ಅಲ್ಲಿ ಕೂತಿರುವಾಗ ಅಪ್ಪು ಮಕ್ಕಳ ಬಗ್ಗೆ ಯೋಚನೆಯಾಯ್ತು: ಪುನೀತ್‌ಗೆ ಸುದೀಪ್ ಭಾವುಕ ಬೀಳ್ಕೊಡುಗೆ

ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದಲ್ಲಿ ಕಿಚ್ಚ ಸುದೀಪ್ ಕೂಡ ಪಾಲ್ಗೊಂಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಡು ಸುದೀಪ್ ಕಣ್ಣೀರಿಟ್ಟರು. ಇದೀಗ ಪುನೀತ್ ರಾಜ್‌ಕುಮಾರ್ ಅವರಿಗೆ ಸುದೀಪ್ ನುಡಿ ನಮನ ಸಲ್ಲಿಸಿದ್ದಾರೆ. ಟ್ವೀಟ್ ಮೂಲಕ ಅಪ್ಪುಗೆ ಸುದೀಪ್ ಭಾವುಕ ಬೀಳ್ಕೊಡುಗೆ ನೀಡಿದ್ದಾರೆ.

ಅಲ್ಲಿ ಕೂತಿರುವಾಗ ಅಪ್ಪು ಮಕ್ಕಳ ಬಗ್ಗೆ ಯೋಚನೆಯಾಯ್ತು: ಪುನೀತ್‌ಗೆ ಸುದೀಪ್ ಭಾವುಕ ಬೀಳ್ಕೊಡುಗೆ
Linkup
ಇಷ್ಟು ದಿನ ಬೆಳ್ಳಿಪರದೆ ಮೇಲೆ ಪ್ರಜ್ವಲಿಸಿದ್ದ ಪವರ್ ಸ್ಟಾರ್ ಈಗ ಭೂತಾಯಿಯ ಒಡಲು ಸೇರಿದ್ದಾರೆ. ಅಪ್ಪ ಡಾ.ರಾಜ್‌ಕುಮಾರ್ ಮತ್ತು ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಪಕ್ಕದಲ್ಲೇ ಮಣ್ಣಲ್ಲಿ ಮಣ್ಣಾಗಿದ್ದಾರೆ. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರ ನಡೆಯಿತು. ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದಲ್ಲಿ ಕೂಡ ಪಾಲ್ಗೊಂಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಡು ಸುದೀಪ್ ಕಣ್ಣೀರಿಟ್ಟರು. ಇದೀಗ ಪುನೀತ್ ರಾಜ್‌ಕುಮಾರ್ ಅವರಿಗೆ ಸುದೀಪ್ ನುಡಿ ನಮನ ಸಲ್ಲಿಸಿದ್ದಾರೆ. ಟ್ವೀಟ್ ಮೂಲಕ ಅಪ್ಪುಗೆ ಸುದೀಪ್ ಭಾವುಕ ಬೀಳ್ಕೊಡುಗೆ ನೀಡಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ ಕಿಚ್ಚ ಸುದೀಪ್ ಅವರ ಭಾವುಕ ಬೀಳ್ಕೊಡುಗೆ ‘’ಕಳೆದ ಮೂರು ದಿನಗಳಿಂದ ಘನತೆ ಮತ್ತು ಶಿಸ್ತಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರ ಸಕಲ ವ್ಯವಸ್ಥೆಯನ್ನೂ ಮಾಡಿದ್ದರು. ಇದಕ್ಕಾಗಿ ಶ್ರಮಿಸಿದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ನನ್ನ ಧನ್ಯವಾದಗಳು. ಪುನೀತ್ ರಾಜ್‌ಕುಮಾರ್ ಅವರಿಗೆ ಬೀಳ್ಕೊಡುಗೆ ನೀಡುವಲ್ಲಿ ನೀವೆಲ್ಲಾ ಪ್ರಮುಖ ಪಾತ್ರ ನಿರ್ವಹಿಸಿದ್ದೀರಿ’’ ‘’ಈಗ ಎಲ್ಲವೂ ಮುಗಿದಿದೆ. ಎಲ್ಲವೂ ನಾರ್ಮಲ್ ಆಗಬೇಕೆಂದ್ರೆ ಇನ್ನೂ ಹಲವು ದಿನಗಳು ಬೇಕು. ಪುನೀತ್ ನಿಧನದಿಂದ ನಮಗೆ ನಷ್ಟ ಮಾತ್ರ ಅಲ್ಲ, ಇಡೀ ಇಂಡಸ್ಟ್ರಿಯೇ ಆಘಾತಕ್ಕೆ ಒಳಗಾಗಿದೆ. ಒಂದು ಅತ್ಯದ್ಭುತ ಅಧ್ಯಾಯ ಇಂದು ಕೊನೆಗೊಂಡಿದೆ’’ ‘’ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾನಲ್ಲಿ ಕೂತಿರುವಾಗ, ಅವರ ಮಕ್ಕಳ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಿದ್ದೆ. ಅಲ್ಲಿದ್ದ ಹಿರಿಯರ ಪರಿಸ್ಥಿತಿ ಬಗ್ಗೆ ಯೋಚಿಸುತ್ತಿದ್ದೆ. ಈ ಆಲೋಚನೆಗಳಿಂದ ಮನಸ್ಸಿಗೆ ಬೇಸರ ಉಂಟಾಗಿದೆ’’ ‘’ಪುನೀತ್ ಎಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಪಾತ್ರರಾಗಿದ್ದವರು. ಇಂದು ಬೆಳಗ್ಗೆ ಅವರ ತಂದೆ ತಾಯಿಯ ಪಕ್ಕದಲ್ಲೇ ಭೂತಾಯಿಯ ಒಡಿಲು ಸೇರಿದಾಗ ನನ್ನ ಮನಸ್ಸಿಗೆ ಬಂದಿದ್ದು ಒಂದೇ - ‘’ಪುನೀತ್ ರಾಯಲ್ ಆಗಿ ಹುಟ್ಟಿದರು, ರಾಯಲ್ ಆಗಿ ಬೆಳೆದರು, ರಾಯಲ್ ಆಗಿ ಜೀವನ ಸಾಗಿಸಿದರು, ರಾಯಲ್ ಆಗೇ ನಮ್ಮನ್ನೆಲ್ಲ ಬಿಟ್ಟು ಹೊರಟರು’’ ‘’ನಮ್ಮೆಲ್ಲರ ಪ್ರೀತಿಯ ಈ ತಾರೆ ಇದೀಗ ಅಂಬರ ಸೇರಿದೆ. ರಾತ್ರಿ ಹೊತ್ತು ಆಕಾಶ ನೋಡುವಾಗ, ಮಿಕ್ಕೆಲ್ಲಾ ನಕ್ಷತ್ರಗಳಿಗಿಂತ ಅವರು ಹೆಚ್ಚು ಪ್ರಜ್ವಲಿಸುತ್ತಾರೆ ಎಂಬ ನಂಬಿಕೆ ನನಗಿದೆ. ಆತ್ಮೀಯ ಗೆಳೆಯನಿಗೆ ಭಾವುಕ ಬೀಳ್ಕೊಡುಗೆ…’’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಟ ಪುನೀತ್ ರಾಜ್‌ಕುಮಾರ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ, 'ಬೆಟ್ಟದ ಹೂವು' 'ಪರಮಾತ್ಮ'ನ ಮುಡಿ ಸೇರಿದೆ. ಕಣ್ಣೀರ ಕಡಲಲ್ಲಿ ಅಪ್ಪು ಅವರನ್ನು ಕುಟುಂಬಸ್ಥರು, ಚಿತ್ರರಂಗ ಬೀಳ್ಕೊಟ್ಟಿದೆ. ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅವರು ಅಂತ್ಯಕ್ರಿಯೆಯ ವಿಧಿ ವಿಧಾನ ನೆರವೇರಿಸಿದ್ದಾರೆ.