ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆಯೇ ಕೊರೊನಾ ಸೋಂಕಿತರಿಗೆ ನೇರವಾಗಿ ಆರೈಕೆ ಕೇಂದ್ರಗಳಿಗೆ ಸೇರಲು ಅವಕಾಶ ಕಲ್ಪಿಸಿದ ಬಿಬಿಎಂಪಿ!

ನಗರದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸೆಂಟ್ರಲ್‌ ಹಾಸ್ಟಿಟಲ್‌ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಪೋರ್ಟಲ್‌ನಲ್ಲಿ ಅಳವಡಿಸಿದ್ದು, ಆನ್‌ಲೈನ್‌ ಮೂಲಕವೂ ಹಾಸಿಗೆ ಕಾಯ್ದಿರಿಸಿ ದಾಖಲಾಗಬಹುದು. ಇಲ್ಲವೇ ನೇರವಾಗಿ ಆರೈಕೆ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬಹುದು. ಆರೈಕೆ ಕೇಂದ್ರದಲ್ಲಿರುವ ಟ್ರಯಾಜ್‌ ಸೆಂಟರ್‌ನಲ್ಲಿನ ವೈದ್ಯಕೀಯ ಸಿಬ್ಬಂದಿಯು ಸೋಂಕಿತರ ಆರೋಗ್ಯ ತಪಾಸಣೆ ನಡೆಸಿ, ದಾಖಲಿಸಿಕೊಳ್ಳಲಿದ್ದಾರೆ.

ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆಯೇ ಕೊರೊನಾ ಸೋಂಕಿತರಿಗೆ ನೇರವಾಗಿ ಆರೈಕೆ ಕೇಂದ್ರಗಳಿಗೆ ಸೇರಲು ಅವಕಾಶ ಕಲ್ಪಿಸಿದ ಬಿಬಿಎಂಪಿ!
Linkup
ಬೆಂಗಳೂರು: ಸೌಮ್ಯ ರೋಗ ಲಕ್ಷಣವಿರುವ ಕೋವಿಡ್‌ ಸೋಂಕಿತರು ಚಿಕಿತ್ಸೆಗಾಗಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ದಾಖಲಾಗಲು ಬಿಬಿಎಂಪಿಯ ವಾರ್‌ ರೂಂಗಳಿಂದ ಹಾಸಿಗೆ ಹಂಚಿಕೆ ಮಾಡುವವರೆಗೆ ಕಾಯಬೇಕಿಲ್ಲ. ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆಯೇ ನೇರವಾಗಿ ಆರೈಕೆ ಕೇಂದ್ರಗಳಿಗೆ ಸೇರಲು (ವಾಕ್‌ ಇನ್‌ ಮೂಲಕ) ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿಯು 1635 ಹಾಸಿಗೆ ಸಾಮರ್ಥ್ಯದ 11 ಕೋವಿಡ್‌ ಆರೈಕೆ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದು, ಸೋಂಕಿತರಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ಯಾವುದೇ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆಯೇ ನೇರವಾಗಿ ಚಿಕಿತ್ಸೆಗೆ ದಾಖಲಾಗಬಹುದಾಗಿದೆ. ನಗರದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸೆಂಟ್ರಲ್‌ ಹಾಸ್ಟಿಟಲ್‌ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಪೋರ್ಟಲ್‌ನಲ್ಲಿ ಅಳವಡಿಸಿದ್ದು, ಆನ್‌ಲೈನ್‌ ಮೂಲಕವೂ ಹಾಸಿಗೆ ಕಾಯ್ದಿರಿಸಿ ದಾಖಲಾಗಬಹುದು. ಇಲ್ಲವೇ ನೇರವಾಗಿ ಆರೈಕೆ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬಹುದು. ಆರೈಕೆ ಕೇಂದ್ರದಲ್ಲಿರುವ ಟ್ರಯಾಜ್‌ ಸೆಂಟರ್‌ನಲ್ಲಿನ ವೈದ್ಯಕೀಯ ಸಿಬ್ಬಂದಿಯು ಸೋಂಕಿತರ ಆರೋಗ್ಯ ತಪಾಸಣೆ ನಡೆಸಿ, ದಾಖಲಿಸಿಕೊಳ್ಳಲಿದ್ದಾರೆ. ಪಾಲಿಕೆಯಿಂದ ನಿರ್ವಹಣೆ ಮಾಡುತ್ತಿರುವ 11 ಕೋವಿಡ್‌ ಆರೈಕೆ ಕೇಂದ್ರಗಳಿಗೂ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರಕ್ಕೂ ದೂರವಾಣಿ ಸಂಖ್ಯೆಯ ವ್ಯವಸ್ಥೆ ಮಾಡಿದ್ದು, 24 ಗಂಟೆಯೂ ಕಾರ್ಯನಿರ್ವಹಿಸಲಿವೆ.ಸಾರ್ವಜನಿಕರು ಹಾಗೂ ಸೋಂಕಿತರು ಕೇಂದ್ರ ಕಚೇರಿಯ ಕೋವಿಡ್‌ ಆರೈಕೆ ಕೇಂದ್ರದ ಸಹಾಯವಾಣಿ ಸಂಖ್ಯೆ 080-22493200 ಅಥವಾ 080-22493201 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಕೋವಿಡ್‌ ಆರೈಕೆ ಕೇಂದ್ರಗಳ ಸಂಪರ್ಕ ಸಂಖ್ಯೆ: ಕೇಂದ್ರದ ಹೆಸರು ವಲಯ ಸಾಮಾನ್ಯ ಹಾಸಿಗೆ ಆಕ್ಸಿಜನ್‌ ಹಾಸಿಗೆ ಸಂಪರ್ಕ ಸಂಖ್ಯೆ ಎನ್‌ಇಆರ್‌ಜಿಎಚ್‌, ಜ್ಞಾನಭಾರತಿ ಕ್ಯಾಂಪಸ್‌ ಆರ್‌.ಆರ್‌.ನಗರ 269 101 9480685070 ಸರಕಾರಿ ಪದವಿಪೂರ್ವ ಬಾಲಕಿಯರ ಹಾಸ್ಟೆಲ್‌ ಯಲಹಂಕ 45 05 9482548218 ಕಾರ್ಮಿಕ ಭವನ ದಾಸರಹಳ್ಳಿ 97 10 7204869787 ಸರಕಾರಿ ಬಾಲಕರ ಕಲಾ ಕಾಲೇಜು ಪೂರ್ವ 87 88 080-29618005/04/03 ಹೆಬ್ಬಾಳದ ಮಂಗಳ ರೈತ ಭವನ ಪೂರ್ವ 34 26 9481277493/080-23413555 ನವ್ಯಶ್ರೀ ಇಂಟರ್‌ನ್ಯಾಷನಲ್‌ ಹೋಟೆಲ್‌ ಮಹದೇವಪುರ 99 13 9483900459 ಎಚ್‌ಎಎಲ್‌ ಮಹದೇವಪುರ 118 60 9380519485 ಸರಕಾರಿ ಆಯುರ್ವೇದ ಆಸ್ಪತ್ರೆ, ಗಾಂಧಿನಗರ ಪಶ್ಚಿಮ 20 55 8861102643 ಆಡುಗೋಡಿಯ ಬಾಷ್‌ ಕ್ರೀಡಾ ಸಂಕೀರ್ಣ ದಕ್ಷಿಣ 35 43 7411892392 ಬ್ಲಾಸಂ ವಿಂಟೇಜ್‌ ಬೊಮ್ಮನಹಳ್ಳಿ 6 44 7892408186 ಜಿಕೆವಿಕೆ ಯಲಹಂಕ 355 25 9482949019 ಟ್ರಯಾಜ್‌ ಸೆಂಟರ್‌ಗಳಿಗೆ ಅಗತ್ಯ ಸಿಬ್ಬಂದಿ ನೇಮಿಸಲು ಸೂಚನೆ ಬೆಂಗಳೂರು: ಕೋವಿಡ್‌ ಆರೈಕೆ ಕೇಂದ್ರಗಳಲ್ಲಿನ ಟ್ರಯಾಜ್‌ ಸೆಂಟರ್‌ಗಳಿಗೆ ಅಗತ್ಯ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ, ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಸರಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಿರುವ ಟ್ರಯಾಜ್‌ ಸೆಂಟರ್‌ ಹಾಗೂ 20 ಹಾಸಿಗೆಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಸೌಲಭ್ಯ ಕಲ್ಪಿಸಿರುವ ಸ್ಥಿರೀಕರಣ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ''ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಸ್ಥಳಾವಕಾಶ ಲಭ್ಯವಿದ್ದು, ಇನ್ನೂ 20 ಸಾಮಾನ್ಯ ಹಾಸಿಗೆಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು,'' ಎಂದು ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಿದರು. ವಿದ್ಯಾಪೀಠದಲ್ಲಿನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ನಿತ್ಯ ಪತ್ತೆಯಾಗುವ ಸೋಂಕಿತರ ಸಂಖ್ಯೆ, ಪ್ರಾಥಮಿಕ ಸಂಪರ್ಕಿತರ ಪತ್ತೆ, ಹೋಮ್‌ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾ ಇಡಲು ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದುಕೊಂಡರು. ''ಮನೆಯಲ್ಲಿಯೇ ಪ್ರತ್ಯೇಕ ಆರೈಕೆಯಲ್ಲಿರುವವರಿಗೆ ಔಷಧದ ಕಿಟ್‌ ನೀಡಿ, ಅವರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು'' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಲ್ಸನ್‌ ಗಾರ್ಡನ್‌ನಲ್ಲಿನ ಹೆರಿಗೆ ಆಸ್ಪತ್ರೆಯ ಸ್ಥಿರೀಕರಣ ಕೇಂದ್ರ ಹಾಗೂ ಟ್ರಯಾಜಿಂಗ್‌ ಸೆಂಟರ್‌ನಲ್ಲೂ ತಪಾಸಣೆ ನಡೆಸಿದ ಅವರು, ''ಇಲ್ಲಿಇದುವರೆಗೆ 47 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನೂ ಹೆಚ್ಚಿನ ಮಂದಿಗೆ ಚಿಕಿತ್ಸೆ ನೀಡುವ ಸಲುವಾಗಿ ವ್ಯಾಪಕ ಪ್ರಚಾರ ಕೈಗೊಂಡು, ಟ್ರಯಾಜಿಂಗ್‌ ವ್ಯವಸ್ಥೆಯನ್ನು ತೀವ್ರಗೊಳಿಸಲು ಸೂಚಿಸಲಾಗಿದೆ,'' ಎಂದು ಸುದ್ದಿಗಾರರಿಗೆ ತಿಳಿಸಿದರು. ಅಗಡಿ ನರ್ಸಿಂಗ್‌ ಹೋಂಗೆ ದಿಢೀರ್‌ ಭೇಟಿ ನೀಡಿದ ಅವರು ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಹಾಗೂ ಆಕ್ಸಿಜನ್‌ ಪೂರೈಕೆ ಬಗ್ಗೆ ಮಾಹಿತಿ ಪಡೆದರು. ಶಾಸಕ ಎಲ್‌.ಎ.ರವಿಸುಬ್ರಮಣ್ಯ, ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್‌, ವೀರಭದ್ರಸ್ವಾಮಿ, ಡಾ. ವಿಜೇಂದ್ರ, ಆರೋಗ್ಯಾಧಿಕಾರಿ ಡಾ. ಶಿವಕುಮಾರ್‌ ಉಪಸ್ಥಿತರಿದ್ದರು.