
ಹರೀಶ್ ಬಸವರಾಜ್
ಆಗಸ್ಟ್ ತಿಂಗಳ ಮೊದಲ ವಾರದಿಂದಲೇ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ಸಿಗುವ ಭರವಸೆ ಹುಸಿಯಾಗಿದೆ. ಇದರಿಂದಾಗಿ ಈಗಾಗಲೇ ರಿಲೀಸ್ ದಿನಾಂಕ ಅನೌನ್ಸ್ ಮಾಡಿಕೊಂಡಿರುವ ಸಿನಿಮಾಗಳು ಶೇ.50ರಷ್ಟು ಸೀಟುಗಳಲ್ಲಿಯೇ ಬಿಡುಗಡೆ ಮಾಡಬೇಕು ಅಥವಾ ಬಿಡುಗಡೆ ದಿನಾಂಕವನ್ನೇ ಮುಂದಕ್ಕೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಶೇ. 100 ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡುವುದು ಕಷ್ಟ. ಆದ್ದರಿಂದ ಥಿಯೇಟರ್‌ಗೆ ಸಂಬಂಧಪಟ್ಟಂತೆ ಚಿತ್ರರಂಗದಲ್ಲಿ ಮೂಡಿರುವ ಅನಿಶ್ಚಿತತೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ವಾಣಿಜ್ಯ ಮಂಡಳಿ ತಟಸ್ಥಬಿ.ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನದಲ್ಲಿದ್ದ ಕೊನೆಯ ದಿನಗಳಲ್ಲಿ ವಾಣಿಜ್ಯ ಮಂಡಳಿ ನಿಯೋಗವು ಅವರನ್ನು ಭೇಟಿಯಾಗಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡುವಂತೆ ಬೇಡಿಕೆ ಇಟ್ಟಿತ್ತು. ಬಿಎಸ್‌ವೈ ಕೂಡ ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಆ ನಂತರದ ರಾಜಕೀಯ ಬೆಳವಣಿಗೆಗಳಿಂದಾಗಿ ಆ ಮನವಿ ಪತ್ರ ನೆನೆಗುದಿಗೆ ಬಿತ್ತು. ಈಗ ಹೊಸ ಸಿಎಂ ಅವರು ಸಚಿವ ಸಂಪುಟದ ಕಸರತ್ತಿನಲ್ಲಿರುವ ಕಾರಣ ಸೀಟು ಭರ್ತಿ ಕುರಿತ ನಿರ್ಧಾರ ವಿಳಂಬವಾಗುತ್ತಿದೆ. ವಾಣಿಜ್ಯ ಮಂಡಳಿಯ ನಿಯೋಗ ಸಹ ಅವರನ್ನು ಭೇಟಿಯಾಗಿಲ್ಲ. ಇದರ ಮಧ್ಯೆಯೇ ಕೋವಿಡ್ ಮೂರನೇ ಅಲೆಯ ಆತಂಕವೂ ವ್ಯಕ್ತವಾಗಿದೆ. ಹೀಗಾಗಿ ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿ ಬಗ್ಗೆ ವಾಣಿಜ್ಯ ಮಂಡಳಿ ತಟಸ್ಥವಾಗಿದೆ.
ಮುಗಿಯದ ಕಾಯುವಿಕೆಶೀಘ್ರದಲ್ಲೇ ಶೇ. 100 ಸೀಟು ಭರ್ತಿಯಲ್ಲಿ ಚಿತ್ರಮಂದಿರಗಳು ಆರಂಭವಾಗಲಿವೆ ಎಂಬೊಂದು ನಿರೀಕ್ಷೆಯಲ್ಲಿದ್ದ ಚಿತ್ರರಂಗಕ್ಕೆ ಸದ್ಯಕ್ಕೆ ಮುಂಬರುವ ದಿನಗಳನ್ನು ಕಾಯುವುದು ಅನಿವಾರ್ಯವಾಗಿದೆ. 'ನಾವು ಸಿನಿಮಾ ಮಾಡುವುದು ಜನರು ನೋಡಿ ಖುಷಿ ಪಡಲಿ ಎಂದು. ಶೇ. 50ರಷ್ಟು ಸೀಟು ಭರ್ತಿ ಎಂದರೆ ಕೋವಿಡ್ ಮತ್ತು ಜೀವ ಭಯವೂ ಇರುತ್ತವೆ. ಜೀವ ಭಯದಲ್ಲಿ ಸಿನಿಮಾ ನೋಡಿ ಹೇಗೆ ಎಂಜಾಯ್ ಮಾಡುತ್ತಾರೆ? ಹಾಗಾಗಿ ನಾವು ಶೇ. 100 ಸೀಟು ಭರ್ತಿಗೆ ಅವಕಾಶ ದೊರೆತ ನಂತರವೇ ಸಿನಿಮಾ ಬಿಡುಗಡೆ ಮಾಡುತ್ತೇವೆ' ಎನ್ನುತ್ತಾರೆ '' ಸಿನಿಮಾದ ನಿರ್ಮಾಪಕ ಕೆ ಪಿ ಶ್ರೀಕಾಂತ್.
