ಒಂದಲ್ಲ, ಎರಡಲ್ಲ... ಬೆಂಗಳೂರಿನಲ್ಲಿ ಜನ ಮಾತನಾಡುವ ಒಟ್ಟು ಭಾಷೆಗಳು 107!

ಬೆಂಗಳೂರಿನಲ್ಲಿ ದೇಶ-ವಿದೇಶಗಳಿಂದ ಬಂದ ವಿವಿಧ ಬಗೆಯ ಭಾಷೆಗಳನ್ನಾಡುವ ಜನರು ತುಂಬಿದ್ದಾರೆ ಎನ್ನುವುದು ನಿಜ. ಆದರೆ ಇಲ್ಲಿ ಎಷ್ಟು ಭಾಷೆಗಳನ್ನು ಆಡುವ ಜನರಿದ್ದಾರೆ? ದೇಶದಲ್ಲಿಯೇ ಅತಿ ಹೆಚ್ಚು ಭಾಷೆಗಳನ್ನು ಬೆಂಗಳೂರು ಜಿಲ್ಲೆಯಲ್ಲಿ ಮಾತನಾಡಲಾಗುತ್ತಿದೆ!

ಒಂದಲ್ಲ, ಎರಡಲ್ಲ... ಬೆಂಗಳೂರಿನಲ್ಲಿ ಜನ ಮಾತನಾಡುವ ಒಟ್ಟು ಭಾಷೆಗಳು 107!
Linkup
ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಜನರು ಇರುವ ಜಿಲ್ಲೆಯೆಂದರೆ ಅದು ನಗರ. 2011ರ ಜನಸಂಖ್ಯೆಯನ್ನು ಆಧರಿಸಿ ದಿಲ್ಲಿ ಮೂಲದ ಶಿಕ್ಷಣ ತಜ್ಞರೊಬ್ಬರು ನಡೆಸಿದ ಇತ್ತೀಚಿನ ವಿಶ್ಲೇಷಣೆಯೊಂದು ಈ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ ಸುಮಾರು 107 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಇದರಲ್ಲಿ 22 ಅಧಿಕೃತ ಹಾಗೂ 84 ಅಧಿಕೃತ ಪಟ್ಟಿಗೆ ಸೇರ್ಪಡೆಯಾಗದ ಭಾಷೆಗಳು ಸೇರಿವೆ. ಇದು ಬೆಂಗಳೂರು ನಗರವು ವಿಭಿನ್ನ ಪ್ರದೇಶ, ಭಾಷೆಯ ಹಾಗೂ ಸಮುದಾಯಗಳಿಗೆ ಆಶ್ರಯ ನೀಡಿರುವ ಸಿರಿವಂತಿಕೆಯನ್ನು ಬಿಂಬಿಸುವಂತಿದೆ. ಬೆಂಗಳೂರಿನ ಬಳಿಕ ನೂರಕ್ಕೂ ಅಧಿಕ ಭಾಷೆಗಳನ್ನಾಡುವ ಜಿಲ್ಲೆಯೆಂದರೆ ನಾಗಾಲ್ಯಾಂಡ್‌ನ ದಿಮಾಪುರ್. ಇಲ್ಲಿ 103 ಭಾಷೆಗಳನ್ನು ಆಡುತ್ತಾರೆ. ನಂತರದ ಸ್ಥಾನದಲ್ಲಿ ಅಸ್ಸಾಂನ ಸೋನಿತ್ಪುರ ಇದೆ. ಇಲ್ಲಿ 101 ಭಾಷೆಗಳ ಭಾಷಿಕರಿದ್ದಾರೆ ಎನ್ನುತ್ತಾರೆ, ಬ್ರೂಕಿಂಗ್ ಇನ್‌ಸ್ಟಿಟ್ಯೂಷನ್‌ನ ಹಿರಿಯ ಅನಿವಾಸಿ ಉಪನ್ಯಾಸಕಿ ಶಮಿಕಾ ರವಿ ಮತ್ತು ಭಾರತೀಯ ಸಾಂಸ್ಥಿಕ ಸಂಸ್ಥೆಯ ಅರ್ಥಶಾಸ್ತ್ರ ವಿಭಾಗದ ಸಹ ಪ್ರೊಫೆಸರ್ ಮುದಿತ್ ಕುಮಾರ್. ಹೆಚ್ಚು-ಕಡಿಮೆಯ ಜಿಲ್ಲೆಗಳುಪಶ್ಚಿಮ ಬಂಗಾಳದ ಜಲ್ಪೈಗುರ್ (98), ಮೇಘಾಲಯದ ಪೂರ್ವ ಖಾಸಿ ಹಿಲ್ಸ್‌ (96), ನೈಋತ್ಯ ದಿಲ್ಲಿ (97), ಅಸ್ಸಾಂನ ಕರ್ಬಿ ಅಂಗ್ಲಾಂಗ್ (95), ಪುಣೆ (93) ಡಾರ್ಜಿಲಿಂಗ್ (91) ಮತ್ತು ಮುಂಬಯಿ ಉಪನಗರ (88) ಅಧಿಕ ಭಾಷೆಗಳನ್ನು ಆಡುವ ಜಿಲ್ಲೆಗಳಾಗಿವೆ. ಈಶಾನ್ಯ ಭಾರತದ ಪ್ರದೇಶಗಳಲ್ಲಿಯೇ ಅತಿ ಹೆಚ್ಚು ವೈವಿಧ್ಯಮ ಭಾಷೆಗಳಿರುವುದು ವಿಶೇಷವಾಗಿದೆ. ಯಾನಂ (ಪುದುಚೆರಿ), ಕೈಮುರ್ (ಬಿಹಾರ), ಕೌಶಾಂಬಿ ಮತ್ತು ಕಾನ್ಪುರ ಜಿಲ್ಲೆಗಳು (ಉತ್ತರ ಪ್ರದೇಶ), ಅರಿಯಲೂರ್ (ತಮಿಳುನಾಡು)- 20ಕ್ಕಿಂತಲೂ ಕಡಿಮೆ ಭಾಷೆಗಳನ್ನು ಮಾತನಾಡುವ ಜಿಲ್ಲೆಗಳಾಗಿವೆ. ಮಾತನಾಡುವವರ ಸಂಖ್ಯೆಹಾಗಾದರೆ, ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಜನರು ಎಷ್ಟಿದ್ದಾರೆ? ಒಟ್ಟಾರೆ ಲೆಕ್ಕದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆ ಇದೆ. ರಾಜಧಾನಿಯಲ್ಲಿ ಕನ್ನಡ ಭಾಷಿಕರ ಒಟ್ಟು ಶೇಕಡಾವಾರ ಪ್ರಮಾಣ 44.5%ರಷ್ಟಿದೆ. ಇನ್ನು ತಮಿಳು (15%), ತೆಲುಗು (14%), ಉರ್ದು (12%), ಹಿಂದಿ (6%) ಮತ್ತು ಮಲಯಾಳಂ (3%) ಭಾಷಿಕರ ಪ್ರಮಾಣವಿದೆ. ಜನಗಣತಿಯು ಜನಸಂಖ್ಯೆಯ ಗಾತ್ರ ಎಷ್ಟೇ ಇದ್ದರೂ ಎಲ್ಲ ಭಾಷೆಗಳನ್ನೂ ಒಳಗೊಂಡಿರುತ್ತದೆ. ಈ ರೀತಿ ಬಹುಭಾಷಿಕ ಒಗ್ಗೂಡುವಿಕೆಯು ಆರ್ಥಿಕ ಚೈತನ್ಯದ ಉತ್ತಮ ಗುರುತಾಗಿದೆ. ಹಾಗೆಯೇ ಭಾಷೆಯು ಪ್ರತಿಭೆಯ ಪ್ರತಿನಿಧಿಯಾಗಿದೆ. ಒಂದು ಜಾಗಕ್ಕೆ ವಲಸೆ ಹೋದಾಗ ಜನರು ವಿಭಿನ್ನ ಭಾಷೆಗಳನ್ನು ಮಾತನಾಡುವುದರಿಂದ ಅದು ಆರ್ಥಿಕತೆ, ಉದ್ಯೋಗಗಳಿಗೆ ಉತ್ತೇಜನ ನೀಡುತ್ತದೆ. ಬೆಂಗಳೂರಿನಲ್ಲಿರುವ ಭಾಷಾ ವೈವಿಧ್ಯವು ಇಲ್ಲಿ ದೂರ ದೂರದ ಭಾಗಗಳಿಂದ ಬಂದ ಜನರಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಶಮಿಕಾ ರವಿ ಹೇಳಿದ್ದಾರೆ.