ಸದ್ಯದಲ್ಲೇ ಪೆಟ್ರೋಲ್‌ ₹150, ಡೀಸೆಲ್‌ ₹140ಕ್ಕೆ ಏರಿಕೆ; ಸಿಲಿಂಡರ್‌ಗೂ ₹1,000ಕ್ಕೆ ಏರೋದು ಪಕ್ಕಾ!

ಪ್ರತಿ ಬ್ಯಾರೆಲ್‌ಗೆ ಇದರ ದರ ನೂರರ ಗಡಿ ದಾಟುವುದು ಖಚಿತ ಎಂಬ ಭವಿಷ್ಯವನ್ನು ಮಾರುಕಟ್ಟೆ ತಜ್ಞರು ನುಡಿದಿದ್ದಾರೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಬೇಡಿಕೆಯು ಬಹುತೇಕ ಕೋವಿಡ್‌ ಪೂರ್ವ ಮಟ್ಟಕ್ಕೆ ತಲುಪಿದೆ. ಹೀಗಾಗಿ ಕಚ್ಚಾ ತೈಲ ದರ ಮುಂದಿನ ವರ್ಷ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಏರಿಕೆಯೊಂದಿಗೆ ವರ್ಷದಲ್ಲಿ 5ನೇ ಬಾರಿ ಎಲ್‌ಪಿಜಿ ದರ ಹೆಚ್ಚಳವಾದಂತಾಗಲಿದೆ. ಕಳೆದ ಜುಲೈನಿಂದ ಗೃಹ ಬಳಕೆ ಸಿಲಿಂಡರ್‌ ದರ 90 ರೂ. ಹೆಚ್ಚಳವಾಗಿದ್ದು, 900 ರೂ. ದಾಟಿದೆ. ಸದ್ಯದಲ್ಲೇ 1,000ಗೆ ತಲುಪಿದರೆ ಅಚ್ಚರಿಯಿಲ್ಲ.

ಸದ್ಯದಲ್ಲೇ ಪೆಟ್ರೋಲ್‌ ₹150, ಡೀಸೆಲ್‌ ₹140ಕ್ಕೆ ಏರಿಕೆ; ಸಿಲಿಂಡರ್‌ಗೂ ₹1,000ಕ್ಕೆ ಏರೋದು ಪಕ್ಕಾ!
Linkup
ಮುಂಬಯಿ: ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಹಾಗೂ ದೈನಂದಿನ ವಸ್ತುಗಳ ದರ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಇಲ್ಲಿದೆ. ಪೆಟ್ರೋಲ್‌, ಡೀಸೆಲ್‌ ದರ ಸದ್ಯಕ್ಕೆ ಕಡಿಮೆಯಾಗುವ ಮಾತಿರಲಿ, ಅದು ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ. ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ ಇರುವ ಬ್ರೆಂಟ್‌ ಕಚ್ಚಾ ತೈಲ ದರ ಮುಂದಿನ ವರ್ಷ ಶೇ.30ರಷ್ಟು ಹೆಚ್ಚಳದೊಂದಿಗೆ 110 ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ವರದಿ ತಿಳಿಸಿದೆ. ಬ್ರೆಂಟ್‌ ಕಚ್ಚಾ ತೈಲದ ಅಭಾವ ಕಳೆದ 2013ರಿಂದೀಚೆಗೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೀಗಾಗಿ ಪ್ರತಿ ಬ್ಯಾರೆಲ್‌ಗೆ ಇದರ ದರ ನೂರರ ಗಡಿ ದಾಟುವುದು ಖಚಿತ ಎಂಬ ಭವಿಷ್ಯವನ್ನು ಮಾರುಕಟ್ಟೆ ತಜ್ಞರು ನುಡಿದಿದ್ದಾರೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಬೇಡಿಕೆಯು ಬಹುತೇಕ ಕೋವಿಡ್‌ ಪೂರ್ವ ಮಟ್ಟಕ್ಕೆ ತಲುಪಿದೆ. ಹೀಗಾಗಿ ಕಚ್ಚಾ ತೈಲ ದರ ಮುಂದಿನ ವರ್ಷ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಐತಿಹಾಸಿಕ ಮಟ್ಟಕ್ಕೆ ತೈಲ ದರಕಚ್ಚಾ ತೈಲ ದರದಲ್ಲಿ ಶೇ.30 ಹೆಚ್ಚಳವಾದರೆ ಪೆಟ್ರೋಲ್‌ ದರ ಲೀಟರ್‌ಗೆ 150 ರೂ.