ಸೂರಜ್ ಗೌಡ ನಿರ್ದೇಶನ ಮಾಡಿ ನಾಯಕರಾಗಿ ನಟಿಸಿರುವ 'ನಿನ್ನ ಸನಿಹಕೆ' ಸಿನಿಮಾವನ್ನು ಕೂಡ ಆಗಸ್ಟ್ 20ಕ್ಕೆ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಲಾಗಿದೆ. 'ಆಗಸ್ಟ್ 13ಕ್ಕೆ ಶೇ. 100 ಸೀಟು ಭರ್ತಿಗೆ ಅವಕಾಶ ಸಿಗುತ್ತದೆ ಎಂಬ ಸುದ್ದಿ ಇದೆ. ಕೊಟ್ಟರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ನಾವು ಶೇ. 50ರಲ್ಲೇ ಬಿಡುಗಡೆ ಮಾಡಲು ರೆಡಿ ಇದ್ದೇವೆ. ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾದರೆ ನಾವು ಸಹ ಸಿನಿಮಾ ಬಿಡುಗಡೆ ಮಾಡುವುದಿಲ್ಲ' ಎಂದಿದ್ದಾರೆ ಸೂರಜ್ ಗೌಡ.
ಪರಭಾಷೆಯಲ್ಲಿಯೂ ಯಥಾಸ್ಥಿತಿತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿಯೂ ಸಿನಿಮಾಗಳು ಬಿಡುಗಡೆಯಾಗದೆ ಡಬ್ಬಾದೊಳಗೆ ಕೂತಿವೆ. ರಣವೀರ್ ಸಿಂಗ್ ನಟನೆಯ 'ಸೂರ್ಯವಂಶಿ', '83' ಮುಂತಾದ ದೊಡ್ಡ ದೊಡ್ಡ ಹಿಂದಿ ಸಿನಿಮಾಗಳೇ ಬಿಡುಗಡೆಗಾಗಿ ಕಾದಿವೆ. ಅಲ್ಲಿಕೆಲವು ಸ್ಟಾರ್‌ಗಳು ಒಟಿಟಿಯ ಮೊರೆ ಹೋಗುತ್ತಿದ್ದಾರೆ. ಆದರೆ ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ದೊಡ್ಡ ಮಾರುಕಟ್ಟೆ ಇಲ್ಲದ ಕಾರಣ ಹೊಸಬರು ಸೇರಿದಂತೆ ಸ್ಟಾರ್‌ಗಳು ಕೂಡ ಚಿತ್ರಮಂದಿರವನ್ನೇ ನಂಬಿ ಕಾಯುತ್ತಿದ್ದಾರೆ.
ಕೋಟ್ಸ್
ಸಂಪುಟ ವಿಸ್ತರಣೆ ಮುಗಿದ ಕೂಡಲೇ ಸಿಎಂ ಬಳಿಗೆ ನಿಯೋಗವೊಂದನ್ನು ಕರೆದುಕೊಂಡು ಹೋಗಿ ಸಿನಿಮಾ ಬಿಡುಗಡೆಗೆ ಅನುಕೂಲವಾಗುವಂಥ ಸಂದರ್ಭ ಮಾಡಿಕೊಡುವಂತೆ ಮನವಿ ಮಾಡುತ್ತೇವೆ. ಜನರು ಮನರಂಜನೆಯನ್ನು ಭಯ ಬಿಟ್ಟು ನೋಡಬೇಕು ಎಂಬುದು ನನ್ನಾಸೆ.
-ಕೆ ಪಿ ಶ್ರೀಕಾಂತ್, ನಿರ್ಮಾಪಕ
ಅಕ್ಕಪಕ್ಕದ ರಾಜ್ಯಗಳಲ್ಲಿಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ನಾವು ಈ ಸಮಯದಲ್ಲಿಶೆ. 100 ಸೀಟು ಭರ್ತಿ ಮಾಡಿ ಎಂದು ಕೇಳುವುದು ತಪ್ಪಾಗುತ್ತದೆ ಎಂದು ಸುಮ್ಮನಿದ್ದೇವೆ.
-ಜೈರಾಜ್, ವಾಣಿಜ್ಯ ಮಂಡಳಿ ಅಧ್ಯಕ್ಷ