‘ಅಬ ಜಬ ದಬ’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಸುಧಾರಾಣಿ, ನಿಧಿ ಸುಬ್ಬಯ್ಯ & 'ಬಿಗ್ ಬಾಸ್' ಖ್ಯಾತಿಯ ರಘು

'ಕನ್ನಡ್ ಗೊತ್ತಿಲ್ಲ' ನಂತರ ಮಯೂರ ರಾಘವೇಂದ್ರ ನಿರ್ದೇಶನದ ಎರಡನೇ ಸಿನಿಮಾ ‘ಅಬ ಜಬ ದಬ’ ಈಗ ಸಖತ್ ಸದ್ದು ಮಾಡುತ್ತಿದೆ. ಹಲವು ಕಲಾವಿದರು ನಟಿಸುತ್ತಿದ್ದು, ಈ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ. ಚಿತ್ರದಲ್ಲಿ ಕಲಾವಿದರ ಬಗ್ಗೆ ಹೇಳಿದ್ದಾರೆ.

‘ಅಬ ಜಬ ದಬ’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಸುಧಾರಾಣಿ, ನಿಧಿ ಸುಬ್ಬಯ್ಯ & 'ಬಿಗ್ ಬಾಸ್' ಖ್ಯಾತಿಯ ರಘು
Linkup
ಹರೀಶ್‌ ಬಸವರಾಜ್‌ ಆರ್‌ಜೆಯಾಗಿ ಹಲವರ ಮನ ಗೆದ್ದಿದ್ದ ಅವರು ಕಿರುಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಅದಾದ ಮೇಲೆ ‘ಕನ್ನಡ್‌ ಗೊತ್ತಿಲ್ಲ’ ಎಂಬ ವಿಶಿಷ್ಟ ಸಿನಿಮಾವನ್ನು ನಿರ್ದೇಶನ ಮಾಡಿ ಯಶಸ್ವಿಯಾದರು. ಈಗ ಅವರು ತಮ್ಮ ಎರಡನೇ ಸಿನಿಮಾ ‘’ದ ಸಿದ್ಧತೆಯಲ್ಲಿದ್ದು, ಇದರಲ್ಲಿಅಚ್ಯುತ್‌ ಕುಮಾರ್‌, ಸುಧಾರಾಣಿ, ಮುಖ್ಯಮಂತ್ರಿ ಚಂದ್ರು, ಪಿ.ಡಿ ಸತೀಶ್‌ಚಂದ್ರ, ಮಹಾಂತೇಶ್‌, ಕಥೆಗಾರ ಮತ್ತು ನಿರ್ದೇಶಕ ಅನಿರುದ್ಧ್‌ ಮಹೇಶ್‌, ಬಿಗ್‌ಬಾಸ್‌ ಖ್ಯಾತಿಯ ರಘು ವೈನ್‌ ಸ್ಟೋರ್‌ ಸೇರಿದಂತೆ ಅನೇಕ ಕಲಾವಿದರು ನಟಿಸಲಿದ್ದಾರೆ. ವಿಭಿನ್ನ ಶೀರ್ಷಿಕೆ ‘ಅಬ ಜಬ ದಬ ಫ್ಯಾಂಟಸಿ ಕಾಮಿಡಿ ಸಿನಿಮಾ. ಕನ್ನಡ ಚಿತ್ರರಂಗದಲ್ಲಿಈ ರೀತಿಯ, ಈ ಜಾನರ್‌ನ ಸಿನಿಮಾ ಇದುವರೆಗೂ ಬಂದಿಲ್ಲ. ಅದಕ್ಕಾಗಿಯೇ ಈ ಚಿತ್ರಕ್ಕೂ ವಿಭಿನ್ನ ಟೈಟಲ್‌ ಇಟ್ಟಿದ್ದೇವೆ. ಇದರಲ್ಲಿಹಾಸ್ಯ ಬೇರೆಯದ್ದೇ ರೂಪದಲ್ಲಿರುತ್ತದೆ. ನನ್ನ ಸಿನಿಮಾಗೆ ನಾಯಕ, ನಾಯಕಿಯಷ್ಟೇ ಪ್ರಮುಖವಾಗಿ ಇತರೆಲ್ಲಾಕಲಾವಿದರ ಪಾತ್ರಗಳು ಅವಶ್ಯಕ. ಈ ಸಿನಿಮಾದಲ್ಲಿಸುಧಾರಾಣಿಯವರು ಅಮ್ಮನಾಗಿ, ಅಚ್ಯುತ್‌ ಕುಮಾರ್‌ ಅಪ್ಪನಾಗಿ, ಮುಖ್ಯಮಂತ್ರಿ ಚಂದ್ರು ತಾತನಾಗಿ ನಟಿಸಿದ್ದಾರೆ’ ಎಂದು ನಿರ್ದೇಶಕ ಮಯೂರ ಹೇಳಿದ್ದಾರೆ. ಸ್ವಾರಸ್ಯಕರ ಹೆಸರು ಈ ಸಿನಿಮಾದಲ್ಲಿಹಾಸ್ಯನಟ ಪಿ.