ಮಗ ರಾಯನ್ ರಾಜ್ ಸರ್ಜಾ ನಾಮಕರಣದಲ್ಲಿಯೂ ಕೊಂಕು ತೆಗೆದವರಿಗೆ ಉತ್ತರ ನೀಡಿದ ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ಅವರ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹಿಂದು, ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಆ ಬಗ್ಗೆ ಕೆಲವರು ಕೊಂಕು ಮಾತನಾಡಿದ್ದರು. ನೆಗೆಟಿವ್ ಮಾತುಗಳಿಗೆ ಮೇಘನಾ ರಾಜ್ ಉತ್ತರ ನೀಡಿದ್ದಾರೆ.

ಮಗ ರಾಯನ್ ರಾಜ್ ಸರ್ಜಾ ನಾಮಕರಣದಲ್ಲಿಯೂ ಕೊಂಕು ತೆಗೆದವರಿಗೆ ಉತ್ತರ ನೀಡಿದ ನಟಿ ಮೇಘನಾ ರಾಜ್
Linkup
ನಟಿ ಹಾಗೂ ದಿ ಪುತ್ರನಿಗೆ 10 ತಿಂಗಳು ತುಂಬಿದೆ. ಈ ಖುಷಿ ಜೊತೆಗೆ ನಾಮಕರಣವೂ ನಡೆದಿದೆ. ಮಗ ಹುಟ್ಟಿದಾಗಿನಿಂದ ಯಾವಾಗ ನಾಮಕರಣ ಮಾಡುತ್ತೀರಿ ಎಂದು ಮೇಘನಾಗೆ ಪ್ರಶ್ನೆ ಮಾಡಲಾಗುತ್ತಿತ್ತಂತೆ. ಈಗ ಹಿಂದು ಹಾಗೂ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ಪ್ರಕಾರ ನಾಮಕರಣ ನಡೆದಿದೆ. ಎಂದು ನಾಮಕರಣ ಮಾಡಲಾಗಿದೆ. ಎರಡು ಧರ್ಮದ ಪ್ರಕಾರ ನಾಮಕರಣ ಮಾಡಿದ್ದಕ್ಕೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಅದಕ್ಕೆ ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ. ಬೆಳ್ಳಿ ತೊಟ್ಟಿಲ ಶಾಸ್ತ್ರ! ಮಗನ ನಾಮಕರಣದ ಸುಂದರ ವಿಡಿಯೋವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾಮಕರಣಕ್ಕೆ ಮೇಘನಾ ರಾಜ್, ಚಿರಂಜೀವಿ ಸರ್ಜಾ ಕುಟುಂಬಸ್ಥರು ಆಗಮಿಸಿದ್ದರು. ಧ್ರುವ ಸರ್ಜಾ ತಂದ ಬೆಳ್ಳಿ ತೊಟ್ಟಿಲ ಶಾಸ್ತ್ರವೂ ನಡೆದಿದೆ. ಸೌಥ್ ಆಫ್ರಿಕಾದಲ್ಲಿ ಇದ್ದಿದ್ದರಿಂದ ಅರ್ಜುನ್ ಸರ್ಜಾ ಮನೆಯವರು ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ ವಿಡಿಯೋ ಕಾಲ್ ಮೂಲಕ ಈ ಕಾರ್ಯಕ್ರಮವನ್ನು ಅವರು ವೀಕ್ಷಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಇಲ್ಲಸಲ್ಲದ ವಿಡಿಯೋ ಮಾಡಿ ಪ್ರಸಾರ ನಿರ್ದೇಶಕ ಪನ್ನಗಾಭರಣ, ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್, ಅಭಿಷೇಕ್ ಅಂಬರೀಷ್, ಸುಮಲತಾ ಅಂಬರೀಷ್ ಮುಂತಾದವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಾಮಕರಣದ ನಂತರ ಮೇಘನಾ ಸುದ್ದಿಗೋಷ್ಠಿ ನಡೆಸಿ ಖುಷಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಇಲ್ಲಸಲ್ಲದ ವಿಷಯಗಳನ್ನು ಕೆಲವರು ಹಬ್ಬಿಸುತ್ತಿರೋದರಿಂದ ಅದರ ಬಗ್ಗೆಯೂ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ ಅವರು ಮಾತನಾಡಿ, ಬೇಸರ ಹೊರಹಾಕಿದ್ದಾರೆ. 'ನನ್ನ ಮಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ, ಯಾರೂ ಬೇಕಿಲ್ಲ' ಎಂದಿದ್ದಾರೆ. ಮೇಘನಾ ರಾಜ್ ಹೇಳಿದ್ದೇನು? ತಾಯಿಯಾಗಿ ಮಗನಿಗೆ ಯಾವುದು ಉತ್ತಮವೋ ಅದನ್ನೇ ಮಾಡುವುದು ಮುಖ್ಯವಾಗುತ್ತದೆ. ಪಾಲಕರು ಎರಡು ಜಗತ್ತಿನಲ್ಲಿ ಇರುವ ಉತ್ತಮವಾದುದನ್ನು ಎಂಜಾಯ್ ಮಾಡಿದಂತೆ ಯಾಕೆ ಮಾಡಬಾರದು? ನಾವು ಮಗನಿಗೋಸ್ಕರ, ನಮ್ಮ ಕುಟುಂಬಕ್ಕೋಸ್ಕರ ಮಾಡಿದ ಪ್ರಾರ್ಥನೆ ವಿಚಾರದಲ್ಲಿ ಜನರಿಗೆ ಧರ್ಮ, ಜಾತಿ ವಿಷಯವಾಗಿ ಅಗೌರವವಿರಬಹುದು. ನಾವು ಮೇಲಿರುವ ಎಲ್ಲ ದೇವರ ಬಳಿ ಆಶೀರ್ವಾದ ಬೇಡುತ್ತೇವೆ. ಅದು ನನಗೆ ಎರಡು ಮಾರ್ಗದಲ್ಲಿ ಮಾಡೋದು ಮುಖ್ಯವಾಗಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಮಾನವೀಯತೆ ಮುಖ್ಯ ಎಂದು ನನ್ನ ಮಗನ ತಂದೆ, ನಮ್ಮ ರಾಜ ನಂಬಿದ್ದರು. ಎರಡು ಸಂಪ್ರದಾಯಗಳನ್ನು ಆಚರಿಸಿದ್ದೇವೆ. ಸಂಸ್ಕೃತದಲ್ಲಿ ರಾಯನ್ ಎಂದರೆ ರಾಜ ಎಂದರ್ಥ. ಆಂತೆಯೇ ಈ ಹೆಸರು ಎಲ್ಲ ಧರ್ಮಕ್ಕೂ ಸೇರುತ್ತದೆ. ಅದು ವಿಭಿನ್ನ ಆವೃತ್ತಿ, ಉಚ್ಛಾರ ಆಗಿರಬಹುದು, ಆದರೆ ಅರ್ಥ ಮಾತ್ರ ಒಂದೇ. ನಮ್ಮ ಹೆಮ್ಮೆ, ನಮ್ಮ ರಾಜ ರಾಯನ್ ರಾಜ್ ಸರ್ಜಾ ಹೆಸರನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ನನ್ನ ಮಗ ಅಪ್ಪನಂತೆ ಬೆಳೆಯುತ್ತಾನೆ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರೀತಿಸುತ್ತಾನೆ, ಯಾವ ಬ್ಯಾಗ್ರೌಂಡ್ ಎಂದು ಲೆಕ್ಕಿಸದೆ ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡುತ್ತಾನೆ.