'ಅಗೋಚರ'ವಾದ ದರ್ಶನ್ 'ವಿರಾಟ್' ಸಿನಿಮಾ ನಾಯಕಿ ಇಶಾ ಚಾವ್ಲಾ; 5 ವರ್ಷದಿಂದ ನಾಪತ್ತೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ವಿರಾಟ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಇಶಾ ಚಾವ್ಲಾ ಏಳು ವರ್ಷಗಳ ನಂತರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಆ ಕುರಿತ ಮಾಹಿತಿ ಇಲ್ಲಿದೆ.

'ಅಗೋಚರ'ವಾದ ದರ್ಶನ್ 'ವಿರಾಟ್' ಸಿನಿಮಾ ನಾಯಕಿ ಇಶಾ ಚಾವ್ಲಾ; 5 ವರ್ಷದಿಂದ ನಾಪತ್ತೆ!
Linkup
ಚಾಲೆಂಜಿಂಗ್ ಸ್ಟಾರ್ 'ವಿರಾಟ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಅವರು ಕಳೆದ ಕೆಲ ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇದಕ್ಕೆ ಕಾರಣವೇನು? ಈಗ ಏನು ಮಾಡುತ್ತಿದ್ದಾರೆ? ಮಾಡಿದ್ದು ಕೆಲವೇ ಕೆಲವು ಸಿನಿಮಾ 2007ರಲ್ಲಿ ತೆಲುಗು ಸಿನಿಮಾ 'ಪ್ರೇಮ ಕಾವಾಲಿ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು 2016ರವರೆಗೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಸುನೀಲ್ ಜೊತೆಗೆ 'ಪೂಲ್ ರಂಗುಡು', 'ಮಿಸ್ಟರ್ ಪೆಲ್ಲಿಕುಡುಕು', ನಂದಮೂರಿ ಬಾಲಕೃಷ್ಣ ಜೊತೆಗೆ 'ಶ್ರೀಮನ್ನಾರಾಯಣ', ಅಲ್ಲಾರಿ ನರೇಶ್ ಜೊತೆಗೆ 'ಜಂಪ್ ಜಿಲನಿ' ಸಿನಿಮಾದಲ್ಲಿ ನಟಿಸಿದ್ದರು. ಕೊನೆಯ ಸಿನಿಮಾ ಅರ್ಧಕ್ಕೆ ನಿಂತಿತು ಇಶಾ ಚಾವ್ಲಾ ತೆರೆ ಮೇಲೆ ಕಾಣಿಸಿಕೊಂಡು 5 ವರ್ಷಗಳಾಗಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 'ವಿರಾಟ್' ಸಿನಿಮಾದಲ್ಲಿ ನಟಿಸಿದ ನಂತರ ಅವರಿಗೆ ಕಮರ್ಷಿಯಲ್ ಆಗಿ ಗೆಲುವು ಸಿಕ್ಕಿತು. ಆ ನಂತರ ಕೆಲ ಅವಕಾಶಗಳು ಬಂದವು. 2016ರಲ್ಲಿ ಎಂಎಸ್‌ ರಾಜು ಅವರು 'ರಮ್' ಸಿನಿಮಾಕ್ಕೆ ಇಶಾ ಸಹಿ ಹಾಕಿದರು. ಅದರಲ್ಲಿ ತ್ರಿಶಾ ಕೃಷ್ಣನ್, ನಿಕೇಶಾ ಪಟೇಲ್ ಕೂಡ ಇದ್ದರು. ಮಾಲ್ಡೀವ್ಸ್‌ನಲ್ಲಿ ಶೂಟಿಂಗ್ ಆದ ಬಳಿಕ ಆ ಸಿನಿಮಾ ನಿಂತಿತು. ವಿಶೇಷಚೇತನ ಮಕ್ಕಳಿಗೆ ನೆರವು ಇಶಾ ಚಾವ್ಲಾ ಅವರು 'ಅಮನ್ಯಾ ಫೌಂಡೇಶನ್' ಎಂಬ ಎನ್‌ಜಿಒ ಆರಂಭಿಸಿದ್ದಾರೆ. ಅಲ್ಲಿ ವಿಶೇಷಚೇತನ ಮಕ್ಕಳಿಗೆ ಕಲೆ ಹೇಳಿಕೊಡಲಾಗುವುದು. 'ಜುಂಗು' ಎಂಬ ನಾಟಕಕ್ಕಾಗಿ ಎನ್‌ಜಿಒದ ತಂಡ 2017ರಲ್ಲಿ ಶ್ರೀಲಂಕಾಕ್ಕೆ ತೆರಳಿತ್ತು. ಸದ್ಯ ಅವರು ವಿಶೇಷಚೇತನ ಮಕ್ಕಳ ಬದುಕಲ್ಲಿ ಬದಲಾವಣೆ ತರಲು ಪ್ರಯತ್ನಪಡುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರು 'ಅಗೋಚರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಇಶಾ ಅಂಧೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂಧೆಯ ಪಾತ್ರದಲ್ಲಿ ಇಶಾ ಚಾವ್ಲಾ 'ಅಂಧೆಯ ಪಾತ್ರ ಮಾಡೋದು ಭಾವನಾತ್ಮವಾಗಿ, ದೈಹಿಕವಾಗಿ ಕಷ್ಟದ ಕೆಲಸ. ನಿಜಕ್ಕೂ ಈ ಪಾತ್ರ ನನಗೆ ಒಳ್ಳೆಯ ಅನುಭವ ಕೊಡಲಿದೆ' ಎಂದು ಇಶಾ ಹೇಳಿಕೊಂಡಿದ್ದಾರೆ. ಇಶಾ ಪತಿಯಾಗಿ ನಟ ಕಮಲ್ ಕಾಮರಾಜು ಕಾಣಿಸಿಕೊಳ್ಳಲಿದ್ದಾರಂತೆ. ಅಂದಹಾಗೆ ಇಷ್ಟು ವರ್ಷಗಳ ಕಾಲ ಇಶಾ ಯಾಕೆ ನಟಿಸಲಿಲ್ಲ ಎಂಬುದನ್ನು ಅವರು ಇನ್ನೂ ಹೇಳಿಲ್ಲ.