'ಅತಿ ಹೆಚ್ಚು ಸಂಭಾವನೆ' ಬಗ್ಗೆ ಕೊನೆಗೂ ಕಾಮೆಂಟ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್!

ಟಾಲಿವುಡ್ ನಟ ಜೂ. ಎನ್‌ಟಿಆರ್ ಅವರ 31ನೇ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಇದೇ ಚಿತ್ರಕ್ಕಾಗಿ ತಾವು ಪಡೆಯುತ್ತಿರುವ ಸಂಭಾವನೆ ವಿಚಾರವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದಾರೆ.

'ಅತಿ ಹೆಚ್ಚು ಸಂಭಾವನೆ' ಬಗ್ಗೆ ಕೊನೆಗೂ ಕಾಮೆಂಟ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್!
Linkup
ಕನ್ನಡ ನಿರ್ದೇಶಕ, 'ಉಗ್ರಂ' ಮತ್ತು 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ಬಗ್ಗೆ ಇತ್ತೀಚೆಗಷ್ಟೇ ತೆಲುಗು ಸಿನಿ ಅಂಗಳದಲ್ಲಿ ಗುಸು ಗುಸು ಕೇಳಿಬಂದಿತ್ತು. ಸದ್ಯ 'ಸಲಾರ್' ಚಿತ್ರದಲ್ಲಿ ಬಿಜಿಯಾಗಿರುವ ಪ್ರಶಾಂತ್ ನೀಲ್, ಅದು ಮುಗಿದ ಬಳಿಕ ಜೂನಿಯರ್ ಎನ್‌ಟಿಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅವರ 31ನೇ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಇದೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ 10-15 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ ಎಂಬ ಗುಲ್ಲು ಟಾಲಿವುಡ್ ತುಂಬೆಲ್ಲಾ ಹಬ್ಬಿದೆ. ಈಗಾಗಲೇ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಿರ್ದೇಶಕ ಪ್ರಶಾಂತ್ ನೀಲ್‌ಗೆ 15 ಕೋಟಿ ರೂಪಾಯಿ ಚೆಕ್ ನೀಡಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಹಾಗಾದ್ರೆ, ನಿರ್ದೇಶಕ ಪ್ರಶಾಂತ್ ನೀಲ್‌ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಾ? ತಮ್ಮ ಸಂಭಾವನೆ ವಿಚಾರದ ಬಗ್ಗೆ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದಾರೆ. ''ಸಂಭಾವನೆ ನನ್ನ ವೈಯಕ್ತಿಕ ವಿಚಾರ'' ಅಂತ್ಹೇಳಿ ಗಾಸಿಪ್ ಪಂಡಿತರ ಬಾಯಿಗೆ ಬೀಗ ಜಡಿದಿದ್ದಾರೆ ಪ್ರಶಾಂತ್ ನೀಲ್. ''ಸಂಭಾವನೆ ನನ್ನ ವೈಯಕ್ತಿಕ ವಿಷಯ. ಪ್ರಸ್ತುತ ನಾನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂಬುದನ್ನು ನಾನು ನಂಬಲ್ಲ. ಮೇಲಾಗಿ ಸಂಭಾವನೆ ಬಗ್ಗೆ ನಾವು ಚರ್ಚೆ ಮಾಡಲೇಬಾರದು'' ಎಂದು ಪ್ರಶಾಂತ್ ನೀಲ್ ಕಾಮೆಂಟ್ ಮಾಡಿದ್ದಾರೆ. ಅಂದ್ಹಾಗೆ, ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್: ಚಾಪ್ಟರ್ 2' ಬಿಡುಗಡೆಯಾಗಬೇಕಿದೆ. ಅತ್ತ ಜೂ. ಎನ್‌ಟಿಆರ್ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಬಿಜಿಯಾಗಿದ್ದು, ಅದು ಮುಗಿದ ಬಳಿಕ ಮತ್ತೊಂದು ಚಿತ್ರದಲ್ಲಿ ತೊಡಗಲಿದ್ದಾರೆ. ಅದು ಕಂಪ್ಲೀಟ್ ಆದ ನಂತರವಷ್ಟೇ ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಕಾಂಬಿನೇಶನ್‌ನ ಚಿತ್ರ ಸೆಟ್ಟೇರಲಿದೆ.