ಹಾಡಹಗಲೇ ಬೆಂಗಳೂರಿನ ರೌಡಿಶೀಟರ್‌ ಕೊಲೆ : ಫುಟ್‌ಬಾಲ್‌ ಮೈದಾನದಲ್ಲಿ ಅಟ್ಟಾಡಿಸಿ ಹತ್ಯೆ

ಆತ ಎಂದಿನಂತೆ ಫುಟ್‌ಬಾಲ್‌ ಆಡಲು ಮೈದಾನಕ್ಕೆ ಬಂದಿದ್ದ ಆದರೆ ಏಕಾಏಕಿ ಗುಂಪೊಂದು ಆತನ ಮೇಲೆ ದಾಳಿ ನಡೆಸಿದೆ. ದಾಳಿಗೆ ರೌಡಿಶೀಟರ್‌ ಹತ್ಯೆಯಾಗಿ ಹೋಗಿದ್ದಾನೆ. ಅಲ್ಲಿ ಆಟ ಆಡಲು ಬಂದವರು ಈ ಘಟನೆ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾಡಹಗಲೇ ಬೆಂಗಳೂರಿನ ರೌಡಿಶೀಟರ್‌ ಕೊಲೆ : ಫುಟ್‌ಬಾಲ್‌ ಮೈದಾನದಲ್ಲಿ ಅಟ್ಟಾಡಿಸಿ ಹತ್ಯೆ
Linkup
ಬೆಂಗಳೂರು: ಫುಟ್‌ಬಾಲ್‌ ಆಟವಾಡಲು ಬಂದಿದ್ದ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುಲಿಕೇಶಿನಗರದ ಅರವಿಂದ್‌ ಅಲಿಯಾಸ್‌ ಲೀ(30) ಹತ್ಯೆಯಾದ ರೌಡಿ. ಕಮಿಷನರೇಟ್‌ ರಸ್ತೆ ಶಾಂತಲಾನಗರದಲ್ಲಿರುವ ರಾಜ್ಯ ಫುಟ್‌ಬಾಲ್‌ ಅಸೋಸಿಯೇಷನ್‌(ಕೆಎಸ್‌ಎಫ್‌ಎ) ಆವರಣದಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆ ವೇಳೆ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೇ ವೈಷಮ್ಯವೇ ಕೊಲೆಗೆ ಕಾಧಿರಧಿಣ ಎಂದು ಶಂಕಿಸಲಾಗಿದೆ. ಐದಾರು ಮಂದಿಯ ಗ್ಯಾಂಗ್‌ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ಪೊಲೀಸ್‌ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್‌ ತಿಳಿಸಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಅರವಿಂದ್‌ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಅಲ್ಲದೆ, ಭಾರತೀನಗರ ಪೊಲೀಸರು ಗೂಂಡಾ ಕಾಯಿದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ಅರವಿಂದ್‌, ಫುಟ್‌ಬಾಲ್‌ ತಂಡವೊಂದರ ವ್ಯವಸ್ಥಾಪಕನಾಗಿದ್ದ. ಭಾನುವಾರ ಫುಟ್‌ಬಾಲ್‌ ಪಂದ್ಯವಿದ್ದ ಕಾರಣಕ್ಕೆ ಸ್ನೇಹಿತರ ಜತೆ ಕೆಎಸ್‌ಎಫ್‌ಎ ಮುಂಭಾಗದ ಬಿಬಿಎಂಪಿ ಮೈದಾನಕ್ಕೆ ಬಂದಿದ್ದ. ಪಂದ್ಯ ಮುಗಿದ ಮೇಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿಜ್ಯೂಸ್‌ ಕುಡಿಯುತ್ತಿದ್ದಾಗ ಏಕಾಏಕಿ ಐದಾರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ್ದರು. ಪ್ರಾಣ ಭಯದಿಂದಾಗಿ ಹಂತಕರಿಂದ ತಪ್ಪಿಸಿಕೊಂಡ ಅರವಿಂದ್‌, ಕೆಎಸ್‌ಎಫ್‌ಎ ಆವರಣಕ್ಕೆ ತೆರಳಿ ರೆಫ್ರಿ ಕೊಠಡಿ ಒಳ ಪ್ರವೇಶಿಸಿ ಲಾಕ್‌ ಮಾಡಿಕೊಂಡಿದ್ದ. ಆದರೂ ಬಿಡದ ಆರೋಪಿಗಳು ಬಾಗಿಲು ಮುರಿದು ಒಳನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಅರವಿಂದ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ವಿಷಯ ತಿಳಿದ ಅಶೋಕನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಶೋಕನಗರ ಠಾಣೆಯಲ್ಲಿ ದಾಖಲಾಗಿದೆ.