ದೇವನಹಳ್ಳಿ: ಕೊರೊನಾ ಗೆದ್ದು ಬಂದ 110 ವರ್ಷದ ವೃದ್ಧೆ; ಭಯಪಡೋರು ಇವರನ್ನು ನೋಡಿ

ಕೊರೊನಾ ಎರಡನೆ ಅಲೆ ಯುವಕರು ವೃದ್ಧರು ಎನ್ನದೆ ಕಳೆದ ಒಂದು ತಿಂಗಳಿನಿಂದ ಅನೇಕರನ್ನು ಬಲಿ ಪಡೆದಿದೆ. ಆದರೆ ದೇವನಹಳ್ಳಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕೊರೊನಾದಿಂದ ದಾಖಲಾಗಿದ್ದ 110 ವರ್ಷಯದ ಅಕ್ಕಯಮ್ಮ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಕೊರೊನಾ ಗೆದ್ದು ಮನೆಗೆ ಬಂದಿದ್ದಾರೆ.

ದೇವನಹಳ್ಳಿ: ಕೊರೊನಾ ಗೆದ್ದು ಬಂದ 110 ವರ್ಷದ ವೃದ್ಧೆ; ಭಯಪಡೋರು ಇವರನ್ನು ನೋಡಿ
Linkup
ದೇವನಹಳ್ಳಿ: ಕೊರೊನಾ ಎರಡನೆ ಅಲೆ ಯುವಕರು ವೃದ್ಧರು ಎನ್ನದೆ ಕಳೆದ ಒಂದು ತಿಂಗಳಿನಿಂದ ಅನೇಕರನ್ನು ಬಲಿ ಪಡೆದಿದೆ. ಆದರೆ ದೇವನಹಳ್ಳಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕೊರೊನಾದಿಂದ ದಾಖಲಾಗಿದ್ದ 110 ವರ್ಷಯದ ಅಕ್ಕಯಮ್ಮ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಕೊರೊನಾ ಗೆದ್ದು ಮನೆಗೆ ಬಂದಿದ್ದಾರೆ. ದೇವನಹಳ್ಳಿ ಪಟ್ಟಣದ ಕೊವಿಡ್‌ ಕೇರ್‌ ಸೆಂಟರ್‌ನಲ್ಲಿ ಅಕ್ಕಯ್ಯಮ್ಮ ಅವರನ್ನು ಬಿಡುಗಡೆ ಮಾಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್‌ ಮಾತನಾಡಿ, ಸ್ಯಾಚುರೇಶನ್‌ 98 ಇದ್ದು ಅವರನ್ನು ಮನೆಗೆ ವಾಪಸ್‌ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಿದರು. ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದ 110 ವರ್ಷದ ವೃದ್ದೆ ಅಕ್ಕಯಮ್ಮಗೆ ಕೊರೊನಾ ಸೊಂಕು ತಗುಲಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಂತೆ ತಹಸೀಲ್ದಾರ್‌ ಅನಿಲ್‌ ಕುಮಾರ್‌ ಅವರು ಕರೆ ಮಾಡಿದ್ದರು. ತಕ್ಷಣ ಆಂಬ್ಯುಲೆನ್ಸ್‌ ಕಳುಹಿಸಿ ಮೇ 22 ರಂದು ಅಕ್ಕಯ್ಯಮ್ಮ ಅವರನ್ನು ದಾಖಲು ಮಾಡಿಕೊಂಡೆವು ಎಂದರು. ಅಲ್ಲದೇ ಅವರಿಗೆ ಉಸಿರಾಟದ ಸಮಸ್ಯೆ ಇದ್ದು ಅವರನ್ನು ವೆಂಟಿಲೇರ್‌ನಲ್ಲಿಟ್ಟು ಚಿಕಿತ್ಸೆ ನಿಡುತ್ತಿದ್ದೆವು. ಅವರು ಸಹ ಚಿಕಿತ್ಸೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಅವರಿಗೆ ಬಿಪಿ, ಶುಗರ್‌ ಯಾವುದೇ ಕಾಯಿಲೆಗಳಿಲ್ಲ. ಆತಂಕ, ಭಯವಿಲ್ಲ ಹೀಗಾಗಿ ಅವರು ಶೀಘ್ರವಾಗಿ ಗುಣಮುಖರಾಗಿದ್ದಾರೆ. ವೈದ್ಯರು ಹಾಗೂ ಸ್ಟಾಪ್‌ ನರ್ಸ್‌ಗಳು ವಯಸ್ಸಾಗಿದ್ದರಿಂದ ಹೆಚ್ಚು ಗಮನ ಹರಿಸಿ ಚಿಕಿತ್ಸೆ ನೀಡಿದ್ದಾರೆ. ಇವರು ಇತರಿಗೆ ಮಾದರಿಯಾಗಿದ್ದಾರೆ. ಕೊರೊನಾ ಬಂದಾಕ್ಷಣ ಜನರು ಭಯಪಡುವ ಅವಶ್ಯಕತೆ ಇಲ್ಲ. ಸಕಾಲಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ. ಅದಕ್ಕೆ ನಿದರ್ಶನ ಅಕ್ಕಯ್ಯಮ್ಮ ಎಂದರು.