ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಕುಸಿತ: ಆ.18ರಂದು ಯಾವ ಕರೆನ್ಸಿಗೆ ಎಷ್ಟು ಮೌಲ್ಯ?

ವಿಶ್ವದ ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಮೌಲ್ಯದಲ್ಲಿ ಬುಧವಾರ ಶೇ.8-10ರಷ್ಟು ಕುಸಿತ ಕಂಡಿದೆ. ಅಮೆರಿಕನ್‌ ಡಾಲರ್‌ ಬೆಲೆಯಲ್ಲಿ ಕುಸಿತ ಕಂಡ ಬೆನ್ನಲ್ಲೇ ಯುಎಸ್‌ಡಿ ಕಾಯಿನ್ ಬೆಲೆ ಕೂಡ ಇಳಿಕೆಯಾಗಿದೆ.

ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಕುಸಿತ: ಆ.18ರಂದು ಯಾವ ಕರೆನ್ಸಿಗೆ ಎಷ್ಟು ಮೌಲ್ಯ?
Linkup
ಹೊಸದಿಲ್ಲಿ: ವಿಶ್ವದ ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಮೌಲ್ಯದಲ್ಲಿ ಬುಧವಾರ ಶೇ.8-10ರಷ್ಟು ಕುಸಿತ ಕಂಡಿದೆ. ಅಮೆರಿಕನ್‌ ಡಾಲರ್‌ ಬೆಲೆಯಲ್ಲಿ ಕುಸಿತ ಕಂಡ ಬೆನ್ನಲ್ಲೇ ಯುಎಸ್‌ಡಿ ಕಾಯಿನ್ ಬೆಲೆ ಕೂಡ ಇಳಿಕೆಯಾಗಿದೆ. ಇದರೊಂದಿಗೆ ವಿಶ್ವದ ಟಾಪ್‌ 10 ಕ್ರಿಪ್ಟೋ ಕರೆನ್ಸಿ ಮೌಲ್ಯದಲ್ಲೂ ಭಾರೀ ಇಳಿಕೆಯಾಗಿದೆ. ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಗಾತ್ರ 2 ಟ್ರಿಲಿಯನ್‌ ಡಾಲರ್‌ಗಿಂತಲೂ ಒಳಗೆ ಬಂದಿದೆ. ಕಳೆದ ಒಂದು ದಿನದಲ್ಲಿ ಶೇ.5ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಆದರೂ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯ ಒಟ್ಟು ಮೌಲ್ಯ 127.11 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. ವಿಶ್ವಾದ್ಯಂತ ಪರಿಚಿತವಾಗಿರುವ ಮೌಲ್ಯದಲ್ಲಿ ಕೂಡ ಅಸ್ಥಿರತೆ ಉಂಟಾಗಿದೆ. ಇಥೆರಿಯಮ್, ಬಿನಾನ್ಸ್‌ ಕಾಯಿನ್‌, ಎಕ್ಸ್‌ಆರ್‌ಪಿ, ಮತ್ತು ಕರ್ಡಾನೋ ಕ್ರಿಪ್ಟೋ ಕರೆನ್ಸಿಗಳು ಕೂಡ ನಷ್ಟ ಹೊಂದಿವೆ. ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳು ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಕಳೆದುಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಆಗಸ್ಟ್‌ 18ರಂದು ಅವುಗಳ ಮೌಲ್ಯ ಹೀಗಿದೆ.
  • ಬಿಟ್‌ಕಾಯಿನ್‌: $45,038.10
  • ಇಥೆರಿಯಂ: $3,039.61
  • ಬಿನಾನ್ಸ್‌ ಕಾಯಿನ್‌ ಬಿಎನ್‌ಬಿ: $396.30
  • ಟೆಥರ್‌: $1
  • ಕಾರ್ಡಾನೋ: $1.98
  • ಡೊಜೆಕಾಯಿನ್‌: $0.29
  • ಎಕ್ಸ್‌ಆರ್‌ಪಿ: $1.11
  • ಪೊಲ್‌ಕಾಡಾಟ್‌: $23.96
  • ಯುಎಸ್‌ಡಿ ಕಾಯಿನ್‌: $1
  • ಸೊಲಾನಾ: $66.23