ತೇಜಸ್ವಿ ಸೂರ್ಯ ದಾಳಿ ಬಳಿಕ ಅಮಾನತುಗೊಂಡಿದ್ದ 17 ಮಂದಿ ಮುಸ್ಲಿಂ ನೌಕರರು ಮರುನೇಮಕ

BBMP Bed Blocking Scam: ಬಿಬಿಎಂಪಿಯಲ್ಲಿ ಹಾಸಿಗೆ ಬ್ಲಾಕಿಂಗ್‌ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಸಂಸದ ಮತ್ತು ಶಾಸಕರು ಈ ನೌಕರರ ವಿರುದ್ಧ ಹರಿಹಾಯ್ದಿದ್ದರು. ವಾರ್‌ ರೂಂನಲ್ಲಿ 212 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಂ ಸಮುದಾಯದ ಒಬ್ಬರು ಮಾತ್ರ ಹಾಸಿಗೆ ನಿಯೋಜನೆ ವಿಭಾಗದಲ್ಲಿದ್ದರು.

ತೇಜಸ್ವಿ ಸೂರ್ಯ ದಾಳಿ ಬಳಿಕ ಅಮಾನತುಗೊಂಡಿದ್ದ 17 ಮಂದಿ ಮುಸ್ಲಿಂ ನೌಕರರು ಮರುನೇಮಕ
Linkup
Tejaswi Surya: ಬೆಂಗಳೂರು: ಸಂಸದ ಮತ್ತು ಮೂವರು ಶಾಸಕರು ಮೇ 4ರಂದು ಕೋವಿಡ್‌ ವಾರ್‌ ರೂಂ ಮೇಲೆ ದಾಳಿ ನಡೆಸಿದ ನಂತರ ಅಮಾನತುಗೊಂಡಿದ್ದ 17 ಮಂದಿ ಮುಸ್ಲಿಂ ನೌಕರರು ಸೋಮವಾರದಿಂದ(ಮೇ 10) ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಿಬಿಎಂಪಿಯಲ್ಲಿ ಹಾಸಿಗೆ ಬ್ಲಾಕಿಂಗ್‌ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಸಂಸದ ಮತ್ತು ಶಾಸಕರು ಈ ನೌಕರರ ವಿರುದ್ಧ ಹರಿಹಾಯ್ದಿದ್ದರು. ವಾರ್‌ ರೂಂನಲ್ಲಿ 212 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಂ ಸಮುದಾಯದ ಒಬ್ಬರು ಮಾತ್ರ ಹಾಸಿಗೆ ನಿಯೋಜನೆ ವಿಭಾಗದಲ್ಲಿದ್ದರು. ಕ್ರಿಸ್ಟಲ್‌ ಇನ್ಫೋ ಸಿಸ್ಟಂ ಅಂಡ್‌ ಸರ್ವೀಸಸ್‌ ಎಂಬ ಹೊರಗುತ್ತಿಗೆ ಸಂಸ್ಥೆ ಈ ನೌಕರರನ್ನು ಬಿಬಿಎಂಪಿಗೆ ಪೂರೈಸಿತ್ತು. ಈ ಸಂಸ್ಥೆಯ ಅಧಿಕಾರಿಗಳು, ಕೋವಿಡ್‌ ದಕ್ಷಿಣ ವಲಯ ವಾರ್‌ ರೂಂನ ಉಸ್ತುವಾರಿ, ಐಎಎಸ್‌ ಅಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಶನಿವಾರ ಭೇಟಿ ಮಾಡಿದ್ದು, ‘ಈ ಮುಸ್ಲಿಂ ನೌಕರರು ಹಾಸಿಗೆ ಬ್ಲಾಕಿಂಗ್‌ ದಂಧೆಯಲ್ಲಿ ಪಾಲ್ಗೊಂಡಿಲ್ಲ. ಇವರನ್ನು ಮರುನೇಮಕ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. ಈ ನಡುವೆ, ‘17 ಮುಸ್ಲಿಂ ನೌಕರರನ್ನು ಮತ್ತೆ ನೇಮಿಸಿಕೊಳ್ಳಲಾಗುವುದು. ಸೋಮವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ’ ಎಂದು ತುಳಸಿ ಮದ್ದಿನೇನಿ ತಿಳಿಸಿದ್ದಾರೆ.