ಸ್ವಚ್ಛ ಇಂಧನ ಹೆಚ್ಚಳಕ್ಕೆ ಸಿದ್ಧತೆ: ಕರಡು ನಿಯಮಾವಳಿ ಹೊರಡಿಸಿದ ವಿದ್ಯುತ್‌ ಇಲಾಖೆ!

ದೇಶದಲ್ಲಿ ಸ್ವಚ್ಛ ಇಂಧನ ಅಥವಾ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ವಿದ್ಯುತ್‌ ಸಚಿವಾಲಯ ಕರಡು ನಿಯಮಾವಳಿಗಳನ್ನು ಹೊರಡಿಸಿದೆ. ಹಾಗೂ ಸಂಬಂಧಿಸಿದ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಸ್ವಚ್ಛ ಇಂಧನ ಹೆಚ್ಚಳಕ್ಕೆ ಸಿದ್ಧತೆ: ಕರಡು ನಿಯಮಾವಳಿ ಹೊರಡಿಸಿದ ವಿದ್ಯುತ್‌ ಇಲಾಖೆ!
Linkup
ಹೊಸದಿಲ್ಲಿ: ದೇಶದಲ್ಲಿ ಅಥವಾ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ವಿದ್ಯುತ್‌ ಸಚಿವಾಲಯ ಕರಡು ನಿಯಮಾವಳಿಗಳನ್ನು ಹೊರಡಿಸಿದೆ. ಹಾಗೂ ಸಂಬಂಧಿಸಿದ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಹಾಗಾದರೆ ಇದರಲ್ಲಿ ಏನೇನಿದೆ? ಇದರ ಉದ್ದೇಶ ಏನು? ಇಲ್ಲಿದೆ ವಿವರ. ಸ್ವಚ್ಛ ಇಂಧನ ನೀತಿಯ ಕರಡು ವಿದ್ಯುತ್‌ ಸಚಿವಾಲಯವು ನೂತನ ನೀತಿಯ ಮೂಲಕ ಸ್ವಚ್ಛ ಇಂಧನ ಅಥವಾ ನವೀಕರಿಸಬಹುದಾದ ಇಂದನ ಉತ್ಪಾದನೆ ಹೆಚ್ಚಿಸಲು ''ಕರಡು ವಿದ್ಯುತ್‌ (ಹಸಿರು ಇಂಧನ ಉತ್ಪಾದನೆಗೆ ಅನುಮತಿ ನೀಡುವ ಮೂಲಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ) ನಿಯಮಾವಳಿ-2021 ಅನ್ನು ಹೊರಡಿಸಿದೆ. 30 ದಿನಗಳೊಳಗೆ ಅಭಿಪ್ರಾಯಗಳನ್ನು ಇಲಾಖೆ ನಿರೀಕ್ಷಿಸಿದೆ. ಉದ್ದೇಶವೇನು? ನಾನಾ ಮೂಲಗಳಿಂದ ಸ್ವಚ್ಛ ಇಂಧನದ ಖರೀದಿ ಮತ್ತು ಬಳಕೆಯನ್ನು ಹೆಚ್ಚಿಸಲು ನಿಯಮಾವಳಿ ಕಲ್ಪಿಸುವ ಉದ್ದೇಶವನ್ನು ಕರಡು ವಿದ್ಯುತ್‌ ನಿಯಮಾವಳಿ-2021 ಹೊಂದಿದೆ. ವಿದ್ಯುತ್‌ ವಿತರಣೆಯಲ್ಲಿ ಸುಧಾರಣೆ ಮತ್ತು ಎಲೆಕ್ಟ್ರಿಸಿಟಿ ಗ್ರಿಡ್‌ಗಳಿಗೆ ಮುಕ್ತ ಸಂಪರ್ಕ ಕಲ್ಪಿಸುವುದರಿಂದ ನವೀಕರಿಸಬಹುದಾದ ವಿದ್ಯುತ್‌ ಖರೀದಿ ಮತ್ತು ಬಳಕೆ ವೃದ್ಧಿಸುವ ಸಾಧ್ಯತೆ ಇದೆ. ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್‌ ಖರೀದಿಸಲು ಅವಕಾಶ ಸೃಷ್ಟಿಯಾಗುತ್ತದೆ. ನವೀಕರಿಸಬಹುದಾದ ಇಂಧನ ಖರೀದಿ ಬದ್ಧತೆ (ರಿನ್ಯುವೆಬಲ್‌ ಪರ್ಚೇಸ್‌ ಒಬ್ಲಿಗೇಷನ್‌), ನೋಡಲ್‌ ಏಜೆನ್ಸಿ ರಚನೆ, ಸ್ವಚ್ಛ ಇಂಧನ ಉತ್ಪಾದನೆಗೆ ಅನುಮತಿ ಪ್ರಕ್ರಿಯೆ, ಬ್ಯಾಂಕಿಂಗ್‌ ಮತ್ತು ಕ್ರಾಸ್‌ ಸಬ್ಸಿಡಿ ಸರ್ಚಾರ್ಜ್‌, ದರ ನಿಗದಿ ಇತ್ಯಾದಿ ವಿಷಯಗಳನ್ನು ರೂಪಿಸುವ ಉದ್ದೇಶ ಒಳಗೊಂಡಿದೆ. ದರ ನಿಗದಿಗೆ ಆಯೋಗ ನವೀಕರಿಸಬಹುದಾದ ಇಂಧನಗಳ ದರ ನಿಗದಿಗೆ ಸಂಬಂಧಿಸಿ ಆಯೋಗ ರಚನೆ ಸೂಕ್ತ ಎಂದು ಕರಡು ನಿಯಮಾಳಿ ಪ್ರಸ್ತಾಪಿಸಿದೆ. ಖರೀದಿಯ ವೆಚ್ಚ, ಕ್ರಾಸ್‌ ಸಬ್ಸಿಡಿ ಶುಲ್ಕ, ವಿತರಣೆ ವೆಚ್ಚ ಇತ್ಯಾದಿಗಳನ್ನು ಪರಿಗಣಿಸಿ ಆಯೋಗ ದರ ನಿರ್ಧರಿಸಬಹುದು ಎಂದಿದೆ. ಹೈಡ್ರೋಜನ್‌ ಇಂಧನ: ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುವ ಹೂಡ್ರೋಜನ್‌ ಅನ್ನು ಕರಡು ನಿಯಮಾವಳಿ ಪರಿಗಣಿಸಿದೆ. ಸ್ವಚ್ಛ ಇಂಧನ ಬಳಕೆ ಬಯಸುವ ಗ್ರಾಹಕರಿಗೆ ಅದರ ಲಭ್ಯತೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪವನ್ನೂ ಹೊಂದಿದೆ. 450 ಗಿಗಾವ್ಯಾಟ್‌ ಉತ್ಪಾದನೆಯ ಗುರಿ: ಭಾರತವು 2030ರ ವೇಳೆಗೆ 450 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಿದೆ.