ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆ: 2 ತಿಂಗಳಲ್ಲಿ ₹5000 ಹೆಚ್ಚಳ

2021ರ ಆರಂಭದಲ್ಲಿ ಇಳಿಕೆಯ ಹಾದಿ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರತೊಡಗಿದೆ. ಬುಧವಾರ ಕೂಡ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆಯಾಗಿವೆ. ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 5 ಸಾವಿರ ರೂಪಾಯಿ ಏರಿಕೆಯಾದಂತಾಗಿದೆ.

ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆ: 2 ತಿಂಗಳಲ್ಲಿ ₹5000 ಹೆಚ್ಚಳ
Linkup
ಹೊಸದಿಲ್ಲಿ: 2021ರ ಆರಂಭದಲ್ಲಿ ಇಳಿಕೆಯ ಹಾದಿ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರತೊಡಗಿದೆ. ಬುಧವಾರ ಕೂಡ ಮತ್ತು ಬೆಳ್ಳಿ ದರಗಳು ಏರಿಕೆಯಾಗಿವೆ. ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 5 ಸಾವಿರ ರೂಪಾಯಿ ಏರಿಕೆಯಾದಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳ ನಡುವೆ ಭಾರತೀಯ ಮಾರುಟ್ಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಿದೆ. 'ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌' (ಎಂಸಿಎಕ್ಸ್) ನಲ್ಲಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಶೇಕಡಾ 0.4ರಷ್ಟು ಏರಿಕೆಯಾಗಿದೆ, 49,049 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೂಡ ಶೇ. 0.7ರಷ್ಟು ಹೆಚ್ಚಾಗಿದ್ದು, ಪ್ರತಿ ಕೆಜಿಗೆ 72,622 ರೂಪಾಯಿ ನಿಗದಿಯಾಗಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು 0.62ರಷ್ಟು ಮತ್ತು ಬೆಳ್ಳಿ 0.51ರಷ್ಟು ಗಳಿಸಿದೆ. ಕಳೆದ ಮಾರ್ಚ್‌ನಲ್ಲಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಸುಮಾರು 44,000 ರೂಪಾಯಿಗೆ ಇಳಿಕೆಯಾಗಿತ್ತು. ಆದರೆ, ಕಳೆದ ವರ್ಷದ ಗರಿಷ್ಠ ಬೆಲೆ 56,200 ರೂಪಾಯಿಗೆ ಹೋಲಿಸಿದರೆ ಪ್ರಸ್ತುತ ದರ ಕಡಿಮೆಯೇ ಇದೆ. 2020ರ ಆಗಸ್ಟ್‌ನಲ್ಲಿ ಚಿನ್ನದ ಬೆಲೆ ಗರಿಷ್ಠ ಏರಿಕೆಯಾಗಿತ್ತು. ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹56,200 ತಲುಪಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಶೇ. 0.4ರಷ್ಟು ಏರಿಕೆಗೊಂಡು 1,906.16 ಡಾಲರ್‌ಗೆ ತಲುಪಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು 27.99 ಡಾಲರ್ ನಿಗದಿಯಾಗಿದೆ. ಪ್ಲಾಟಿನಂ ಶೇ. 0.8ರಷ್ಟು ಏರಿಕೆ ಕಂಡು 1,200.69 ಡಾಲರ್‌ಗೆ ತಲುಪಿದೆ.