ಹಿಟ್ ಹಾಡುಗಳ ‘ಏಕ್‌ ಲವ್ ಯಾ’: ಹೊಸ ಪ್ರತಿಭೆಗೆ ಅವಕಾಶ ಕೊಟ್ಟ ಪ್ರೇಮ್

ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದ ಹಾಡುಗಳು ಹಿಟ್‌ ಆಗಿವೆ. ಈಗ ಈ ಲಿಸ್ಟ್‌ಗೆ ಮತ್ತೊಂದು ಹಾಡು ಸೇರಿದೆ.

ಹಿಟ್ ಹಾಡುಗಳ ‘ಏಕ್‌ ಲವ್ ಯಾ’: ಹೊಸ ಪ್ರತಿಭೆಗೆ ಅವಕಾಶ ಕೊಟ್ಟ ಪ್ರೇಮ್
Linkup
ಲವಲವಿಕೆ ಸುದ್ದಿಲೋಕ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದ ಹಾಡುಗಳು ಹಿಟ್‌ ಆಗಿವೆ. ಈಗ ಈ ಲಿಸ್ಟ್‌ಗೆ ಮತ್ತೊಂದು ಹಾಡು ಸೇರಿದೆ. ನಟನೆಯ ಚೊಚ್ಚಲ ಚಿತ್ರ ‘ಏಕ್‌ ಲವ್‌ ಯಾ’ದಲ್ಲಿ ರಚಿತಾ ರಾಮ್‌ ಮತ್ತು ರೀಶ್ಮಾ ನಾಣಯ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಈ ಸಿನಿಮಾದ ‘ಅನಿತಾ ಅನಿತಾ’ ಎಂಬ ಹಾಡನ್ನು ರಿಲೀಸ್‌ ಮಾಡಲಾಯಿತು. ಈ ಚಿತ್ರದಲ್ಲಿ ನಿರ್ದೇಶಕ ಪ್ರೇಮ್‌, ಶರಣ್‌ ಎಂಬ ಹೊಸ ಪ್ರತಿಭೆಗೆ ಸಾಹಿತ್ಯ ರಚನೆಯ ಅವಕಾಶ ನೀಡಿದ್ದಾರೆ. ‘ಅನಿತಾ ಅನಿತಾ’ ಹಾಡನ್ನು ಬರೆದವರು ಪಂಚಾಕ್ಷರ ಗವಾಯಿ ಮಠದ ಶಾಲೆಯಲ್ಲಿ ಅಭ್ಯಾಸ ಮಾಡಿದ ಶರಣ್‌. 15 ವರ್ಷಗಳ ಸತತ ಪ್ರಯತ್ನದ ನಂತರ ತಾನು ಬರೆದ ಹಾಡು ಸಿನಿಮಾದಲ್ಲಿ ತೆರೆಯ ಮೇಲೆ ಬರುತ್ತಿರುವುದಕ್ಕೆ ಶರಣ್‌ ಭಾವುಕರಾಗಿದ್ದಾರೆ. ‘ಹಲವು ತಿಂಗಳ ಕಾಲ ಅಲೆದಿದ್ದೆ. ನನಗೆ ಅವಕಾಶವೇ ಸಿಕ್ಕಿರಲಿಲ್ಲ. ಯಾವಾಗ ಪ್ರೇಮ್‌ ಅವರ ಕೈಗೆ ಸಿಕ್ಕೆನೋ ಅಂದು ನನ್ನ ಜೀವನದಲ್ಲಿ ಗೆದ್ದೆ ಎಂದುಕೊಂಡೆ. ಒಂದು ಹಾಡನ್ನು ಹೇಗೆ ಬರೆಯಬೇಕು ಎನ್ನುವುದನ್ನು ಪ್ರೇಮ್‌ ನನಗೆ ಕಲಿಸಿದ್ದಾರೆ. ಒಂದು ಪುಸ್ತಕ ಪೂರ್ತಿ ಬೇರೆ ಬೇರೆ ರೀತಿ ಬರೆಸಿದ್ದಾರೆ. ಅವರು ಕ್ವಾಲಿಟಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಕಣ್ಣೀರಾಗಿದ್ದಾರೆ ಶರಣ್‌. 