ಆರು ದಿನಗಳಲ್ಲಿ 1 ಕೋಟಿ ಸಂಗ್ರಹ: ದರ್ಶನ್ ಮನವಿಯಿಂದ ಆದ ಮ್ಯಾಜಿಕ್ ಇದು!

ದರ್ಶನ್ ಮನವಿಯಿಂದಾಗಿ ಆರು ದಿನಗಳಲ್ಲಿ 3881 ಮಂದಿ ರಾಜ್ಯದ ವಿವಿಧ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ/ದೇಣಿಗೆ ನೀಡಿದ್ದಾರೆ. ಇದರಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಝೂ ಅಥಾರಿಟಿ ಆಫ್ ಕರ್ನಾಟಕ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಆರು ದಿನಗಳಲ್ಲಿ 1 ಕೋಟಿ ಸಂಗ್ರಹ: ದರ್ಶನ್ ಮನವಿಯಿಂದ ಆದ ಮ್ಯಾಜಿಕ್ ಇದು!
Linkup
''ಕೋವಿಡ್‌ನಿಂದಾಗಿ ಪ್ರಾಣಿ ಸಂಕುಲಕ್ಕೂ ಸಮಸ್ಯೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಮೃಗಾಲಯಗಳ ನಿರ್ವಹಣೆ ಕಷ್ಟವಾಗಿದ್ದು, ಪ್ರಾಣಿಗಳನ್ನು ದಯವಿಟ್ಟು ದತ್ತು ಪಡೆಯಿರಿ'' ಎಂದು ಇತ್ತೀಚೆಗಷ್ಟೇ ವಿಡಿಯೋ ಮೂಲಕ ಚಾಲೆಂಜಿಂಗ್ ಸ್ಟಾರ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ದರ್ಶನ್ ಮನವಿ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅವರ ಅಭಿಮಾನಿಗಳು, ಪ್ರಾಣಿ ಪ್ರಿಯರು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ದರ್ಶನ್ ಮನವಿಯಿಂದ ಅಕ್ಷರಶಃ ಪವಾಡ ನಡೆದಿದ್ದು, ಅನೇಕರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಜೊತೆಗೆ ವಿವಿಧ ಮೃಗಾಲಯಗಳಿಗೆ ದೇಣಿಗೆ ನೀಡಿದ್ದಾರೆ. ದರ್ಶನ್ ಮನವಿಯಿಂದಾಗಿ ಆರು ದಿನಗಳಲ್ಲಿ 3881 ಮಂದಿ ರಾಜ್ಯದ ವಿವಿಧ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ/ದೇಣಿಗೆ ನೀಡಿದ್ದಾರೆ. ಇದರಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಝೂ ಅಥಾರಿಟಿ ಆಫ್ ಕರ್ನಾಟಕ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ದರ್ಶನ್ ಕರೆಗೆ ಓಗೊಟ್ಟು ನಿರ್ಮಾಪಕಿ ಶೈಲಜಾ ನಾಗ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಕೂಡ ಸಿಂಹವನ್ನು ದತ್ತು ಪಡೆದಿದ್ದಾರೆ. ನಟಿ ಕಾವ್ಯ ಗೌಡ ಕೂಡ ಬಿಳಿ ನವಿಲನ್ನು ಒಂದು ವರ್ಷದ ಮಟ್ಟಿಗೆ ದತ್ತು ಸ್ವೀಕರಿಸಿದ್ದಾರೆ.