ಕನ್ನಡದ ಹಿರಿಯ ನಟ ಶಿವರಾಂ ವಿಧಿವಶ; ಕೊನೆಗೂ ಫಲಿಸದ ಪ್ರಾರ್ಥನೆ

ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ. ಇಂದು ಅವರು ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕನ್ನಡದ ಹಿರಿಯ ನಟ ಶಿವರಾಂ ವಿಧಿವಶ; ಕೊನೆಗೂ ಫಲಿಸದ ಪ್ರಾರ್ಥನೆ
Linkup
ಕನ್ನಡದ ಹಿರಿಯ ನಟ ಅವರು ಇಂದು (ಡಿ 4) ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಶಿವರಾಂ ಬೇಗ ಹುಷಾರಾಗಲಿ ಎಂದು ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೇಶಕರು ಪ್ರಾರ್ಥಿಸಿದ್ದರೂ ಕೂಡ ಫಲ ಸಿಗಲಿಲ್ಲ. ಶಿವರಾಮಣ್ಣ ಅಂತಲೇ ಫೇಮಸ್ ಕನ್ನಡ ಚಿತ್ರರಂಗದಲ್ಲಿ ಶಿವರಾಂ ( Kannada Senior Actor ) ಅವರು ‘ಶಿವರಾಮಣ್ಣ’ ಅಂತಲೇ ಹೆಸರುವಾಸಿಯಾಗಿದ್ದರು. ಚಿಕ್ಕವಯಸ್ಸಿನಲ್ಲೇ ನಟನೆಯತ್ತ ಆಸಕ್ತಿ ಬೆಳೆಸಿಕೊಂಡ ಶಿವರಾಂ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಆ ನಂತರ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಶಿವರಾಂ ಪುತ್ರ ಲಕ್ಷ್ಮೀಶ್ ಹೇಳಿಕೆ "ನಮ್ಮ ತಂದೆ ಶಿವರಾಮ್ ಇನ್ನು ನಮ್ಮ ಜೊತೆ ಇಲ್ಲ. ಅವರು ಭಗವಂತನ ಪಾದ ಸೇರಿದ್ದಾರೆ. ಆಸ್ಪತ್ರೆಯವರು ಎಲ್ಲ ರೀತಿಯ ಚಿಕಿತ್ಸೆ ನೀಡಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯವರು, ಚಿತ್ರರಂಗದವರು ನಮಗೆ ದೊಡ್ಡ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು. ಎಷ್ಟೇ ಕಷ್ಟಪಟ್ಟರೂ ನಮ್ಮ ತಂದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಧಿ ಬೇರೆಯದೇ ಆದ ಯೋಜನೆ ಹಾಕಿತ್ತು" ಎಂದು ನಟ ಶಿವರಾಂ ಪುತ್ರ ಲಕ್ಷ್ಮೀಶ್ ಹೇಳಿದ್ದಾರೆ. ಶಿವರಾಂ ಅವರಿಗೆ ಏನಾಗಿತ್ತು? 5 ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಶಿವರಾಂ ಅವರಿಗೆ ಕಾರು ಅಪಘಾತ ಆಗಿತ್ತು. ಇನ್ನು ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದಾಗ ಅಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಂದು ರಾತ್ರಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಲಾಗಿದೆ. ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿದೆ. ಅಂದಿನಿಂದ ಅವರಿಗೆ ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವೈದ್ಯರು ಸರ್ಜರಿ ಮಾಡಬೇಕು ಅಂತ ಹೇಳಿದ್ದರು. ಆದರೆ ಶಿವರಾಂ ಅವರಿಗೆ ವಯಸ್ಸಾಗಿರೋದರಿಂದ ಸರ್ಜರಿ ಮಾಡುವಂತಿರಲಿಲ್ಲ. ಆಸ್ಪತ್ರೆ ವೈದ್ಯರು ಏನು ಹೇಳಿದ್ರು? "ನಿನ್ನೆಯವರೆಗೂ ಏನಾದರೂ ಮ್ಯಾಜಿಕ್ ಆಗಿ ಶಿವರಾಂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಆಸೆ ನಿಜ ಆಗೋದಿಲ್ಲ ಎಂದು ಅರಿವಾಗುತ್ತಿದೆ. ಶಿವರಾಂ ಅವರ ಹೃದಯ ಬಡಿತ ಕಡಿಮೆಯಾಗುತ್ತಿದೆ. ಶಿವರಾಂ ಅವರಿಗೆ ಎಂಆರ್‌ಐ ಸ್ಕ್ಯಾನ್ ಮಾಡೋಣ ಎಂದರೆ ಅವರನ್ನು ಶಿಫ್ಟ್ ಮಾಡುವಾಗ ಬಿಪಿ ಕಡಿಮೆಯಾಗತ್ತೆ ಎಂಬ ಭಯ ಇದೆ. ಚೇತರಿಕೆ ಕಾಣುವುದು ಕಷ್ಟ ಎನಿಸುತ್ತಿದೆ. ಎಷ್ಟು ದಿನ ಎಷ್ಟು ಗಂಟೆ ಅಂತ ಹೇಳಲಾಗದು. ಕುಟುಂಬದವರು ಅವರಿಗೆ ಇನ್ನಷ್ಟು ಹಿಂಸೆ ಕೊಡುವುದು ಬೇಡ ಅಂತ ಹೇಳಿದ್ದಾರೆ. ಆದರೆ ನಾವು ನಮ್ಮ ಹತ್ರ ಆದಷ್ಟು ಪ್ರಯತ್ನ ಮಾಡಲಾಗುತ್ತಿದೆ" ಎಂದು ಆಸ್ಪತ್ರೆ ವೈದ್ಯ ಮೋಹನ್ ಹೇಳಿದ್ದರು. 1958ರಿಂದ ಶಿವರಾಂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.