ಒಟ್ಟಿಗೆ ಜಿಮ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ & ವಿಜಯ್ ದೇವರಕೊಂಡ; ವರ್ಕೌಟ್ ಫೋಟೋ ವೈರಲ್

'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್‌' ಸಿನಿಮಾಗಳ ಮೂಲಕ ಹಿಟ್ ಜೋಡಿ ಎನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದು ಹೈದರಾಬಾದ್‌ನ ಜಿಮ್‌ವೊಂದರಲ್ಲಿ!

ಒಟ್ಟಿಗೆ ಜಿಮ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ & ವಿಜಯ್ ದೇವರಕೊಂಡ; ವರ್ಕೌಟ್ ಫೋಟೋ ವೈರಲ್
Linkup
ತೆಲುಗಿನಲ್ಲಿ ಮೂರು ವರ್ಷಗಳ ಹಿಂದೆ 'ಗೀತಾ ಗೋವಿಂದಂ' ಸಿನಿಮಾದಿಂದ ಕನ್ನಡದ ಬೆಡಗಿ ಮತ್ತು ಒಳ್ಳೆಯ ಸ್ನೇಹಿತರಾದರು. ಆ ಸಿನಿಮಾ ಕೂಡ ಅವರಿಬ್ಬರ ಕರಿಯರ್‌ಗೆ ದೊಡ್ಡ ಬ್ರೇಕ್ ತಂದುಕೊಡ್ತು. ಆ ನಂತರ 'ಡಿಯರ್ ಕಾಮ್ರೇಡ್' ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಜನಪ್ರಿಯ ಜೋಡಿ ಎನಿಸಿಕೊಂಡರು. ಸದ್ಯ ಇಬ್ಬರು ಮುಂಬೈ ಟು ಹೈದರಾಬಾದ್‌ ಅಂತ ಓಡಾಟದಲ್ಲಿದ್ದಾರೆ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತ ಸುದ್ದಿಯಾಗುತ್ತಿದ್ದಾರೆ. ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್! ರಶ್ಮಿಕಾ ಮತ್ತು ವಿಜಯ್ ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಈಚೆಗೆ ತಾವಿಬ್ಬರು ಒಟ್ಟಿಗೆ ವರ್ಕೌಟ್ ಮಾಡುತ್ತಿರುವ ಜಿಮ್‌ ಫೋಟೋಗಳನ್ನು ರಶ್ಮಿಕಾ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗಿವೆ. ಹಿಂದಿ ಸಿನಿಮಾಗಳ ಕೆಲಸದ ಮೇಲೆ ರಶ್ಮಿಕಾ ಅಲ್ಲಿ ಸೆಟ್ಲ್‌ ಆಗಿದ್ದರು. ಈಚೆಗೆ ಅವರು ತೆಲುಗು ಸಿನಿಮಾವೊಂದರ ಶೂಟಿಂಗ್ ಸಲುವಾಗಿ ಹೈದರಾಬಾದ್‌ಗೆ ಬಂದಿದ್ದಾರೆ. ಜಿಮ್‌ನಲ್ಲಿ ವಿಜಯ್‌ರನ್ನು ಭೇಟಿ ಮಾಡಿರುವ ಅವರು, ಈ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಂಬೈನ ಹೋಟೆಲ್‌ವೊಂದರಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಡಿನ್ನರ್ ಮುಗಿಸಿ ಹೊರಬರುವಾಗ ಪಾಪರಾಜಿಗಳ ಕ್ಯಾಮೆರಾಗಳಿಗೆ ರಶ್ಮಿಕಾ ಮತ್ತು ವಿಜಯ್ ಸೆರೆಯಾಗಿದ್ದರು. ಆ ಫೋಟೋಗಳು ಕೂಡ ಸಖತ್ ವೈರಲ್ ಆಗಿದ್ದವು. ಪ್ರಸ್ತುತ ಹಿಂದಿಯಲ್ಲಿ 'ಮಿಷನ್‌ ಮಜ್ನು' ಮತ್ತು 'ಗುಡ್‌ಬೈ' ಚಿತ್ರಗಳ ಶೂಟಿಂಗ್‌ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಹಾಗಾಗಿ, ಅವರು ಮುಂಬೈನಲ್ಲಿ ನೆಲೆಸಿದ್ದಾರೆ. ಅತ್ತ ವಿಜಯ್ ನಟನೆಯ 'ಲೈಗರ್‌' ಸಿನಿಮಾದ ಕೆಲಸಗಳು ಕೂಡ ಮುಂಬೈನಲ್ಲಿ ಸಾಗಿವೆ. ಆ ಸಿನಿಮಾ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ನಿರ್ಮಾಣವಾಗುತ್ತಿದೆ. ಬಾಲಿವುಡ್‌ ನಿರ್ಮಾಪಕರು ಹಣ ಹಾಕುತ್ತಿದ್ದಾರೆ. ಇನ್ನು, ತಮಿಳು, ತೆಲುಗು, ಹಿಂದಿ ಅಂತ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿರುವ ರಶ್ಮಿಕಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 2 ಕೋಟಿ ಬೆಂಬಲಿಗರು ಆಗಿದ್ದಾರೆ. ಹಾಗಾಗಿ, ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ ಆಫರ್‌ಗಳ ಸುರಿಮಳೆ ಆಗುತ್ತಿದೆ. ರಶ್ಮಿಕಾ ನಟನೆಯ 'ಪೊಗರು' ಮತ್ತು ಮೊದಲ ತಮಿಳು ಸಿನಿಮಾ 'ಸುಲ್ತಾನ್‌' ಈ ವರ್ಷ ತೆರೆಕಂಡಿವೆ. ಅಲ್ಲು ಅರ್ಜುನ್-ರಶ್ಮಿಕಾ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಪುಷ್ಪ' ಸಿನಿಮಾವು ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಜೊತೆಗೆ ತೆಲುಗಿನ ಶರ್ವಾನಂದ್‌ ಜೊತೆಗೆ 'ಆಡವಾಳ್ಳು ಮೀಕು ಜೋಹಾರ್ಲು' ಎಂಬ ಸಿನಿಮಾದ ಶೂಟಿಂಗ್‌ನಲ್ಲಿ ಸದ್ಯ ಸಕ್ರಿಯರಾಗಿದ್ದಾರೆ.