ತಮಿಳುನಾಡಿನಲ್ಲಿ ಲಾಕ್‌ಡೌನ್ ಒಂದು ವಾರ ವಿಸ್ತರಣೆ: ನಿಯಮಗಳು ಮತ್ತಷ್ಟು ಕಠಿಣ

ತಮಿಳುನಾಡಿನಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್ ಅನ್ನು ಅಲ್ಲಿನ ಸರ್ಕಾರ ಮತ್ತೆ ಒಂದು ವಾರ ವಿಸ್ತರಿಸಿದೆ. ಮೇ 24ರಂದು ಹಿಂದಿನ ಲಾಕ್‌ಡೌನ್ ಮುಕ್ತಾಯಗೊಳ್ಳುತ್ತಿತ್ತು. ಈಗ ಭಾನುವಾರ ರಾತ್ರಿಯಿಂದಲೇ ಇನ್ನಷ್ಟು ಕಠಿಣ ಲಾಕ್‌ಡೌನ್ ಜಾರಿಯಾಗುತ್ತಿದೆ.

ತಮಿಳುನಾಡಿನಲ್ಲಿ ಲಾಕ್‌ಡೌನ್ ಒಂದು ವಾರ ವಿಸ್ತರಣೆ: ನಿಯಮಗಳು ಮತ್ತಷ್ಟು ಕಠಿಣ
Linkup
ಚೆನ್ನೈ: ರಾಜ್ಯದಲ್ಲಿನ ಸಂಪೂರ್ಣ ಅನ್ನು ಇನ್ನೂ ಒಂದು ವಾರದ ಮಟ್ಟಿಗೆ ಸರ್ಕಾರ ವಿಸ್ತರಣೆ ಮಾಡಿದೆ. ಪ್ರಸ್ತುತ ಇರುವ ಲಾಕ್‌ಡೌನ್ ಮೇ 24ರ ಸೋಮವಾರ ಅಂತ್ಯಗೊಳ್ಳಲಿದ್ದು, ಭಾನುವಾರದಿಂದಲೇ ಅನ್ವಯವಾಗುವಂತೆ ಶನಿವಾರ ಹೊಸ ಆದೇಶ ಹೊರಡಿಸಲಾಗಿದೆ. ಹೊಸ ಆದೇಶದಲ್ಲಿ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಅಂಗಡಿಗಳು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯವರೆಗೂ ತೆರೆದಿರಲಿವೆ. ಜನರು ಈ ವೇಳೆಯಲ್ಲಿ ಒಂದು ವಾರಕ್ಕೆ ಬೇಕಾದ ದಿನಸಿ ಸಾಮಗ್ರಿಗಳನ್ನು ಖರೀದಿಸಬೇಕಾಗುತ್ತದೆ. ಸ್ಥಳೀಯ ಸಂಸ್ಥೆ ಜಾಲದ ಮೂಲಕ ಸಂಚಾರಿ ಅಂಗಡಿಗಳು ಹಣ್ಣು ಮತ್ತು ತರಕಾರಿಗಳನ್ನು ರಾಜ್ಯಾದ್ಯಂತ ತಲುಪಿಸಲು ಸಹಾಯ ಮಾಡಲಿವೆ. ರಾಜ್ಯದಲ್ಲಿನ ಎಲ್ಲ ಮಾಲ್‌ಗಳನ್ನೂ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಬ್ಯಾಂಕ್‌ಗಳು, ಖಾಸಗಿ ಕಚೇರಿಗಳು ವರ್ಕ್ ಫ್ರಂ ಹೋಮ್ ಮಾದರಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ಸರ್ಕಾರ ತಿಳಿಸಿದೆ. ಜಿಲ್ಲೆಗಳ ಒಳಗೆ ವೈದ್ಯಕೀಯ ಪ್ರಯಾಣಕ್ಕಾಗಿ ಯಾವುದೇ ಇ-ನೋಂದಣಿ ಅಗತ್ಯವಿಲ್ಲ. ಆದರೆ ಜಿಲ್ಲೆಗಳ ನಡುವಿನ ವೈದ್ಯಕೀಯ ಪ್ರಯಾಣಕ್ಕಾಗಿ ಇ-ನೋಂದಣಿ ಪಾಸ್ ಅಗತ್ಯವಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಖಾದ್ಯ ಸೇವನೆಗೆ ಅವಕಾಶವಿಲ್ಲ. ಬೆಳಿಗ್ಗೆ 6-10, ಮಧ್ಯಾಹ್ನ 12-3 ಮತ್ತು ಸಂಜೆ 6-9ರವರೆಗಿನ ಅವಧಿಗಳಲ್ಲಿ ಮಾತ್ರ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ಪೂರೈಕೆಗೆ ಅವಕಾಶ ನೀಡಲಾಗಿದೆ.