ಗೆ ಹೆಚ್ಚಳವಾಗಲಿದೆ. ಡೀಸೆಲ್‌ ದರ 140 ರೂ.ಗೆ ಜಿಗಿಯಲಿದೆ. ಜಾಗತಿಕ ಮಟ್ಟದಲ್ಲಿ ಪ್ರತಿ ದಿನಕ್ಕೆ 99 ದಶ ಲಕ್ಷ ಬ್ಯಾರೆಲ್‌ (9.9 ಕೋಟಿ ) ತೈಲಕ್ಕೆ ಬೇಡಿಕೆ ಇದೆ. ಇದು 100 ದಶಲಕ್ಷ ಬ್ಯಾರೆಲ್‌ಗೆ (10 ಕೋಟಿ) ಏರಲಿದೆ ಎಂದು ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ. ಮಧ್ಯಪ್ರದೇಶದಲ್ಲಿ120 ರೂ.ಗೆ ಜಿಗಿತಮಧ್ಯಪ್ರದೇಶದ ಗಡಿ ಜಿಲ್ಲೆಅನುಪ್ಪುರ್‌ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 120 ರೂ.ಗೆ ಹಾಗೂ ಡೀಸೆಲ್‌ ದರ 110 ರೂ.ಗೆ ಜಿಗಿದಿದೆ. ಇದೇ ರೀತಿ ಬಾಲಾಘಾಟ್‌ನಲ್ಲಿ ಪೆಟ್ರೋಲ್‌ ದರ 119 ರೂ.ಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 111.70 ರೂ.ಗೆ ಜಿಗಿದಿದೆ. ಬುಧವಾರ 35 ಪೈಸೆ ವೃದ್ಧಿಸಿದೆ. ಡೀಸೆಲ್‌ ದರದಲ್ಲಿ 37 ಪೈಸೆ ಹೆಚ್ಚಳವಾಗಿದ್ದು, 102.60 ರೂ.ಗೆ ತಲುಪಿದೆ. ಪರಿಣಾಮವೇನು?
  • ತೈಲಕ್ಕಾಗಿ ಆಮದು ಅವಲಂಬಿಸಿರುವುದರಿಂದ ಭಾರತದ ರೀಟೇಲ್‌ ದರದಲ್ಲೂ ಹೆಚ್ಚಳ
  • ದರ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಿರುವ ತೈಲ ಕಂಪನಿಗಳು
  • ಸಾಗಣೆ ವೆಚ್ಚ, ಕಚ್ಚಾ ವಸ್ತುಗಳ ದರ ಏರಿಕೆಯಿಂದ ಸರಕು-ಸೇವೆಗಳು ದುಬಾರಿ
  • ಮಧ್ಯಮ ವರ್ಗದ ಜನತೆ, ಜನ ಸಾಮಾನ್ಯರಿಗೆ ದೈನಂದಿನ ಬದುಕು ದುಸ್ತರ
  • ಪೆಟ್ರೋಲ್‌- ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒತ್ತಡ ಹೆಚ್ಚಬಹುದು
  • ಎಲೆಕ್ಟ್ರಿಕ್‌ ವಾಹನಗಳ ಮರಾಟ ವೃದ್ಧಿ, ಪರ್ಯಾಯ ಇಂಧನಕ್ಕೆ ಬೇಡಿಕೆ ಹೆಚ್ಚಳ ಸಾಧ್ಯತೆ
ದೀಪಾವಳಿಗೂ ಮುನ್ನ ಸಿಲಿಂಡರ್‌ ದುಬಾರಿ?ದೀಪಾವಳಿಗೂ ಮುನ್ನವೇ ಅಡುಗೆ ಅನಿಲ ದರ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ತೈಲ ಕಂಪನಿಗಳು ಎಲ್‌ಪಿಜಿ ಪೂರ್ಣ ಪ್ರಮಾಣದ ದರ ಏರಿಕೆಯನ್ನು ತಡೆ ಹಿಡಿದಿದ್ದು, ಸರಕಾರದ ಅನುಮತಿಸಿದರೆ ನ.1ಕ್ಕೆ ಏರಿಕೆ ಪ್ರಕಟಿಸುವ ಸಾಧ್ಯತೆಯಿದೆ. ಈ ಏರಿಕೆಯೊಂದಿಗೆ ವರ್ಷದಲ್ಲಿ 5ನೇ ಬಾರಿ ಎಲ್‌ಪಿಜಿ ದರ ಹೆಚ್ಚಳವಾದಂತಾಗಲಿದೆ. ಕಳೆದ ಜುಲೈನಿಂದ ಗೃಹ ಬಳಕೆ ಸಿಲಿಂಡರ್‌ ದರ 90 ರೂ. ಹೆಚ್ಚಳವಾಗಿದ್ದು, 900 ರೂ. ದಾಟಿದೆ. ಸದ್ಯದಲ್ಲೇ 1,000ಗೆ ತಲುಪಿದರೆ ಅಚ್ಚರಿಯಿಲ್ಲ.