ಕೇರಳದಲ್ಲಿ ಒಂದೇ ದಿನ 23,676 ಮಂದಿಗೆ ಕೋವಿಡ್ ಸೋಂಕು: 2 ತಿಂಗಳಲ್ಲಿಯೇ ರಾಜ್ಯವೊಂದರಲ್ಲಿ ಗರಿಷ್ಠ ಪ್ರಕರಣ

ನೆರೆಯ ಕೇರಳದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಮಂಗಳವಾರ ಒಂದೇ ದಿನ 23,676 ಮಂದಿಗೆ ಕೊರೊನಾ ವೈರಸ್ ಸೊಂಕು ತಗುಲಿದೆ. ಇದು ಎರಡು ತಿಂಗಳಲ್ಲಿ ರಾಜ್ಯವೊಂದರಲ್ಲಿ ದಾಖಲಾದ ಅತ್ಯಧಿಕ ಪ್ರಕರಣವಾಗಿದೆ.

ಕೇರಳದಲ್ಲಿ ಒಂದೇ ದಿನ 23,676 ಮಂದಿಗೆ ಕೋವಿಡ್ ಸೋಂಕು: 2 ತಿಂಗಳಲ್ಲಿಯೇ ರಾಜ್ಯವೊಂದರಲ್ಲಿ ಗರಿಷ್ಠ ಪ್ರಕರಣ
Linkup
ತಿರುವನಂತಪುರಂ: ಕೇರಳದಲ್ಲಿ ಮಂಗಳವಾರ 23,676 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಎರಡು ತಿಂಗಳಿನಲ್ಲಿಯೇ ರಾಜ್ಯವೊಂದರಲ್ಲಿ ಒಂದು ದಿನ ವರದಿಯಾದ ಅತ್ಯಧಿಕ ಪ್ರಕರಣಗಳ ಸಂಖ್ಯೆಯಾಗಿದೆ. ವರದಿ ಮಾಡಿರುವ ಈ ಪ್ರಕರಣಗಳಿಂದಾಗಿ ದೇಶದಲ್ಲಿ 30,000ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾದ ಮರುದಿನವೇ ಮತ್ತೆ ದೈನಂದಿನ ಪ್ರಕರಣಗಳ ಸಂಖ್ಯೆ 42 ಸಾವಿರ ದಾಟಿದೆ. ಕೇರಳದಲ್ಲಿ ವಾರಾಂತ್ಯದಲ್ಲಿ ಇಳಿಕೆಯಾಗಿದ್ದ ಕೊರೊನಾ ವೈರಸ್ ಪ್ರಕರಣಗಳು, ಮಂಗಳವಾರ ಏಕಾಏಕಿ ಏರಿಕೆಯಾಗಿದೆ. ಮೇ 27ರ ಬಳಿಕ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದ್ದರೆ, ದೇಶದ ಯಾವುದೇ ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ವರದಿಯಾದ ಅತ್ಯಧಿಕ ಪ್ರಕರಣ ಇದಾಗಿದೆ. ಜೂನ್ 3ರಂದು ತಮಿಳುನಾಡಿನಲ್ಲಿ 24,405 ಪ್ರಕರಣಗಳು ದಾಖಲಾಗಿದ್ದವು. ಬುಧವಾರ ಬೆಳಿಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 42,625 ಹೊಸ ವರದಿಯಾಗಿವೆ. ಮಂಗಳವಾರಕ್ಕೆ ಹೋಲಿಸಿದರೆ ಒಟ್ಟಾರೆ ಪ್ರಕರಣಗಳಲ್ಲಿ ಸುಮಾರು ಶೇ 40ರಷ್ಟು ಏರಿಕೆಯಾಗಿದೆ. ಆದರೂ ಕಳೆದ ವಾರದ ಪ್ರಕರಣಗಳಿಗೆ ಹೋಲಿಸಿದರೆ ಈ ವಾರ ಒಟ್ಟಾರೆ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆ ಇದೆ ಎನ್ನುವುದೇ ಸಮಾಧಾನಕರ ಸಂಗತಿ. ಬೇರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಇದೆ. ಆದರೆ ಕೇರಳ ಮಾತ್ರ ಅಧಿಕ ಪ್ರಕರಣಗಳನ್ನು ದಾಖಲಿಸುತ್ತಲೇ ಇದೆ. ಮಂಗಳವಾರ ರಾಷ್ಟ್ರೀಯ ಪ್ರಕರಣಗಳಲ್ಲಿ ಕೇರಳದ ಪಾಲು ಶೇ 56ರಷ್ಟಿದೆ. ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಶೇ 11.8ರಷ್ಟು ಇದೆ. ಮಂಗಳವಾರ 148 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 17,103ಕ್ಕೆ ಏರಿಕೆಯಾಗಿದೆ.