ನಟ ಪ್ರಭಾಸ್ ಹೊಸ ಚಿತ್ರದಲ್ಲಿ ಬಾಲಿವುಡ್‌ನ 10 ಘಟಾನುಘಟಿ ಕಲಾವಿದರು! ಏನಿದು ಹೊಸ ನ್ಯೂಸ್?

'ಬಾಹುಬಲಿ' ಪ್ರಭಾಸ್ ನಟನೆಯ 'ರಾಧೆ ಶ್ಯಾಮ್‌' ರಿಲೀಸ್‌ಗೆ ರೆಡಿ ಆಗುತ್ತಿದ್ದರೆ, ಸಲಾರ್‌ಗೆ ಒಂದು ಹಂತದ ಶೂಟಿಂಗ್ ಮುಗಿದಿದೆ. ಇದರ ಮಧ್ಯೆ 'ಆದಿಪುರುಷ್‌' ಶೂಟಿಂಗ್ ಶುರುವಾಗುವುದಕ್ಕೂ ಮೊದಲೇ ಸದ್ದು ಮಾಡುತ್ತಿದೆ. ಇನ್ನು ಪ್ರಭಾಸ್ ಅವರ ಮತ್ತೊಂದು ಸಿನಿಮಾ ಕೂಡ ಭಾರಿ ಸೌಂಡ್ ಮಾಡುತ್ತಿದೆ.

ನಟ ಪ್ರಭಾಸ್ ಹೊಸ ಚಿತ್ರದಲ್ಲಿ ಬಾಲಿವುಡ್‌ನ 10 ಘಟಾನುಘಟಿ ಕಲಾವಿದರು! ಏನಿದು ಹೊಸ ನ್ಯೂಸ್?
Linkup
'ಬಾಹುಬಲಿ', 'ಸಾಹೋ' ಸಿನಿಮಾಗಳ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ‌ ಅವರ ಹೊಸ ಸಿನಿಮಾಗಳು ಸಾಕಷ್ಟು ಹೊಸ ಹೊಸ ವಿಚಾರಗಳಿಂದ ಸುದ್ದಿ ಮಾಡುತ್ತಿವೆ. ಈಗಾಗಲೇ ಅವರ 'ರಾಧೆ ಶ್ಯಾಮ್‌' ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಇದೀಗ ಅವರ ಹೊಸ ಸಿನಿಮಾ ಕುರಿತು ದೊಡ್ಡ ನ್ಯೂಸ್‌ವೊಂದು ಕೇಳಿಬಂದಿದೆ. ಅದೇನೆಂದರೆ, ಆ ಸಿನಿಮಾದಲ್ಲಿ ಬಾಲಿವುಡ್‌ನ 10 ಘಟಾನುಘಟಿ ಕಲಾವಿದರು ಬಣ್ಣ ಹಚ್ಚಲಿದ್ದಾರಂತೆ! 'ಮಹಾನಟಿ' ನಿರ್ದೇಶಕನ ಸಿನಿಮಾದಲ್ಲಿ ಪ್ರಭಾಸ್ 'ಮಹಾನಟಿ' ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರು ಹೊಸದೊಂದು ಸಿನಿಮಾ ಮಾಡುತ್ತಿದ್ದು, ಅದರಲ್ಲಿ ಪ್ರಭಾಸ್ ಹೀರೋ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್‌ ನಟಿ ಇದ್ದಾರೆ. ಜೊತೆಗೆ ಪ್ರಮುಖ ಪಾತ್ರವೊಂದಕ್ಕೆ ಬಿ-ಟೌನ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಬಣ್ಣ ಹಚ್ಚಲಿದ್ದಾರೆ. ಇವರಿಬ್ಬರು ಮಾತ್ರವಲ್ಲದೇ, ಇನ್ನೂ ಏಳೆಂಟು ಬಾಲಿವುಡ್ ಪ್ರತಿಭೆಗಳು ಈ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವಿಲನ್ ಆಗಿ ಬಾಲಿವುಡ್‌ ಸ್ಟಾರ್ ನಟ ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಪ್ರಭಾಸ್‌ ಎದುರು ಖಳನಾಗಿ ಬಾಲಿವುಡ್‌ನ ಖ್ಯಾತ ನಟರೊಬ್ಬರು ಬಣ್ಣ ಹಚ್ಚಲಿದ್ದಾರಂತೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ಭಾರಿ ಬಜೆಟ್‌ ಹೊಂದಿರಲಿದೆಯಂತೆ. ಸುಮಾರು 200 ಕೋಟಿ ರೂ.ಗಳಷ್ಟು ಹಣವನ್ನು ಬರೀ ಕಲಾವಿದರ ಸಂಭಾವನೆಯಾಗಿ ನೀಡುವುದಕ್ಕೆ ವೈಜಯಂತಿ ಮೂವೀಸ್‌ ನಿರ್ಧಾರ ಮಾಡಿದೆಯಂತೆ. ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾವಾಗಿದ್ದು, ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಸ್ಕ್ರಿಪ್ಟ್‌ನ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ನಾಗ್ ಅಶ್ವಿನ್ ಮಾಡಿದ್ದ ಮಹಾನಟಿ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಅಲ್ಲದೆ, ಅದರ ನಟಿ ಕೀರ್ತಿ ಸುರೇಶ್‌ಗೆ ರಾಷ್ಟ್ರ ಪ್ರಶಸ್ತಿ ಕೂಡ ದಕ್ಕಿತ್ತು. ಇನ್ನು, ನಾಗ್ ಅಶ್ವಿನ್ ನಿರ್ಮಾಣ ಮಾಡಿದ್ದ ಜಾತಿ ರತ್ನಾಲು ಸಿನಿಮಾ ಈಚೆಗೆ ದೊಡ್ಡ ಯಶಸ್ಸು ಕಂಡಿತ್ತು. ಹೀಗೆ ಬರೀ ಸಕ್ಸಸ್ ಅನ್ನೇ ನೋಡಿರುವ ಅವರು ಪ್ರಭಾಸ್ ಸಿನಿಮಾ ಮೂಲಕ ಇನ್ನೂ ದೊಡ್ಡ ಯಶಸ್ಸನ್ನು ನೋಡುವುದಕ್ಕೆ ಕಾದಿದ್ದಾರೆ. ವಿಶೇಷವೆಂದರೆ, ಈ ಚಿತ್ರವು ಪ್ರಭಾಸ್ ಕರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಸಿನಿಮಾವಾಗಲಿದೆಯಂತೆ. ಸದ್ಯ '' ಕೆಲಸಗಳಲ್ಲಿ ಬ್ಯುಸಿ ಆಗಿರುವ ಪ್ರಭಾಸ್, ಆನಂತರ 'ಆದಿಪುರುಷ್‌' ಮುಗಿಸಿದ ಮೇಲೆ ಈ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರಂತೆ.