ಸೂರತ್ ಅಪಘಾತ: ಕಾರಿನಡಿ ಸಿಲುಕಿದ್ದ ವ್ಯಕ್ತಿಯನ್ನು 12 ಕಿ.ಮೀ. ಎಳೆದೊಯ್ದಿದ್ದ ಆರೋಪಿಯ ಬಂಧನ

ಇತ್ತೀಚೆಗೆ, ಅಪಘಾತಗೊಂಡು ತಮ್ಮ ವಾಹನದ ಅಡಿಯಲ್ಲಿ ಸಿಲುಕಿದವರನ್ನು ಅಪಘಾತ ಮಾಡಿದ ವ್ಯಕ್ತಿಗಳು ಕಿಲೋಮೀಟರ್ ಗಟ್ಟಲೆ ಎಳೆದೊಯ್ಯಿರುವ ಘಟನೆಗಳು ದೇಶದಲ್ಲಿ ಪದೇ ಪದೇ ಜರುಗುತ್ತಿವೆ. ಸೂರತ್ ನಲ್ಲಿ ಕಳೆದ ತಿಂಗಳ 18ರಂದು ಅಂಥದ್ದೇ ಘಟನೆ ನಡೆದಿತ್ತು. ಅಲ್ಲಿನ ಸಾಗರ್ ಪಾಟೀಲ್ ಎಂಬಾತನ ಬೈಕ್ ಅಪಘಾತವಾಗಿದ್ದು, ಅಪಘಾತ ಮಾಡಿದ ಕಾರಿನ ಅಡಿಗೆ ಸಿಲುಕಿದ್ದ ಸಾಗರ್ ನನ್ನು ಕಾರಿನ ಚಾಲಕ ಭೈರೇನ್ 12 ಕಿ.ಮೀವರೆಗೆ ಎಳೆದೊಯ್ದಿದ್ದು, ಆನಂತರ ತಲೆಮರೆಸಿಕೊಂಡಿದ್ದ. ಈಗ ಆತನನ್ನು ಬಂಧಿಸಲಾಗಿದೆ.