ದತ್ತು ಪಡೆದ ಗ್ರಾಮಗಳ ಜನರಿಗೆ ಕೊರೊನಾ ವ್ಯಾಕ್ಸಿನ್ ಕೊಡಿಸಲು ಮುಂದಾದ ನಟ ಮಹೇಶ್ ಬಾಬು

ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಹೆಚ್ಚಾಗಿದೆ. ಪ್ರತಿದಿನ ಲಕ್ಷಾಂತರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಮಧ್ಯೆ ಕೊರೊನಾವನ್ನು ಮಣಿಸಲು ವ್ಯಾಕ್ಸಿನ್‌ ತೆಗೆದುಕೊಳ್ಳುವುದು ಅವಶ್ಯವಾಗಿದೆ. ಇದೀಗ ನಟ ಮಹೇಶ್ ಬಾಬು ವ್ಯಾಕ್ಸಿನ್‌ ಕುರಿತಂತೆ ಸುದ್ದಿಯಾಗಿದ್ದಾರೆ.

ದತ್ತು ಪಡೆದ ಗ್ರಾಮಗಳ ಜನರಿಗೆ ಕೊರೊನಾ ವ್ಯಾಕ್ಸಿನ್ ಕೊಡಿಸಲು ಮುಂದಾದ ನಟ ಮಹೇಶ್ ಬಾಬು
Linkup
ದೇಶಾದ್ಯಂತ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಮಹಾಮಾರಿ ವಿರುದ್ಧ ಹೋರಾಡೋಕೆ ವ್ಯಾಕ್ಸಿನ್ ಕೂಡ ಒಂದು ಅಸ್ತ್ರ. ಈಗಾಗಲೇ ದೇಶದಲ್ಲಿ 60 ವರ್ಷ ಮತ್ತು 45 ಮೇಲ್ಪಟ್ಟವರಿಗೆ ನೀಡುವ ಅಭಿಯಾನ ಆರಂಭಗೊಂಡಿದೆ. 18 ಮೇಲ್ಪಟ್ಟವರಿಗೂ ಲಸಿಕೆ ನೀಡುವ ಅಭಿಯಾನ ಕೂಡ ಶುರುವಾಗಿತ್ತು. ಸದ್ಯ ಲಸಿಕೆಯ ಅಭಾವ ಉಂಟಾಗಿದೆ. ಪರಿಸ್ಥಿತಿ ಹೀಗಿರುವಾಗ ನಟ ಪ್ರಿನ್ಸ್‌ ಮಾತ್ರ ಎರಡು ಗ್ರಾಮಗಳ ಜನರಿಗ ಹೇಗಾದರೂ ಮಾಡಿ, ಲಸಿಕೆ ಒದಗಿಸಿ, ಜನರನ್ನು ಕೊರೊನಾದಿಂದ ಕಾಪಾಡುವುದಕ್ಕೆ ಮುಂದಾಗಿದ್ದಾರೆ. ಎರಡು ಗ್ರಾಮಗಳನ್ನು ದತ್ತು ಪಡೆದಿರುವ ಪ್ರಿನ್ಸ್ 'ಪ್ರಿನ್ಸ್' ಮಹೇಶ್ ಬಾಬು ಹಲವು ವರ್ಷಗಳ ಹಿಂದೆಯೇ ಆಂಧ್ರ ಪ್ರದೇಶದ ಬುರ್ರಿಪಾಲೇಂ ಮತ್ತು ಸಿದ್ದಪುರಂ ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದರು. ಅದರಲ್ಲೂ ಬುರ್ರಿಪಾಲೇಂ, ಮಹೇಶ್‌ ಬಾಬು ಅವರ ತಂದೆ 'ಸೂಪರ್ ಸ್ಟಾರ್‌' ಕೃಷ್ಣ ಅವರ ಹುಟ್ಟೂರು. ಈ ಎರಡು ಗ್ರಾಮಗಳನ್ನು ದತ್ತು ಪಡೆದ ಮೇಲೆ ಮಹೇಶ್, ಅಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಇದೀಗ ಆ ಎರಡು ಗ್ರಾಮಗಳ ಜನರಿಗೆ ಕೊರೊನಾ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡಲು ಮಹೇಶ್ ಮುಂದಾಗಿದ್ದಾರೆ. ಅದಕ್ಕಾಗಿ ಸರ್ಕಾರಿ ಅಧಿಕಾರಿಗಳ ನೆರವು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು, ಸಿನಿಮಾ ವಿಷಯಕ್ಕೆ ಬರುವುದಾದರೆ ಅವರ 'ಸರ್ಕಾರು ವಾರಿ ಪಾಟ' ಸಿನಿಮಾದ ಶೂಟಿಂಗ್ ಈಚೆಗೆ ಹೈದರಾಬಾದ್‌ನಲ್ಲಿ ನಡೆಯುತ್ತಿತ್ತು. ಆದರೆ ಚಿತ್ರೀಕರಣ ತಂಡದಲ್ಲಿದ್ದ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಶೂಟಿಂಗ್ ನಿಲ್ಲಿಸಲಾಗಿದೆ. 'ಗೀತಾ ಗೋವಿಂದಂ' ಖ್ಯಾತಿಯ ಪರಶುರಾಮ್‌ ಇದರ ನಿರ್ದೇಶಕರು. ಕೀರ್ತಿ ಸುರೇಶ್ ಮಹೇಶ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಜೊತೆಗೂ ಮಹೇಶ್ ಬಾಬು ಒಂದು ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆ.