ಕೋವಿಡ್-19: ರಾಮ್‌ ಗೋಪಾಲ್ ವರ್ಮ ಸಂಬಂಧಿ, ನಿರ್ದೇಶಕ ಪಿ.ಸೋಮಶೇಖರ್ ನಿಧನ

ರಾಮ್ ಗೋಪಾಲ್ ವರ್ಮಾ ಸಂಬಂಧಿ, ನಿರ್ದೇಶಕ ಪಿ.ಸೋಮಶೇಖರ್ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್-19: ರಾಮ್‌ ಗೋಪಾಲ್ ವರ್ಮ ಸಂಬಂಧಿ, ನಿರ್ದೇಶಕ ಪಿ.ಸೋಮಶೇಖರ್ ನಿಧನ
Linkup
ರಾಮ್ ಗೋಪಾಲ್ ವರ್ಮಾ ಸಂಬಂಧಿ, ನಿರ್ದೇಶಕ ಪಿ.ಸೋಮಶೇಖರ್ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ನಿಂದ ಬಳಲುತ್ತಿದ್ದ ಪಿ.ಸೋಮಶೇಖರ್, ಹೈದರಾಬಾದ್‌ನಲ್ಲಿನ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಮೇ 23) ನಿಧನರಾಗಿದ್ದಾರೆ. ರಾಮ್‌ ಗೋಪಾಲ್ ವರ್ಮಾ ಜೊತೆಗೆ 'ರಂಗೀಲಾ', 'ದೌಡ್', 'ಸತ್ಯ', 'ಜಂಗಲ್', 'ಕಂಪನಿ' ಮುಂತಾದ ಚಿತ್ರಗಳಲ್ಲಿ ಪಿ.ಸೋಮಶೇಖರ್ ಕೆಲಸ ಮಾಡಿದ್ದರು. ಅನುರಾಗ್ ಕಶ್ಯಪ್, ಅರ್ಜಿತ್ ಸೇನ್ ಗುಪ್ತಾ ಕಥೆ-ಚಿತ್ರಕಥೆ ರಚಿಸಿದ್ದ 'ಮುಸ್ಕುರಾಕೆ ದೇಖ್ ಝರಾ' ಚಿತ್ರಕ್ಕೆ ಪಿ.ಸೋಮಶೇಖರ್ ಆಕ್ಷನ್ ಕಟ್ ಹೇಳಿದ್ದರು. ಪಿ.ಸೋಮಶೇಖರ್ ನಿಧನಕ್ಕೆ ನಿರ್ದೇಶಕ ಕಂಬನಿ ಮಿಡಿದಿದ್ದಾರೆ. ''ಕೋವಿಡ್‌ಗೆ ನನ್ನ ಸಂಬಂಧಿ ಪಿ.ಸೋಮಶೇಖರ್ ಬಲಿಯಾಗಿದ್ದಾರೆ. ನನ್ನ ಜೀವನದಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಕಳೆದ ಕೆಲ ವರ್ಷಗಳಿಂದ ಅವರು ನನ್ನೊಂದಿಗೆ ಇರಲಿಲ್ಲ. ಬೇರೆ ಉದ್ಯಮದಲ್ಲಿ ತೊಡಗಿದ್ದರು. ಆದರೂ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮ. ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಸತ್ಯ' ಚಿತ್ರದಲ್ಲಿ ಜೆಡಿ ಚಕ್ರವರ್ತಿ ಜೊತೆಗೆ ಪಿ.ಸೋಮಶೇಖರ್ ಕೆಲಸ ಮಾಡಿದ್ದರು. ಪಿ.ಸೋಮಶೇಖರ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಜೆಡಿ ಚಕ್ರವರ್ತಿ, ''ನಾವು ರಾಮ್ ಗೋಪಾಲ್ ವರ್ಮಕ್ಕಿಂತ ಹೆಚ್ಚು ಶೇಖರ್‌ಗೆ ಹೆದರುತ್ತಿದ್ವಿ. ಅವರು ಶಿಸ್ತಿನ ಸಿಪಾಯಿ. ರಾಮುಜಿ ಬಳಿ ಅವರೆಲ್ಲಿ ನಮ್ಮ ಬಗ್ಗೆ ಕಂಪ್ಲೇಂಟ್ ಮಾಡ್ತಾರೋ ಎಂಬ ಭಯ ಕಾಡುತ್ತಿರುತ್ತಿತ್ತು. ಶೇಖರ್ ಹಾಗೂ ನನ್ನ ಲೈಕಿಂಗ್ ಒಂದೇ ಇರುತ್ತಿತ್ತು. ಮುಂಬೈನಲ್ಲಿ 'ಸತ್ಯ' ಶೂಟಿಂಗ್ ಮಾಡುವಾಗ ನಾವಿಬ್ಬರೂ ಒಂದೇ ಫ್ಲಾಟ್‌ಅನ್ನು ಮೆಚ್ಚಿಕೊಂಡಿದ್ವಿ. ಮೊದಮೊದಲು ಇಬ್ಬರೂ ವಾಗ್ವಾದ ನಡೆಸುತ್ತಿದ್ವಿ. ಬಳಿಕ ಉತ್ತಮ ಸ್ನೇಹಿತರಾದ್ವಿ'' ಅಂತ ಹೇಳಿ ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ''ಈ ಮಾರಣಾಂತಿಕ ಕಾಯಿಲೆ ಪಿ.ಸೋಮಶೇಖರ್ ಅವರನ್ನು ಬಲಿ ಪಡೆದಿದೆ. ಪಿ.ಸೋಮಶೇಖರ್ ಅವರನ್ನು ರಾಮುಜಿ ಹೆಚ್ಚು ಮಿಸ್ ಮಾಡಿಕೊಳ್ಳುತ್ತಾರೆ'' ಅಂತ ಜೆಡಿ ಚಕ್ರವರ್ತಿ ಹೇಳಿದ್ದಾರೆ.