ಚಿನ್ನಾಭರಣ ಲೇವಾದೇವಿ ಕಂಪನಿಗೇ ನಕಲಿ ಚಿನ್ನ ನೀಡಿ ನಾಮ ಹಾಕಿದ ಖತರ್ನಾಕ್ ದಂಪತಿ..!

ಆರೋಪಿ ತ್ಯಾಗರಾಜು, ಭರತ್ ಅವರಿಂದ ಹಣ ಪಡೆದುಕೊಂಡು ಚಿನ್ನಾಭರಣ ಬಿಡಿಸಿಕೊಂಡು ಬರುವುದಾಗಿ ಒಳಗೆ ಹೋಗಿದ್ದಾರೆ. ಇದಾದ 10 ನಿಮಿಷದ ಬಳಿಕ ತ್ಯಾಗರಾಜ್‌ ಪತ್ನಿ ಹೊರಬಂದು ಚಿನ್ನ ಕೊಟ್ಟು, ನಿಮ್ಮ ಕಚೇರಿಯಲ್ಲೇ ವ್ಯವಹರಿಸೋಣ ಎಂದು ಹೇಳಿದ್ದಾರೆ. ಆದ್ರೆ ಅವರು ಕೊಟ್ಟ ಚಿನ್ನ ನಕಲಿ ಅನ್ನೋದು ನಂತರ ಬೆಳಕಿಗೆ ಬಂದಿದೆ.

ಚಿನ್ನಾಭರಣ ಲೇವಾದೇವಿ ಕಂಪನಿಗೇ ನಕಲಿ ಚಿನ್ನ ನೀಡಿ ನಾಮ ಹಾಕಿದ ಖತರ್ನಾಕ್ ದಂಪತಿ..!
Linkup
: ಬೆನಕ ಗೋಲ್ಡ್‌ ಕಂಪನಿಗೆ ಬಂದ , ಮಣಪ್ಪುರಂನಲ್ಲಿ ಅಡವಿಟ್ಟ ಬಿಡಿಸಿಕೊಡುವಂತೆ ಹೇಳಿ ಕೊನೆಗೆ ಕೊಟ್ಟು 1.15 ಲಕ್ಷ ರೂ. ವಂಚಿಸಿ ಪರಾರಿಯಾಗಿದ್ದಾರೆ. ಬೆನಕ ಗೋಲ್ಡ್‌ ಕಂಪನಿಯ ಸಿಬ್ಬಂದಿ ಭರತ್‌ ನೀಡಿದ ದೂರಿನ ಆಧಾರದ ಮೇರೆಗೆ ಕುರುಬರಹಳ್ಳಿ ನಿವಾಸಿ ತ್ಯಾಗರಾಜು (31) ಹಾಗೂ ಅವರ ಪತ್ನಿ ವಿರುದ್ಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆನಕ ಗೋಲ್ಡ್‌ ಕಂಪನಿಯ ನಾಗರಬಾವಿ ಶಾಖೆಗೆ ಜುಲೈ 27ರಂದು ತ್ಯಾಗರಾಜ್‌, ಅವರ ಪತ್ನಿ ಮತ್ತು ಮಗ ಬಂದು ಹಣದ ಅವಶ್ಯಕತೆಯಿದೆ ಎಂದಿದ್ದರು. ನಮ್ಮ ಚಿನ್ನಾಭರಣವನ್ನು ಅಂಜನಾ ನಗರದ ಮಣಪ್ಪುರಂ ಶಾಖೆಯಲ್ಲಿ ಅಡವಿಟ್ಟಿದ್ದೇವೆ. ನೀವು ಒಡವೆ ಬಿಡಿಸಿ, ನಮಗೆ ಉಳಿದ ಹಣ ನೀಡಿ ಎಂದು ಕೇಳಿಕೊಂಡರು. ಅವರ ಮಾತನ್ನು ನಂಬಿ ಕಂಪನಿಯ 1.15 ಲಕ್ಷ ರೂ. ತೆಗೆದುಕೊಂಡು ಅಂಜನಾ ನಗರ ಮಣಪ್ಪುರಂ ಶಾಖೆ ಬಳಿ ಭರತ್ ಹೋಗಿದ್ದಾರೆ. ಈ ವೇಳೆ ಆರೋಪಿ ತ್ಯಾಗರಾಜು, ಭರತ್ ಅವರಿಂದ ಹಣ ಪಡೆದುಕೊಂಡು ಚಿನ್ನಾಭರಣ ಬಿಡಿಸಿಕೊಂಡು ಬರುವುದಾಗಿ ಒಳಗೆ ಹೋಗಿದ್ದಾರೆ. ಇದಾದ 10 ನಿಮಿಷದ ಬಳಿಕ ತ್ಯಾಗರಾಜ್‌ ಪತ್ನಿ ಹೊರಬಂದು ಕೊಟ್ಟು, ನಿಮ್ಮ ಕಚೇರಿಯಲ್ಲೇ ವ್ಯವಹರಿಸೋಣ ಎಂದು ಹೇಳಿದ್ದಾರೆ. ಇದಾದ ಬಳಿಕ ತ್ಯಾಗರಾಜ್‌ ಹಾಗೂ ಅವರ ಪತ್ನಿ ಬೆನಕ ಗೋಲ್ಡ್‌ ಕಂಪನಿಗೆ ತಮ್ಮ ವ್ಯವಹಾರ ಮುಂದುವರೆಸಲು ಬರಲಿಲ್ಲ. ಈ ವೇಳೆ ಅವರು ನೀಡಿದ್ದ 32 ಗ್ರಾಂ ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಚಿನ್ನ ಎಂಬುದು ತಿಳಿದುಬಂದಿದೆ ಎಂದು ಭರತ್‌ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.