ಸರಕು ಸಾಗಣೆಯಲ್ಲಿ ದಾಖಲೆ ನಿರ್ಮಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಗಸ್ಟ್ ನಲ್ಲಿ 37, 319 ಮೆಟ್ರಿಕ್ ಟನ್‌ನಷ್ಟು ಸರಕು ಸಾಗಣೆ ಮಾಡುವ ಮೂಲಕ ಇದೇ ಮೊದಲ ಬಾರಿ ಅತಿಹೆಚ್ಚು ಸಾಗಾಣೆ ಮಾಡಿದ ದಾಖಲೆ ನಿರ್ಮಿಸಿದೆ.

ಸರಕು ಸಾಗಣೆಯಲ್ಲಿ ದಾಖಲೆ ನಿರ್ಮಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Linkup
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಗಸ್ಟ್ ನಲ್ಲಿ 37, 319 ಮೆಟ್ರಿಕ್ ಟನ್‌ನಷ್ಟು ಮಾಡುವ ಮೂಲಕ ಇದೇ ಮೊದಲ ಬಾರಿ ಅತಿಹೆಚ್ಚು ಸಾಗಾಣೆ ಮಾಡಿದ ದಾಖಲೆ ನಿರ್ಮಿಸಿದೆ. ವಿಮಾನ ನಿಲ್ದಾಣ ಪ್ರಾರಂಭದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ರಫ್ತು ಹಾಗೂ ಆಮದು ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ಸಾಗಣೆ ಪ್ರಮಾಣವನ್ನು ಹೆಚ್ಚಿಸಿರುವುದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಮ್ಮೆ ತಂದಿದೆ. ಜೊತೆಗೆ, 24,304 ಮೆಟ್ರಿಕ್ ಟನ್‌ನಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕು ಸಾಗಣೆ ಮಾಡಲಾಗಿದೆ. ಇದರಲ್ಲಿ 15, 224 ಮೆ.ಟ ರಫ್ತು ಪ್ರಮಾಣ ಇರುವುದು ಗಮರ್ನಾಹ ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಪ್ರಕರಣೆಯಲ್ಲಿ ತಿಳಿಸಿದೆ. ಪ್ರಸ್ತುತ 14 ವಿಶೇಷ ಸರಕು ಸಾಗಾಣೆದಾರರು ವಿಮಾನ ನಿಲ್ದಾಣದಿಂದ ರಫ್ತು ಮತ್ತು ಆಮದು ಮಾಡಲಾಗುತ್ತಿದ್ದು, ನಿತ್ಯ ಸುಮಾರು 33 ದೈನಂದಿನ ಸರಕು ಸಾಗಣೆ ವಿಮಾನಗಳನ್ನು ಕಾಣಲಾಗುತ್ತಿದೆ. 8.5 ಲಕ್ಷ ಮೆ.ಟ ಸರಕು ಸಾಗಣೆ ಗುರಿ: ಬೆಂಗಳೂರು ವಿಮನ ನಿಲ್ದಾಣದ ಸರಕು ಸಾಗಣೆ ಸಾಮರ್ಥ್ಯ ವಾರ್ಷಿಕ 7.15 ಲಕ್ಷ ಮೆಟ್ರಿಕ್ ಟನ್‌ನಷ್ಟು ಹೊಂದಿದ್ದು, ಈ ಪ್ರಮಾಣವನ್ನು 8.5 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣವೂ ಭಾರತದಲ್ಲೇ ಹೆಚ್ಚು ಚಟುವಟಿಕೆ ಹೊಂದಿರುವ ನಿಲ್ದಾಣಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಭಾರತೀಯ ಕಸ್ಟಮ್ಸ್ನ ಸಹಕಾರದೊಂದಿಗೆ ಕೃಷಿ ಮತ್ತು ಸಂಸ್ಕರಣೆಯ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಈ ಮೈಲುಗಲ್ಲು ಸಾಧಿಸಲು ಕೇಂದ್ರ ಸರಕಾರ ನೆರವಾಗಿದೆ. ಅತ್ಯುತ್ತಮ ಸಿಬ್ಬಂದಿ ಸೇವೆ ಪ್ರಶಸ್ತಿಗೆ ಬೆಂಗಳೂರು ವಿಮಾನ ನಿಲ್ದಾಣ ಭಾಜನ ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ ಗರಿ ಲಭಿಸಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ ಕೊಡಮಾಡುವ "ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಆ್ಯಂಡ್ ಸೆಂಟ್ರಲ್ ಏಷ್ಯಾ" (ಭಾರತ ಮತ್ತು ಮಧ್ಯ ಏಷ್ಯಾದಲಿಯ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ) ಪ್ರಶಸ್ತಿಗೆ ಭಾಜನವಾಗಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್‌ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ಗ್ರಾಹಕರು ಇತರೆ ವಿಮಾನ‌ ನಿಲ್ದಾಣಗಳಲ್ಲಿ‌ನ ಸಿಬ್ಬಂದಿ ನೀಡುವ ಸೇವೆಗಿಂತ ಕೆಐಎ ವಿಮಾನ ನಿಲ್ದಾಣದ ಸೇವೆಗೆ ಅತ್ಯತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಸಿಇಓ ಹರಿ ಮರಾರ್ ಮಾತನಾಡಿ, ಈ ಪ್ರಶಸ್ತಿ ಲಭಿಸಿದ್ದು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಸಿಬ್ಬಂದಿಯ ಕಾರ್ಯಕ್ಷಮೆಯಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಮತಹಾಕಿದ ಎಲ್ಲಾ ಪ್ರಯಾಣಿಕರಿಗೂ ಅಭಿನಂದನೆ ತಿಳಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ)ನಿಂದ ವಿಶ್ವದ “ವಾಯ್ಸ್ ಆಫ್ ದಿ ಕಸ್ಟಮರ್” ಮಾನ್ಯತೆ ಮತ್ತು ಎಸಿಐ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ ಅವಾರ್ಡ್ ಲಭಿಸಿತ್ತು. ಅಲ್ಲದೆ, ರೋಲ್ ಆಫ್ ಎಕ್ಸಲೆನ್ಸ್ ಫಾರ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.