‘ಸಲಗ’ ಚಿತ್ರಕ್ಕೆ ಪಂಚಿಂಗ್ ಸಂಭಾಷಣೆಗಳನ್ನು ಬರೆದಿರುವ ‘ಟಗರು’ ಖ್ಯಾತಿಯ ಮಾಸ್ತಿ

ತಮ್ಮ ಮೊನಚು ಸಂಭಾಷಣೆಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ಮಾಸ್ತಿ ಇದೀಗ ‘ಸಲಗ’ ಸಿನಿಮಾಗೆ ಖಡಕ್ಕಾಗಿರುವ ಪಂಚಿಂಗ್‌ ಸಂಭಾಷಣೆಗಳನ್ನು ಬರೆದಿದ್ದಾರೆ.

‘ಸಲಗ’ ಚಿತ್ರಕ್ಕೆ ಪಂಚಿಂಗ್ ಸಂಭಾಷಣೆಗಳನ್ನು ಬರೆದಿರುವ ‘ಟಗರು’ ಖ್ಯಾತಿಯ ಮಾಸ್ತಿ
Linkup
(ಹರೀಶ್‌ ಬಸವರಾಜ್‌) ಅಕ್ಟೋಬರ್‌ 14 ರಂದು ಬಿಡುಗಡೆಯಾಗುತ್ತಿರುವ ‘’ ಸಿನಿಮಾಗೆ ಸಂಭಾಷಣೆ ಬರೆದಿರುವ ಅವರು ಈ ಕುರಿತಾಗಿ ಲವಲವಿಕೆ ಜತೆಗೆ ಮಾತನಾಡಿದ್ದಾರೆ. ತಮ್ಮ ಮೊನಚು ಸಂಭಾಷಣೆಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ಮಾಸ್ತಿ ಇದೀಗ ‘ಸಲಗ’ ಸಿನಿಮಾಗೆ ಖಡಕ್ಕಾಗಿರುವ ಪಂಚಿಂಗ್‌ ಸಂಭಾಷಣೆಗಳನ್ನು ಬರೆದಿದ್ದಾರೆ. ದಶಕಗಳಿಂದ ಸ್ನೇಹಿತರಾಗಿರುವ ದುನಿಯಾ ವಿಜಯ್‌ ಮತ್ತು ಮಾಸ್ತಿ ಕಾಂಬಿನೇಶನ್‌ ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಲಿದೆಯಂತೆ. ‘ನಾನು ಮತ್ತು ದುನಿಯಾ ವಿಜಯ್‌ ದಶಕಗಳ ಸ್ನೇಹಿತರು. ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಒಮ್ಮೆ ನಾನು ಅವರ ಮೊದಲ ಮಹಡಿಯ ಪಡಸಾಲೆಯಲ್ಲಿ ಕುಳಿತಿದ್ದಾಗ ವಿಜಯ್‌ ಈ ಕಥೆ ಮತ್ತು ಚಿತ್ರಕಥೆಯನ್ನು ಹೇಳಿದರು. ಕಥೆ ಮಾಸ್‌ ಮತ್ತು ಎಂಟರ್‌ಟೇನಿಂಗ್‌ ಆಗಿತ್ತು. ನಿರ್ಮಾಪಕರು ಯಾರು ಎಂಬುದಿನ್ನೂ ನಿಗದಿಯಾಗಿರಲಿಲ್ಲ. ಆಗ ನಾನು ಶ್ರೀಕಾಂತ್‌ ಅವರಿಗೆ ಹೇಳಬಹುದು ಎಂದೆ. ಶ್ರೀಕಾಂತ್‌ ಬಂದು ಕಥೆ ಕೇಳಿ ಇಷ್ಟಪಟ್ಟರು. ಅಲ್ಲಿಂದ ಆರಂಭವಾದ ‘ಸಲಗ’ ಈ ಮಟ್ಟಕ್ಕೆ ಬರುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ’ ಎಂದು ಮಾಸ್ತಿ ಹೇಳಿದ್ದಾರೆ. ವಿಜಯ್‌ ಅವರ ಶ್ರಮ ಮತ್ತು ಅನುಭವ ಎರಡೂ ಇಲ್ಲಿ ಕೆಲಸ ಮಾಡಿತು. ತಮ್ಮ ಮೊದಲ ಸಿನಿಮಾದಲ್ಲಿಯೇ ಅವರು ಕೋಟ್ಯಂತರ ರೂಪಾಯಿ ಬಿಸ್ನೆಸ್‌ ಮಾಡಿದವರು. ಈ ಬಾರಿ ಕಥೆ ಮತ್ತು ಚಿತ್ರಕಥೆ ರೆಡಿ ಮಾಡಿಕೊಂಡಿದ್ದರು. ಇದನ್ನು ಬೇರೊಬ್ಬರು ನಿರ್ದೇಶನ ಮಾಡುವುದಕ್ಕಿಂತ ವಿಜಿ ಅವರೇ ಮಾಡಬೇಕು ಎಂದು