'ಅನಿತಾ ಅನಿತಾ' ಹಾಡು ಶರಣ್‌ ಅವರು ಸಿನಿಮಾಗಾಗಿ ಬರೆದ ಮೊದಲ ಹಾಡು. ಹಾಡು ಬಿಡುಗಡೆಯ ಸಂದರ್ಭದಲ್ಲಿ ಗಿಫ್ಟ್‌ ಆಗಿ ತಮ್ಮ ಅಮ್ಮನ ಭಾವಚಿತ್ರ ಅನಾವರಣ ಆದಾಗ ಪ್ರೇಮ್‌ ಭಾವುಕರಾಗಿದ್ದಾರೆ. ‘ಅಮ್ಮ ಬೈತಾರೆ ಅಂತ ದೇವರಿಗೆ ನಮಸ್ಕಾರ ಹಾಕುತ್ತಿದ್ದೆ. ಈಗ ಅಮ್ಮ ಹೋದ ನಂತರ ಅಮ್ಮನೇ ನನ್ನ ಪಾಲಿನ ದೇವರು. ಮನೆಯಿಂದ ಹೊರಗೆ ಹೊರಡುವಾಗ ಅಮ್ಮನ ಫೋಟೊಗೆ ಕೈ ಮುಗಿಯುತ್ತೀನಿ’ ಎಂದು ಅಮ್ಮನನ್ನು ನೆನಪಿಸಿಕೊಂಡಿದ್ದಾರೆ ಪ್ರೇಮ್‌. 'ಅನಿತಾ ಅನಿತಾ ಹಾಡು' ಒಂದು ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಶಂಕರ್‌ ಮಹಾದೇವನ್‌ ಈ ಹಾಡನ್ನು ಹಾಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತವಿದೆ. ಎಣ್ಣೆಗೂ ಹೆಣ್ಣಿಗೂ ಹಾಡು ಒಂಬತ್ತು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿ ಹಿಟ್‌ ಆಗಿದೆ. ಈ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಆ್ಯಕ್ಷನ್‌ ಥ್ರಿಲ್ಲರ್‌ ಮತ್ತು ಲವ್‌ ಸ್ಟೋರಿ ಇರುವ ಸಿನಿಮಾ ‘ಏಕ್‌ ಲವ್‌ ಯಾ’. ಇದು ಹೊಸ ವರ್ಷದಲ್ಲಿ ಚಿತ್ರ ತೆರೆಕಾಣಲಿದೆ. ನೈಜ ಘಟನೆ ಆಧರಿತ ಚಿತ್ರ ಇದು. ಟೈಟಲ್‌ ‘ಏಕ್‌ ಲವ್‌ ಯಾ’ ಹಿಂದೆ ಒಂದು ಅರ್ಥವೂ ಇದೆ ಎಂದಿದ್ದಾರೆ ಪ್ರೇಮ್‌. ‘ಏಕ್‌ ಲವ್‌ ಯಾ’ ಎಂದರೆ ಒಂದು ಪ್ರೇಮಕಥೆ. ಅದರ ಜತೆ ‘ಏಕಲವ್ಯ’ ಎಂದಾಕ್ಷಣ ಗುರು- ಶಿಷ್ಯ ನೆನಪಾಗುತ್ತಾರೆ. ಸಿನಿಮಾದಲ್ಲಿ ಇವೆರಡೂ ಇವೆ. ಲವ್‌ ಸ್ಟೋರಿ ಇದೆ ಎಂದಾಕ್ಷಣ ಹೀರೊ, ಹಿರೋಯಿನ್‌ ಮರ ಸುತ್ತುತ್ತಾರೆ ಎಂದುಕೊಳ್ಳಬೇಕಿಲ್ಲ. ಥ್ರಿಲ್ಲರ್‌ ಕಥೆ ಚಿತ್ರದಲ್ಲಿದೆ’ ಎಂದಿದ್ದಾರೆ ಅವರು. ಮದ್ಯಪಾನ ಪ್ರಚೋದಿಸುವುದು ನಮ್ಮ ಹಾಡುಗಳ ಉದ್ದೇಶ ಅಲ್ಲಎಂದಿದ್ದಾರೆ ಅವರು. ‘ನಾವು ಹಾಡುಗಳಲ್ಲಿ ತಪ್ಪು ಸಂದೇಶ ನೀಡುತ್ತಿಲ್ಲ. ನಮ್ಮ ಜನ ಹೇಗೆಂದರೆ ಸಿಗರೇಟ್‌ನಿಂದ ಕ್ಯಾನ್ಸರ್‌ ಬರುತ್ತೆ ಅಂತ ಸ್ಕ್ರೀನ್‌ನಲ್ಲಿ ತೋರಿಸಿದರೂ ಸಿಗರೇಟ್‌ ಸೇದುತ್ತಾರೆ. ನಾವು ಅದನ್ನು ವೈಭವೀಕರಿಸುತ್ತಿಲ್ಲ. ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಅಂತ ನಾವು ಹೇಳಿದರೂ ಜನ ತಮಗೆ ಇಷ್ಟವಾದದ್ದನ್ನೇ ಮಾಡುವುದು’ ಎಂದಿದ್ದಾರೆ ಪ್ರೇಮ್‌.