ಬೆಂಗಳೂರು ಜಿಕೆವಿಕೆಯಲ್ಲಿ 380 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಆರೈಕೆ ಕೇಂದ್ರ, ಬಿ.ಸಿ ಪಾಟೀಲ್

ಬೆಂಗಳೂರು ಜಿಕೆವಿಕೆಯಲ್ಲಿ 380 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಸ್ವರೂಪದಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಆರೈಕೆ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ.

ಬೆಂಗಳೂರು ಜಿಕೆವಿಕೆಯಲ್ಲಿ 380 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಆರೈಕೆ ಕೇಂದ್ರ, ಬಿ.ಸಿ ಪಾಟೀಲ್
Linkup
ಬೆಂಗಳೂರು:ಬೆಂಗಳೂರು ಜಿಕೆವಿಕೆಯ ವಿದ್ಯಾರ್ಥಿನಿ ನಿಲಯವನ್ನು ಕೋವಿಡ್-19 ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಬಿಬಿಎಂಪಿಯ ಕೋರಿಕೆ ಮೇರೆಗೆ ಯಲಹಂಕ ವಲಯದಿಂದ ಕೋವಿಡ್ -19 ಆರೈಕೆ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದ ಕಟ್ಟಡದಲ್ಲಿ ಸ್ಥಾಪಿಸಲಾಗುತ್ತಿದೆ‌. ಪ್ರಕೃತಿ ವಿಕೋಪ ಅಧಿನಿಯಮ 2005 ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅಧಿನಿಯಮದಡಿಯಲ್ಲಿ ಪ್ರಸ್ತಾಪಿತ ಕಟ್ಟಡವನ್ನು ಕೃಷಿ ಸಚಿವರ ಸೂಚನೆ ಮೇರೆಗೆ ಪಾಲಿಕೆಯ ಯಲಹಂಕ ವಲಯಕ್ಕೆ ಹಸ್ತಾಂತರಿಸಲಾಗಿದೆ. ಜಿಕೆವಿಕೆಯ ಈ ವಿದ್ಯಾರ್ಥಿನಿ ನಿಲಯವು ಕೋವಿಡ್ ಸೋಂಕಿತರ ಆರೈಕೆಗಾಗಿ ಸುಮಾರು 380 ಬೆಡ್‌ಗಳ ಸಾಮರ್ಥ್ಯವನ್ನು ಹೊಂದಿದೆ.ಅಲ್ಲದೇ 30 ಹಾಸಿಗೆ ಸಾಮರ್ಥ್ಯವುಳ್ಳ "ಇಂಟರ್‌ನ್ಯಾಷನಲ್ ಸ್ಟಾಫ್ ಕ್ವಾರ್ಟ್ರ್ಸಸ್‌" ಅನ್ನು ಕೋವಿಡ್ ವಾರಿಯರ್ಸ್‌ ಅಂದರೆ ವೈದ್ಯಕೀಯ ಸಿಬ್ಬಂದಿಗಳಿಗಾಗಿ ಮೀಸಲಿಡಲಾಗಿದೆ. ಕಳೆದ ಬಾರಿಯೂ ಸಹ ಬೆಂಗಳೂರು ಜಿಕೆವಿಕೆಯಲ್ಲಿ ಕೋವಿಡ್ ಆರೈಕೆಗಾಗಿ ವಿದ್ಯಾರ್ಥಿನಿ ನಿಲಯವನ್ನು ನೀಡಲಾಗಿತ್ತು.ಇದಕ್ಕಾಗಿ ಕೃಷಿ ಸಚಿವ ಬಿ.ಸಿ.ಪಾಟೀಲರು ಬೆಂಗಳೂರು ಜಿಕೆವಿಕೆ ಉಪಕುಲಪತಿ ರಾಜೇಂದ್ರಪ್ರಸಾದ್ ಹಾಗೂ ಬಿಬಿಎಂಪಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.