ಸುವೇಂದು ಅಧಿಕಾರಿ-ಸಾಲಿಸಿಟರ್ ಜನರಲ್ ಭೇಟಿ ವಿವಾದ: ತುಷಾರ್ ಮೆಹ್ತಾರನ್ನು ಕಿತ್ತೊಗೆಯುವಂತೆ ಪ್ರಧಾನಿಗೆ ಟಿಎಂಸಿ ಒತ್ತಾಯ

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಂದ ಹುದ್ದೆಗೆ ಕಳಂಕ ಬಂದಿದ್ದು, ಅವರನ್ನು ಆ ಸ್ಥಾನದಿಂದ ತೆಗೆದುಹಾಕುವಂತೆ ಟಿಎಂಸಿ ಒತ್ತಾಯಿಸಿದೆ. ಮೆಹ್ತಾ ಅವರನ್ನು ಬಿಜೆಪಿಯ ಸುವೇಂದು ಅಧಿಕಾರಿ ಭೇಟಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಆಗ್ರಹ ವ್ಯಕ್ತವಾಗಿದೆ.

ಸುವೇಂದು ಅಧಿಕಾರಿ-ಸಾಲಿಸಿಟರ್ ಜನರಲ್ ಭೇಟಿ ವಿವಾದ: ತುಷಾರ್ ಮೆಹ್ತಾರನ್ನು ಕಿತ್ತೊಗೆಯುವಂತೆ ಪ್ರಧಾನಿಗೆ ಟಿಎಂಸಿ ಒತ್ತಾಯ
Linkup
ಕೋಲ್ಕತಾ: ಪಶ್ಚಿಮ ಬಂಗಾಳದ ವಿರೋಧಪಕ್ಷದ ನಾಯಕ ಅವರನ್ನು ಭೇಟಿ ಮಾಡಿದ ತುಷಾರ್ ಮೆಹ್ತಾ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ತೃಣಮೂಲ ಕಾಂಗ್ರೆಸ್ ಶುಕ್ರವಾರ ಆಗ್ರಹಿಸಿದೆ. ತೊರೆದು ಬಿಜೆಪಿಯಿಂದ ಶಾಸಕರಾಗಿರುವ ಸುವೇಂದು ಅವರು ನಾರದಾ ಲಂಚ ಪ್ರಕರಣ ಹಾಗೂ ಶಾರದಾ ಹಗರಣಗಳಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣಗಳ ತನಿಖೆ ನಡೆಯುತ್ತಿದೆ. ಹೀಗಿರುವಾಗ ಸಾಲಿಸಿಟರ್ ಜನರಲ್ ಮತ್ತು ಸುವೇಂದು ಅವರ ಭೇಟಿ ಅನುಚಿತವಾಗಿದೆ ಎಂದು ಟಿಎಂಸಿ ಸಂಸದರಾದ ಡೆರೆಕ್ ಒಬ್ರಿಯಾನ್, ಸುಖೇಂದು ಶೇಖರ್ ರಾಯ್ ಮತ್ತು ಮಹುವಾ ಮೊಯಿತ್ರಾ ಅವರು ಪ್ರಧಾನಿ ಅವರುಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ನಂತರ ಸಾಲಿಸಿಟರ್ ಜನರಲ್ ಅವರನ್ನು ಸುವೇಂದು ಭೇಟಿ ಮಾಡಿರುವುದು ಕುತೂಹಲಕಾರಿ ಎಂದು ಪತ್ರದಲ್ಲಿ ಹೇಳಲಾಗಿದೆ. ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿರುವ ವರದಿಯನ್ನು ನಿರಾಕರಿಸಿದ್ದಾರೆ. ಆದರೆ ಪೂರ್ವಮಾಹಿತಿ ಇಲ್ಲದೆ ಅವರು ತಮ್ಮ ಮನೆಗೆ ಬಂದಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ. 