂತು ಸಿನಿಮಾ ವೀಕ್ಷಿಸಿದರು. ನಿಖಿಲ್ ಕುಮಾರಸ್ವಾಮಿ ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ದಕ್ಷಿಣ ಕಾಶಿ ತುಂಬೆಲ್ಲಾ 'ರೈಡರ್' ಸವಾರಿ ಮಾಡಿದ್ದು , ನಿಖಿಲ್ ನೋಡಲು ಜನರು ಮುಗಿಬಿದ್ರು. ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ..! 'ರೈಡರ್' ಚಿತ್ರತಂಡ ನಂಜನಗೂಡಿಗೆ ಭೇಟಿಕೊಟ್ಟಿದ್ದು, ನಿಖಿಲ್ ಅಭಿಮಾನಿಗಳಿಗೆ ಸಂತಸ ತಂದಿತ್ತು. ನಿಖಿಲ್ ನೋಡಿ ಓಡೋಡಿ ಬಂದ ಜನರು ಜೈಕಾರ ಕೂಗಿದ್ದಾರೆ. ಅಭಿಮಾನಿಗಳ ಜತೆ ಜೆಡಿಎಸ್ ಕಾರ್ಯಕರ್ತರು ನಿಖಿಲ್‌ಗೆ ಭರ್ಜರಿ ಸ್ವಾಗತ ನೀಡಿದ್ರು. ಶಿಳ್ಳೆ –ಚಪ್ಪಾಳೆ ಹೊಡೆದು ಸಂಭ್ರಮಿಸಿದ್ರು. ನಿಖಿಲ್ ವೃತ್ತಿ ಜೀವನದಲ್ಲಿ ಅಭಿನಯಿಸಿರೋ 4ನೇ ಸಿನಿಮಾ ಇದಾಗಿದ್ದು , ಲವರ್ ಬಾಯ್ ಆಗಿ ರೈಡರ್ ಸಖತ್ತಾಗಿ ಮಿಂಚಿದ್ದಾರೆ. ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ..! ನಂಜನಗೂಡಿಗೆ ಬಂದ ನಿಖಿಲ್ ನೇರವಾಗಿ ಮೊದಲು ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟಿದ್ದರು, ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ಕಾಲಕಳೆದ್ರು. ಈ ವೇಳೆ ಸ್ಥಳೀಯ ಕಾರ್ಯಕರ್ತರು ನಿಖಿಲ್‌ಗೆ ಸಾಥ್ ಕೊಟ್ಟಿದ್ದಾರೆ. ಭಾನುವಾರ ಮೈಸೂರಿಗೆ ಭೇಟಿಕೊಟ್ಟಿದ್ದ ನಿಖಿಲ್ & ಟೀಂ ಥಿಯೇಟರ್ ವಿಸಿಟ್ ಮಾಡಿತ್ತು. ಸೋಮವಾರ ಚಾಮುಂಡೇಶ್ವರಿ ದರ್ಶನ ಪಡೆದಿದ್ದ ನಿಖಿಲ್ ನಂತರ ನಂಜನಗೂಡಿಗೆ ತೆರಳಿ ಶ್ರೀಕಂಠೇಶ್ವರನ ದರ್ಶನ ಪಡೆದು ನಂತರ ಸಿನಿಮಾ ವೀಕ್ಷಿಸಿದರು. ಇನ್ನು ನಿಖಿಲ್ ನೋಡಿದ ಜನರು ಸೆಲ್ಫಿಗಾಗಿ ಮುಗಿಬಿದ್ರು. 'ರೈಡರ್‌'ಗೆ ಪೈರಸಿ ಕಾಟ.. 'ರೈಡರ್' ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಇದರ ಜತೆಗೆ 'ರೈಡರ್' ಸಿನಿಮಾಗೆ ಪೈರಸಿ ಪೆಡಂಭೂತ ಕಾಡುತ್ತಿದ್ದು, ಚಿತ್ರದ ಕಲೆಕ್ಷನ್ ಮೇಲೆ ಎಫೆಕ್ಟ್ ಆಗಿದೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಸಾಕಷ್ಟು ಬೇಸರ ಹೊರಹಾಕಿದ್ದು, ಕನ್ನಡಿಗರು ಪೈರಸಿಗೆ ಮಣೆ ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ . ಡಿ.24ರಂದು ನಿಖಿಲ್ ಕುಮಾರಸ್ವಾಮಿ, ಕಾಶ್ಮೇರಾ ಪರದೇಶಿ, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಅಭಿನಯದ 'ರೈಡರ್' ಸಿನಿಮಾ ಬಿಡುಗಡೆಯಾಗಿತ್ತು. ಡ್ಯಾನ್ಸ್, ಫೈಟ್‌ಗಳ ಜೊತೆಗೆ ನಟನೆಯಲ್ಲೂ ನಿಖಿಲ್ ಮಿಂಚಿದ್ದಾರೆ. ನಾಯಕಿ ಕಾಶ್ಮೇರಾ ಸಹಜ ಅಭಿನಯ ಜನರ ಮನಗೆದ್ದಿದೆ. ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಅವರ ಹಾಸ್ಯ ಸಖತ್ ಕಿಕ್ ಕೊಟ್ಟಿದೆ . ಮನರಂಜನೆ, ಸೆಂಟಿಮೆಂಟ್, ಹಾಸ್ಯ ಎಲ್ಲವೂ ತಕ್ಕಮಟ್ಟಿಗೆ ವರ್ಕೌಟ್ ಆಗಿದ್ದು ಚಿತ್ರ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕೆ ಇದೆ. ಈ ಹಿಂದೆ ನಿಖಿಲ್ ಅವರು 'ಕುರುಕ್ಷೇತ್ರ', 'ಜಾಗ್ವಾರ್', 'ಸೀತಾರಾಮ ಕಲ್ಯಾಣ' ಚಿತ್ರ ಮಾಡಿದ್ದಾರೆ.