ಸಹಜ ಸುಂದರಿ ಸಾಯಿ ಪಲ್ಲವಿ ಜೊತೆ 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ಕನ್ನಡ ನಿರ್ದೇಶಕ ಮಂಸೋರೆ ಸಿನಿಮಾ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ಖ್ಯಾತ ನಟಿ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡಲಿದ್ದಾರಂತೆ. ಈಗಾಗಲೇ 'ಫಿದಾ' ನಟಿ ಜೊತೆ ಮಂಸೋರೆ ಅವರು ಮಾತುಕತೆ ಕೂಡ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಹಜ ಸುಂದರಿ ಸಾಯಿ ಪಲ್ಲವಿ ಜೊತೆ 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ಕನ್ನಡ ನಿರ್ದೇಶಕ ಮಂಸೋರೆ ಸಿನಿಮಾ
Linkup
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರ ಕಡೆಯಿಂದ ಮತ್ತೊಂದು ಖುಷಿಯ ವಿಷಯ ಸಿಕ್ಕಿದೆ. 'Act 1978 ' ಸಿನಿಮಾ ಮಾಡಿದ ಮಂಸೋರೆಗೆ ಸಾಕಷ್ಟು ಒಳ್ಳೆಯ ಪ್ರಶಂಸೆ ಸಿಕ್ಕಿತ್ತು. ಈಗ ಮಂಸೋರೆ ನಟಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ತೆಲುಗು ಚಿತ್ರರಂಗದಲ್ಲಿ ಮಂಸೋರೆ 'Act 1978 ' ಸಿನಿಮಾ ಲಾಕ್‌ಡೌನ್ ನಂತರದಲ್ಲಿ ಥಿಯೇಟರ್‌ನಲ್ಲಿ ರಿಲೀಸ್ ಆದಾಗ ಒಳ್ಳೆಯ ಗಳಿಕೆ ಪಡೆದಿತ್ತು, ಓಟಿಟಿಯಲ್ಲಿ ರಿಲೀಸ್ ಆದನಂತರ ವಿಮರ್ಶೆಗೊಳಪಟ್ಟಿತ್ತು. ಈ ಚಿತ್ರದ ಯಶಸ್ಸು ತೆಲುಗು ಚಿತ್ರರಂಗದವರೆಗೂ ತಲುಪಿದೆ. 'Act 1978 ' ಸಿನಿಮಾದ ತೆಲುಗು, ಹಿಂದಿ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ನಟಿ ಯಜ್ಞಾ ಶೆಟ್ಟಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಂಸೋರೆ ಅವರು ಕೆಲ ಟಾಲಿವುಡ್‌ ಕಲಾವಿದರ ಸಂಪರ್ಕ ಮಾಡಿ, ಪಾಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರಂತೆ. ಸಾಯಿ ಪಲ್ಲವಿ ಜೊತೆ ಸಿನಿಮಾ ನಟಿ ಸಾಯಿ ಪಲ್ಲವಿ ಜೊತೆ ಮಂಸೋರೆ ಟೆಲಿಫೋನ್ ಸಂಪರ್ಕ ಮಾಡಿದ್ದು, ಅದಿನ್ನೂ ಪ್ರಾಥಮಿಕ ಹಂತದಲ್ಲಿ ಇದೆಯಂತೆ. ಈ ಬಗ್ಗೆ ಮಾತನಾಡಿರುವ ಮಂಸೋರೆ "ಸಾಯಿಪಲ್ಲವಿ ಅವರು ಕಥೆ ಕೇಳಿ ಖುಷಿಪಟ್ಟಿದ್ದಾರೆ. ಫೈನಲ್ ಸ್ಕ್ರಿಪ್ಟ್ ಕಳಿಸಲು ಹೇಳಿದ್ದಾರೆ. ಮದುವೆಗೋಸ್ಕರ ನಾನು ಸಣ್ಣ ಬ್ರೇಕ್ ಪಡೆದಿದ್ದೆ. ಆದಷ್ಟು ಬೇಗ ಪಾಲಿಟಿಕಲ್ ಥ್ರಿಲ್ಲರ್ ಸಿನಿಮಾ ತಯಾರಿ ಮಾಡುತ್ತೇನೆ" ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಅಖಿಲಾ ಜೊತೆ ಮಂಸೋರೆ ಮದುವೆ 'ಹರಿವು', 'ನಾತಿಚರಾಮಿ' ಸಿನಿಮಾಗಳು ಮಂಸೋರೆಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರ ಬಳಿ ಇರುವ ಶಿಬ್ರಾವ್ಯಿ ಕೋರ್ಟ್‌ ಯಾರ್ಡ್‌ನಲ್ಲಿ ಗೆಳತಿ ಅಖಿಲಾ ಜೊತೆ ಮಂಸೋರೆ ವೈವಾಹಿಕ ಜೀವನಕ್ಕೆ (ಆಗಸ್ಟ್ 15) ಕಾಲಿಟ್ಟಿದ್ದರು. ಕನ್ನಡ ಚಿತ್ರರಂಗದ ಕೆಲವೇ ಕೆಲವು ಕಲಾವಿದರು, ನಿರ್ದೇಶಕರು ಮಂಸೋರೆ ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಕೋರಿದ್ದರು.