ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ 3 ದಿನ ಪಟಾಕಿ ಮಾರಾಟಕ್ಕೆ ಅನುಮತಿ; ಏನಿವೆ ನಿಯಮಗಳು?

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆ ತೆರೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದ 287 ವ್ಯಾಪಾರಿಗಳಿಗೆ ಮೂರು ದಿನಗಳ ಕಾಲ ಹಸಿರು ಪಟಾಕಿ ಮಳಿಗೆ ತೆರೆದು ಮಾರಾಟ ಮಾಡಲು ನಗರ ಪೊಲೀಸರು ಅನುಮತಿ ನೀಡಿದ್ದಾರೆ. ನಗರದ ನಾನಾ ಪ್ರದೇಶಗಳಲ್ಲಿ ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ ಮಾತ್ರ ಪಟಾಕಿ ವ್ಯಾಪಾರಿಗಳು ಮಳಿಗೆ ತೆರೆದು ಮಾರಾಟ ಮಾಡಬಹುದು ಎಂದು ಪೊಲೀಸರು ತಿಳಿಸಿದರು.

ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ 3 ದಿನ ಪಟಾಕಿ ಮಾರಾಟಕ್ಕೆ ಅನುಮತಿ; ಏನಿವೆ ನಿಯಮಗಳು?
Linkup
ಬೆಂಗಳೂರು: ಸಂಭ್ರಮದಿಂದ ಆಚರಿಸುವ ದೀಪದ ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದೆಲ್ಲೆಡೆ ಕೋಟ್ಯಂತರ ಜನರು ಪಟಾಕಿ ಸಿಡಿಸಿ, ದೀಪ ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸಲು ಕಾತರಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈದಾನಗಳಲ್ಲಿ ಚಿಲ್ಲರೆ ಮಳಿಗೆ ತೆರೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದ 287 ವ್ಯಾಪಾರಿಗಳಿಗೆ ಮೂರು ದಿನಗಳ ಕಾಲ ಹಸಿರು ಪಟಾಕಿ ಮಳಿಗೆ ತೆರೆದು ಮಾರಾಟ ಮಾಡಲು ನಗರ ಪೊಲೀಸರು ಅನುಮತಿ ನೀಡಿದ್ದಾರೆ. ನ.3 ರಿಂದ 5ರವರೆಗೆ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ನಗರದ ನಾನಾ ಪ್ರದೇಶಗಳಲ್ಲಿ ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ ಮಾತ್ರ ಪಟಾಕಿ ವ್ಯಾಪಾರಿಗಳು ಮಳಿಗೆ ತೆರೆದು ಮಾರಾಟ ಮಾಡಬಹುದು ಎಂದು ಪೊಲೀಸರು ತಿಳಿಸಿದರು. ಕಳೆದ ವರ್ಷವು ಮೂರು ದಿನಗಳ ಕಾಲ ಮಾತ್ರ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆಯೇ ಈ ವರ್ಷವೂ ಕೂಡ ವ್ಯಾಪಾರಿಗಳು ಮೂರು ದಿನಗಳ ಕಾಲ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಆದರೆ, ಪ್ರತಿಯೊಬ್ಬ ವ್ಯಾಪಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಏನಾದರೂ ನಿಯಮ ಉಲ್ಲಂಘಿಸಿ ಪರಿಸರಕ್ಕೆ ಹಾನಿಯಾಗುವಂತಹ ಪಟಾಕಿ ಮಾರಾಟ ಮಾಡಿದರೆ ಅಂತಹ ಮಳಿಗೆ ಮಾಲೀಕರು ಮತ್ತು ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಗೃಹರಕ್ಷಕದಳ, ನಾಗರಿಕ ರಕ್ಷಣೆ ಮತ್ತು ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಅವರು ನಿಗದಿಪಡಿಸುವ ಮೈದಾನಗಳಲ್ಲಿ ಮಾತ್ರ ಪಟಾಕಿ ಮರಾಟ ಮಳಿಗೆಗೆ ತಾತ್ಕಾಲಿಕ ಪರವಾನಗಿ ನೀಡಲಾಗುವುದು. ಮೈದಾನಗಳ ಬಗ್ಗೆ ಮಾಹಿತಿಗಾಗಿ ಪೊಲೀಸ್‌ ಆಯುಕ್ತರ ಕಚೇರಿ ಜಾಲತಾಣವನ್ನು ಸಂಪರ್ಕಿಸಬೇಕು. ವ್ಯಾಪಾರಿಗಳಿಗೆ ಸೂಚನೆಗಳು
  • ಮೈದಾನಗಳಲ್ಲಿ ಅಂತರ ಕಾಯ್ದುಕೊಂಡು ಮಳಿಗೆಗಳನ್ನು ತೆರೆಯಬೇಕು
  • ಮಳಿಗೆಯಲ್ಲಿ ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಯಾವುದೇ ಸಿಡಿಮದ್ದುಗಳನ್ನು ಇಟ್ಟಿಕೊಳ್ಳಬಾರದು.
  • ಮೈದಾನದ ಅಕ್ಕ ಪಕ್ಕದಲ್ಲಿ ನೀರು ಇಟ್ಟುಕೊಳ್ಳುವುದು ಸೂಕ್ತ
  • ಬೆಂಕಿ ನಂದಿಸುವಂತಹ ಸಿಲಿಂಡರ್‌ಗಳನ್ನು ಇಟ್ಟಿಕೊಳ್ಳಬೇಕು
  • ಕಡ್ಡಾಯವಾಗಿ ವಾಸದ ಮನೆಗಳಿಂದ ದೂರದಲ್ಲಿ ಮಳಿಗೆಗಳನ್ನು ತೆರೆಯಬೇಕು
  • ಸರಾಗವಾಗಿ ಅಗ್ನಿಶಾಮಕದಳ ವಾಹನ ಮೈದಾನದೊಳಗೆ ಸಂಚರಿಸುವಷ್ಟು ಜಾಗ ಬಿಟ್ಟು ಮಳಿಗೆಯನ್ನು ತೆರೆಯಬೇಕು
  • ಕಿತ್ತು ಹೋಗಿರುವ ಅಥವಾ ಡ್ಯಾಮೇಜ್‌ ಇರುವ ವಿದ್ಯುತ್‌ ವೈರ್‌ಗಳನ್ನು ಬಳಸಬಾರದು.