ತಾಲಿಬಾನ್‌ ಜತೆ ಸದ್ದಿಲ್ಲದೆ ಸಂಪರ್ಕ ಸಾಧಿಸುತ್ತಿರುವ ಭಾರತ: ಕತಾರ್ ಅಧಿಕಾರಿ ಹೇಳಿಕೆ

ಭಾರತದ ಅಧಿಕಾರಿಗಳು ಕತಾರ್‌ಗೆ ಬಂದು ಅಲ್ಲಿ ತಾಲಿಬಾನ್ ಜತೆಗೆ ಸದ್ದಿಲ್ಲದೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಕತಾರ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಾತುಕತೆಗಳು ಇನ್ನೂ ಅನೌಪಚಾರಿಕ ಹಂತದಲ್ಲಿವೆ.

ತಾಲಿಬಾನ್‌ ಜತೆ ಸದ್ದಿಲ್ಲದೆ ಸಂಪರ್ಕ ಸಾಧಿಸುತ್ತಿರುವ ಭಾರತ: ಕತಾರ್ ಅಧಿಕಾರಿ ಹೇಳಿಕೆ
Linkup
ಹೊಸದಿಲ್ಲಿ: ತಾಲಿಬಾನ್‌ನ ರಾಜಕೀಯ ನಾಯಕತ್ವವನ್ನು ಭೇಟಿ ಮಾಡಲು ಭಾರತದ ಅಧಿಕಾರಿಗಳು ದೋಹಾಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂದು ಕತಾರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜತೆಗೆ ನೇರ ಸಂಪರ್ಕದಲ್ಲಿ ಇದೆ ಎಂಬ ಇತ್ತೀಚಿನ ವರದಿಗಳ ಕುರಿತಾದ ಮೊದಲ ಅಧಿಕೃತ ಖಾತರಿ ಇದಾಗಿದೆ. ಸೋಮವಾರ ವೆಬಿನಾರ್ ಒಂದರಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವರ ವಿಶೇಷ ರಾಯಭಾರಿ ಮುತ್ಲಕ್ ಬಿನ್ ಮಜೇದ್ ಅಲ್ ಖಹ್ತಾನಿ, ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಅಲ್ಲ, ಆದರೆ ಅಲ್ಲಿನ ಹೊಸ ಶಕ್ತಿ/ರಾಜಕೀಯ ಸಂರಚನೆಯ ಪ್ರಮುಖ ಭಾಗವಾಗಿರುವ ಕಾರಣದಿಂದ ತಾಲಿಬಾನ್ ಜತೆ ಭಾರತ ಸಂಪರ್ಕದಲ್ಲಿದೆ ಎಂದಿದ್ದರು. 'ತಾಲಿಬಾನ್ ಜತೆ ಮಾತನಾಡಲು ಭಾರತೀಯ ಅಧಿಕಾರಿಗಳಿಂದ ಕೆಲವು ಭೇಟಿಗಳು ನಡೆದಿವೆ ಎನ್ನುವುದು ನನಗೆ ತಿಳಿದಿದೆ. ಏಕೆಂದರೆ ತಾಲಿಬಾನ್, ಅಫ್ಘಾನಿಸ್ತಾನದ ಭವಿಷ್ಯದಲ್ಲಿ ಮುಖ್ಯ ಅಂಶವಾಗಲಿದೆ ಅಥವಾ ಆಗಬಹುದು' ಎಂದು ಹೇಳಿದ್ದರು. 'ನಾವು ವಿವಿಧ ಸಹಭಾಗಿದಾರರ ಜತೆಗೆ ಸಂಪರ್ಕದಲ್ಲಿದ್ದೇವೆ. ಅಫ್ಘಾನಿಸ್ತಾನದ ಅಭಿವೃದ್ಧಿ ಹಾಗೂ ಮರು ನಿರ್ಮಾಣದ ಕುರಿತಾದ ನಮ್ಮ ದೀರ್ಘಾವಧಿ ಬಯಕೆಯನ್ನು ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದ್ದೇವೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಎರಡು ಬಾರಿ ಕತಾರ್‌ಗೆ ತೆರಳಿದ್ದ ವಿದೇಶಾಂಗ ಸಚಿವ , ಕತಾರ್‌ನ ನಾಯಕರನ್ನು ಭೇಟಿ ಮಾಡಿದ್ದಲ್ಲದೆ, ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ವಿಶೇಷ ರಾಯಭಾರಿ ಜಲ್ಮಿ ಖಾಲಿಜಾದ್ ಅವರನ್ನು ಸಹ ಭೇಟಿಯಾಗಿದ್ದರು. 'ತಮ್ಮ ಪ್ರವಾಸದ ವೇಳೆ ಜೈಶಂಕರ್ ಅವರು ಕತಾರ್ ವಿದೇಶಾಂಗ ಸಚಿವರನ್ನು ಮತ್ತು ಕತಾರ್ ನಾಯಕತ್ವದ ಹಿರಿಯ ಸದಸ್ಯರನ್ನು ಭೇಟಿ ಮಾಡಿದ್ದರು. ಅಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಯಲ್ಲಿ ಕತಾರ್ ಭಾಗಿಯಾಗಿರುವುದರಿಂದ ಕುರಿತೂ ಈ ಸಂದರ್ಭದಲ್ಲಿ ಚರ್ಚಿಸಲಾಗಿತ್ತು' ಎಂದು ಬಗ್ಚಿ ವಿವರಣೆ ನೀಡಿದ್ದಾರೆ. ಕತಾರ್‌ನಲ್ಲಿ ತಾಲಿಬಾನ್ ಮುಖಂಡರನ್ನು ಭೇಟಿ ಮಾಡುವ ಭಾರತದ ನಡೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆರಂಭಿಸಿದ್ದಾರೆ. ಇದು ಇನ್ನೂ ಅನೌಪಚಾರಿಕ ಮಟ್ಟದಲ್ಲಿದೆ. ಹಾಗೂ ಔಪಚಾರಿಕ ಮಾತುಕತೆಗೆ ಪರಿವರ್ತಿಸಬೇಕಿದೆ. ತಾಲಿಬಾನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸರಕಾರದೊಂದಿಗೆ ಶಾಂತಿ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಭಾರತ ಮುಂದಾಗಿದೆ ಎಂದು ವರದಿಯಾಗಿದೆ.