'ಸುವೇಂದು ಅಧಿಕಾರಿ ಅವರು ನಿನ್ನೆ ನನ್ನ ಮನೆ/ಕಚೇರಿಗೆ ಪೂರ್ವ ಮಾಹಿತಿ ಇಲ್ಲದೆ ಬಂದಿದ್ದರು. ನಾನು ಮುಂಚೆಯೇ ನಿಗದಿಯಾಗಿದ್ದ ಸಭೆಯಲ್ಲಿ ಇದ್ದಿದ್ದರಿಂದ ನನ್ನ ಸಿಬ್ಬಂದಿ ಅವರಿಗೆ ಕಾಯುವಂತೆ ಸೂಚಿಸಿದ್ದರು. ನನ್ನ ಸಭೆಯ ಬಳಿಕ ಅವರನ್ನು ಭೇಟಿ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ನನ್ನ ಸಿಬ್ಬಂದಿ ಅವರಿಗೆ ತಿಳಿಸಿದ್ದರು. ಇಲ್ಲಿ ನನ್ನ ಮತ್ತು ಅವರ ಭೇಟಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ತುಷಾರ್ ಮೆಹ್ತಾ ಪ್ರತಿಪಾದಿಸಿದ್ದಾರೆ. ಉನ್ನತ ಹುದ್ದೆಗೆ ಅಂಟುವ ಕಳಂಕಸುವೇಂದು ಅವರು ನಾರದಾ ಮತ್ತು ಶಾರದಾ ಹಗರಣಗಳಲ್ಲಿ ಆರೋಪಿಯಾಗಿದ್ದಾರೆ. ನಾರದಾ ಪ್ರಕರಣದಲ್ಲಿ ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ವಕಾಲತ್ತು ವಹಿಸುತ್ತಿದ್ದಾರೆ. ಜತೆಗೆ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಬಿಐಗೆ ಸಲಹೆಯನ್ನೂ ನೀಡುತ್ತಿದ್ದಾರೆ ಎಂದು ಸಂಸದರು ಹೇಳಿದ್ದಾರೆ. 'ಸುವೇಂದು ಮತ್ತು ತುಷಾರ್ ಅವರ ಭೇಟಿ ಅಸಹಜವಾಗಿರುವುದು ಮಾತ್ರವಲ್ಲ, ಇದರಲ್ಲಿ ನೇರ ಹಿತಾಸಕ್ತಿ ಸಂಘರ್ಷವಿದೆ. ಅಲ್ಲದೆ, ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯ ಸ್ಥಾನಕ್ಕೆ ಕಳಂಕವಾಗಿದೆ' ಎಂದು ಆರೋಪಿಸಿದ್ದಾರೆ. ತುಷಾರ್ ಮೆಹ್ತಾರನ್ನು ಕಿತ್ತೊಗೆಯಿರಿ'ಇಂತಹ ಭೇಟಿಯು, ಸುವೇಂದು ಅಧಿಕಾರಿ ತಾವು ಆರೋಪಿಯಾಗಿರುವ ಪ್ರಕರಣಗಳ ಫಲಿತಾಂಶದ ಮೇಲೆ ಸಾಲಿಸಿಟರ್ ಜನರಲ್ ಅವರ ಉನ್ನತ ಕಚೇರಿಗಳನ್ನು ಬಳಸಿಕೊಂಡು ಪ್ರಭಾವ ಬೀರುವ ಅವಕಾಶ ಎಂದೇ ನಾವು ನಂಬುತ್ತೇವೆ. ಭಾರತದ ಸಾಲಿಸಿಟರ್ ಜನರಲ್ ಕಚೇರಿಯ ತಟಸ್ಥತೆ ಮತ್ತು ಸಮಗ್ರತೆಯನ್ನು ಕಾಪಾಡಲು ತುಷಾರ್ ಮೆಹ್ತಾ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಪತ್ರದಲ್ಲಿ ಟಿಎಂಸಿ ಸಂಸದರು ಆಗ್ರಹಿಸಿದ್ದಾರೆ.