ಕೇರಳದಲ್ಲಿ ಬಕ್ರೀದ್‌ಗೆ ಕೊರೊನಾ ನಿಯಮ ಸಡಿಲಿಕೆ: ಐಎಂಎ ಆಕ್ಷೇಪ, ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಎಚ್ಚರಿಕೆ!

ಬಕ್ರೀದ್‌ ಹಿನ್ನೆಲೆಯಲ್ಲಿ ಕೊರೊನಾ ನಿರ್ಬಂಧಗಳನ್ನು ಕೇರಳ ಸರಕಾರವು ಸಡಿಲಗೊಳಿಸಿದೆ. ಈ ಬಗ್ಗೆ ವಿರೋಧ ಚರ್ಚೆಗಳು ಶುರುವಾಗಿದೆ. ಒಲೈಕೆ ಹಿನ್ನೆಲೆ ಕೇರಳ ಸರಕಾರ ಈ ರೀತಿ ಮಾಡಿದೆ ಎಂದು ಆರೋಪಿಸಿದೆ. ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಘ ನಿಯಮ ಸಡಿಲಿಕೆ ಹಿಂಪಡೆಯಿರಿ, ಇಲ್ಲದಿದ್ದರೆ ಕೋರ್ಡ್‌ ಮೆಟ್ಟಿಲೇರುತ್ತೇವೆ ಎಂದಿದ್ದಾರೆ.

ಕೇರಳದಲ್ಲಿ ಬಕ್ರೀದ್‌ಗೆ ಕೊರೊನಾ ನಿಯಮ ಸಡಿಲಿಕೆ: ಐಎಂಎ ಆಕ್ಷೇಪ, ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಎಚ್ಚರಿಕೆ!
Linkup
ಕೊಚ್ಚಿ: ಬಕ್ರೀದ್‌ ಹಿನ್ನೆಲೆಯಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಕೇರಳ ಸರಕಾರವು ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು (ಐಎಂಎ) ಒತ್ತಾಯಿಸಿದೆ. ಇಲ್ಲದಿದ್ದರೆ ಕೋರ್ಟ್‌ ಮೆಟ್ಟಿಲೇರುವುದಾಗಿ ಎಚ್ಚರಿಸಿದೆ. ''ಉತ್ತರ ಪ್ರದೇಶ, ಜಮ್ಮು, ಉತ್ತರಾಖಂಡದಲ್ಲಿ ಧಾರ್ಮಿಕ ಯಾತ್ರೆಗಳನ್ನು ರದ್ದುಗೊಳಿಸಲಾಗಿದೆ. ಜನ ಸಾಮೂಹಿಕವಾಗಿ ಸೇರುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರೇ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಕೇರಳ ಸರಕಾರವು ನಿಯಮ ಸಡಿಲಗೊಳಿಸಿರುವುದು ಬೇಸರ ತಂದಿದೆ. ಕೂಡಲೇ ಸರಕಾರವು ನಿರ್ಧಾರ ಬದಲಿಸಿ ಜನ ಗುಂಪು ಸೇರದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು. ಸರಕಾರ ಹಾಗೆ ಮಾಡದಿದ್ದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್‌ ಮೆಟ್ಟಿಲೇ ರಲಿದ್ದೇವೆ,'' ಎಂದು ಐಎಂಎ ಕೇರಳ ಘಟಕ ಎಚ್ಚರಿಸಿದೆ.