ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ

2020ರ ಮಾ. 1ರ ವೇಳೆಗೆ ಎಲ್ಲ ಕೇಂದ್ರ ಸರಕಾರಿ ಇಲಾಖೆಗಳಲ್ಲಿ 40,04,941 ಉದ್ಯೋಗಕ್ಕೆ ಅವಕಾಶ ಇದ್ದು, ಈ ಪೈಕಿ 31,32,698 ಹುದ್ದೆಗಳಲ್ಲಿ ಉದ್ಯೋಗಿಗಳಿದ್ದಾರೆ. ಹೀಗಾಗಿ ಒಟ್ಟು 8,72,243 ಹುದ್ದೆಗಳು ಖಾಲಿ ಇವೆ ಎಂದು ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ
Linkup
ಹೊಸದಿಲ್ಲಿ: ಕೇಂದ್ರ ಸರಕಾರದ ನಾನಾ ಇಲಾಖೆ ಮತ್ತು ಸಂಸ್ಥೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸಿಬ್ಬಂದಿ ಇಲಾಖೆ ಸಹಾಯಕ ಸಚಿವ ರಾಜ್ಯಸಭೆಗೆ ತಿಳಿಸಿದ್ದಾರೆ. 2020ರ ಮಾರ್ಚ್ 1ರ ವೇಳೆಗೆ ಎಲ್ಲ ಕೇಂದ್ರ ಸರಕಾರಿ ಇಲಾಖೆಗಳಲ್ಲಿ 40,04,941 ಉದ್ಯೋಗ ಬಲಕ್ಕೆ ಅವಕಾಶ ಇದ್ದು, ಈ ಪೈಕಿ 31,32,698 ಹುದ್ದೆಗಳಲ್ಲಿ ಉದ್ಯೋಗಿಗಳಿದ್ದಾರೆ. ಹೀಗಾಗಿ ಒಟ್ಟು 8,72,243 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯಸಭೆಗೆ ತಿಳಿಸಿದರು. ಕಳೆದ 5 ವರ್ಷಗಳಲ್ಲಿ ಮೂರು ಪ್ರಮುಖ ನೇಮಕಾತಿ ಸಂಸ್ಥೆಗಳ ವತಿಯಿಂದ ನಡೆದ ನೇಮಕಾತಿಗಳ ವಿವರಗಳನ್ನು ನೀಡಿದ ಅವರು, ಯುಪಿಎಸ್‌ಸಿಯಿಂದ 25,267 ಅಭ್ಯರ್ಥಿಗಳ ನೇಮಕಾತಿಯಾಗಿದೆ. ಸಿಬ್ಬಂದಿ ಆಯ್ಕೆ ಆಯೋಗದಿಂದ 2,14,601 ಅಭ್ಯರ್ಥಿಗಳನ್ನು ಹಾಗೂ ರೈಲ್ವೆ ನೇಮಕಾತಿ ಮಂಡಳಿಯಿಂದ 2,04,945 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.