ನಿರ್ಧಾರವಾಯಿತು. ‘ನಾನು ದೃಶ್ಯಗಳನ್ನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗು’ ಎಂದು ಅವರು ಹೇಳಿದರು. ಹಾಗೇ ಸಂಭಾಷಣೆ ಕೆಲಸ ಆರಂಭವಾಯಿತು’ ಎಂದಿದ್ದಾರೆ ಅವರು. ‘ರೌಡಿಸಂನ ಕೆಲವು ವಿಷಯಗಳು ದುನಿಯಾ ವಿಜಯ್‌ ಅವರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ನಮ್ಮ ಮನೆಯ ಬಳಿ ಒಂದು ಏರಿಯಾ ಇದೆ. ಅಲ್ಲಿನ ಕೆಲವರಿಗೆ ರೌಡಿಸಂ ಎನ್ನುವುದು ಬಹಳ ಸುಲಭ. ಅಂಥವರ ಜತೆಗೆ ನಾನು ಬಹಳಷ್ಟು ದಿನಗಳ ಕಾಲ ಚರ್ಚೆ ಮಾಡಿದ್ದೇನೆ. ಇದರ ಜತೆಗೆ ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌ ಸೇರಿದಂತೆ ಹಲವು ಪೊಲೀಸ್‌ ಠಾಣೆಗಳಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರ ಜತೆಯೂ ನಾನು ಮಾತನಾಡುತ್ತಿರುತ್ತೇನೆ. ಇವೆಲ್ಲವೂ ಸಂಭಾಷಣೆ ಬರೆಯಲು ನನಗೆ ಸಹಾಯ ಮಾಡಿತು’ ಎಂದು ಮಾಸ್ತಿ ವಿವರಿಸಿದ್ದಾರೆ. ‘ಸಲಗ ಸಿನಿಮಾಗಾಗಿ ಒಂದು ಕಡೆ ರೌಡಿಗಳು, ಮತ್ತೊಂದು ಕಡೆ ಪೊಲೀಸರನ್ನು ಹೊಂದಿಸಿ ಸಂಭಾಷಣೆ ಬರೆಯಲಾಗಿದೆ. ನಿರ್ದೇಶಕ ದುನಿಯಾ ವಿಜಯ್‌ ಈ ಸಿನಿಮಾದಲ್ಲಿ ಖಂಡಿತಾ ಇಷ್ಟವಾಗುತ್ತಾರೆ’ ಎಂದು ಮಾಸ್ತಿ ಹೇಳಿದ್ದಾರೆ. ಈ ಸಿನಿಮಾದ ಪೋಸ್ಟರ್‌ಗಳನ್ನು ನೋಡಿದರೆ ಇದು ಗ್ರೇ ಶೇಡ್‌ ಇರುವ ಸಿನಿಮಾ ಎನಿಸುತ್ತದೆ. ಸಿನಿಮಾ ಮಂದಿರದೊಳಗೆ ಬಂದರೆ ಇದೊಂದು ಭಾವನಾತ್ಮಕ ಸಿನಿಮಾ ಎನಿಸುತ್ತದೆ. ವಿಜಯ್‌ ಖುದ್ದು ನಿಂತುಕೊಂಡು ಎಲ್ಲಾ ಪಾತ್ರಗಳನ್ನು ಆಯ್ಕೆ ಮಾಡಿದ್ದಾರೆ. ಒಬ್ಬ ಕಲಾವಿದನನ್ನು ನೋಡಿದರೆ ಸಾಕು, ಇಂತಹದ್ದೇ ಪಾತ್ರಕ್ಕೆ ಸೂಟ್‌ ಆಗುತ್ತಾರೆ ಎಂದು ಅವರು ನಿರ್ಧರಿಸುತ್ತಾರೆ. ಅಷ್ಟು ಅನುಭವ ಅವರಿಗಿದೆ. ನನ್ನ ಸಂಭಾಷಣೆಗಳು ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತವೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ ಮಾಸ್ತಿ. ವೀನಸ್‌ ಎಂಟರ್‌ಟೇನರ್ಸ್‌ ಬ್ಯಾನರ್‌ನಡಿ ಕೆ.ಪಿ.ಶ್ರೀಕಾಂತ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ದುನಿಯಾ ವಿಜಯ್‌, ಸಂಜನಾ ಆನಂದ್‌, ಧನಂಜಯ ಮತ್ತಿತರರು ಈ ಸಿನಿಮಾದಲ್ಲಿದ್ದಾರೆ.