ಡಿ ಸತೀಶ್‌ಚಂದ್ರ ಪಾತ್ರವೂ ವಿಶೇಷವಾಗಿದ್ದು, ಆ ಪಾತ್ರಕ್ಕೆ ‘ಬೆಳದಿಂಗಳ ಬಾಲ್‌’ ಎಂಬ ಹೆಸರಿಟ್ಟಿದ್ದೇವೆ. ಅದರ ವಿಶೇಷತೆ ಏನು ಎಂಬುದನ್ನು ತೆರೆಯ ಮೇಲೆ ನೋಡಬೇಕು ಎಂದು ಹೇಳಿರುವ ನಿರ್ದೇಶಕರು, ‘ಇದರಲ್ಲಿ ಪ್ರತಿ ಪಾತ್ರಗಳ ಹೆಸರು ಕೂಡ ಟೈಟಲ್‌ನಷ್ಟೇ ವಿಭಿನ್ನ ಮತ್ತು ಕ್ಯಾಚಿಯಾಗಿದೆ. ‘ಪುಣ್ಯಾತ್ಮ’, ‘ಮಿನುಗುತಾರೆ’, ‘ಮಿನುಗುತಾತಾ’ ಹೀಗೆ ಪ್ರತಿ ಪಾತ್ರಕ್ಕೂ ವಿಶಿಷ್ಟ ಹೆಸರುಗಳನ್ನು ಕೊಟ್ಟಿದ್ದೇವೆ. ಈ ಸಿನಿಮಾ ನೋಡುವ ಜನರು ಬೇರೆಯದ್ದೇ ಲೋಕಕ್ಕೆ ಪಯಣಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ. ನಿರ್ದೇಶನದೊಂದಿಗೆ ನಟನೆ ನಿರ್ದೇಶಕ ಮಯೂರ ರಾಘವೇಂದ್ರ ಅವರು ಈ ಸಿನಿಮಾದಲ್ಲಿ ನಿರ್ದೇಶನದ ಜತೆಗೆ ಪ್ರಮುಖ ಪಾತ್ರವನ್ನು ಕೂಡ ನಿರ್ವಹಿಸುತ್ತಿದ್ದಾರೆ. ನಟಿ ನಿಧಿ ಸುಬ್ಬಯ್ಯ ಅವರು ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಗಿರಿಧರ್‌ ದಿವಾನ್‌ ಸಿನಿಮಾಟೋಗ್ರಫಿ ಮಾಡುತ್ತಿದ್ದು, ಚೆನ್ನೈ ಮೂಲದ ಸತೀಶ್‌ ರಘುನಾಥನ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜನವರಿ 20ರಂದು ಈ ಸಿನಿಮಾದ ಮುಹೂರ್ತ ನಡೆಯಲಿದ್ದು, ಅದಾದ ಮೇಲೆ ಚಿತ್ರೀಕರಣ ಆರಂಭವಾಗಲಿದೆ. ಸಂಕ್ರಾಂತಿ ಹಬ್ಬಕ್ಕೆ ಇದರ ನಾಯಕ ಮತ್ತು ನಾಯಕಿಯ ಅನೌನ್ಸ್‌ಮೆಂಟ್‌ ಮತ್ತು ಫಸ್ಟ್‌ ಲುಕ್‌ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕೋಟ್‌ ಅಬ ಜಬ ದಬ ಕನ್ನಡದ ವಿಭಿನ್ನ ಸಿನಿಮಾ. ಇದರಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು ನಟಿಸುತ್ತಿದ್ದು, ಎಲ್ಲರ ಪಾತ್ರಗಳು ಹಿಂದಿನ ಸಿನಿಮಾಗಿಂತ ವಿಭಿನ್ನವಾಗಿರಲಿವೆ. ಪ್ರೇಕ್ಷಕರಿಗೆ ಬೇರೆಯದ್ದೇ ರೀತಿಯ ಅನುಭವ ನೀಡಲು ಪ್ಲ್ಯಾನ್‌ ಮಾಡಿಕೊಂಡಿದ್ದೇನೆ. -ಮಯೂರ ರಾಘವೇಂದ್ರ, ನಿರ್ದೇಶಕ