ಸುದ್ದಿಗಳಿಗೆ ಕೋಮು ಆಯಾಮ: ಮಾಧ್ಯಮಗಳಿಂದ ದೇಶಕ್ಕೆ ಕೆಟ್ಟ ಹೆಸರು ಎಂದ ಸುಪ್ರೀಂಕೋರ್ಟ್

ಕೆಲವು ಮಾಧ್ಯಮ ವರದಿಗಳಲ್ಲಿ ಎಲ್ಲ ಸುದ್ದಿಗಳೂ ಕೋಮು ಆಯಾಮವನ್ನು ಪಡೆದುಕೊಳ್ಳುತ್ತಿವೆ. ಇದು ಅಂತಿಮವಾಗಿ ದೇಶಕ್ಕೆ ಕೆಟ್ಟ ಹೆಸರು ತರುವಂತಿವೆ ಎಂದು ಸುಪ್ರೀಂಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗಳಿಗೆ ಕೋಮು ಆಯಾಮ: ಮಾಧ್ಯಮಗಳಿಂದ ದೇಶಕ್ಕೆ ಕೆಟ್ಟ ಹೆಸರು ಎಂದ ಸುಪ್ರೀಂಕೋರ್ಟ್
Linkup
ಹೊಸದಿಲ್ಲಿ: ಮಾಧ್ಯಮದ ವರ್ಗವೊಂದರಲ್ಲಿ ಆಯಾಮದಲ್ಲಿ ಸುದ್ದಿಗಳನ್ನು ತೋರಿಸುವುದು ದೇಶಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಗುರುವಾರ ಅಭಿಪ್ರಾಯಪಟ್ಟಿದೆ. ಕಳೆದ ವರ್ಷ ಕೋವಿಡ್ 19 ಸೋಂಕು ಹರಡಲು ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದ ಸಭೆಯ ಕುರಿತಾದ ಅರ್ಜಿ ವಿಚಾರಣೆ ವೇಳೆ ಅದು ಈ ಹೇಳಿಕೆ ನೀಡಿದೆ. ನಿಯಂತ್ರಣ ವ್ಯವಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ವೆಬ್ ಪೋರ್ಟಲ್ ಮತ್ತು ಚಾನೆಲ್‌ಗಳಲ್ಲಿ ಸುಳ್ಳು ಸುದ್ದಿಗಳು ಹರಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. 'ನೀವು ಯೂಟ್ಯೂಬ್ ಪ್ರವೇಶಿಸಿದರೆ, ಮುಕ್ತವಾಗಿ ಹರಿದಾಡುತ್ತಿರುವುದು ಕಾಣಿಸುತ್ತದೆ. ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ಆರಂಭಿಸಬಹುದಾಗಿದೆ' ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಎಎಸ್ ಬೋಪಣ್ಣ ಅವರನ್ನು ಒಳಗೊಂಡ ನ್ಯಾಯಪೀಠ ಅಸಮಾಧಾನ ಪ್ರದರ್ಶಿಸಿದೆ. ಈ ಪೋರ್ಟಲ್‌ಗಳು ಯಾವುದೇ ಹೊಣೆಗಾರಿಕೆಗಳಿಲ್ಲದೆ ನ್ಯಾಯಧೀಶರು ಹಾಗೂ ಸಂಸ್ಥೆಗಳ ವಿರುದ್ಧ ಏನನ್ನು ಬೇಕಾದರೂ ಬರೆಯುತ್ತವೆ. ಅಧಿಕಾರಯುತ ಧ್ವನಿಗಳನ್ನು ಮಾತ್ರ ಅವು ಕೇಳುತ್ತವೆ. ನಾವು ಯಾರನ್ನು ಕೇಳುವುದೆಂದು ಗೊತ್ತಿಲ್ಲ. ಅವರಿಗೆ ಅಧಿಕಾರ ಇರುವ ಜನರು ಮಾತ್ರವೇ ಬೇಕು. ನ್ಯಾಯಾಧೀಶರು, ಜನಸಾಮಾನ್ಯರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. 'ಖಾಸಗಿ ಮಾಧ್ಯಮದ ವರ್ಗವೊಂದರಲ್ಲಿ ತೋರಿಸುವ ಎಲ್ಲವೂ ಕೋಮು ಆಯಾಮದ ಧ್ವನಿ ಹೊಂದಿರುತ್ತದೆ. ಅಂತಿಮವಾಗಿ ಈ ದೇಶ ಕೆಟ್ಟ ಹೆಸರು ಪಡೆದುಕೊಳ್ಳಲಿದೆ. ಈ ಖಾಸಗಿ ಚಾನೆಲ್‌ಗಳನ್ನು ನಿಯಂತ್ರಿಸಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ?' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದೆ. ಕೋವಿಡ್ ಸೋಂಕು ಹರಡಲು ಆರಂಭಿಸಿದ್ದ ಸಂದರ್ಭದಲ್ಲಿ ರಾಜಧಾನಿ ಹೊಸದಿಲ್ಲಿಯ ಮರ್ಕಜ್ ನಿಜಾಮುದ್ದೀನ್‌ನಲ್ಲಿ ಸೇರಿದ್ದ ತಬ್ಲಿಘಿ ಜಮಾತ್‌ಗೆ ಸೇರಿದಂತೆ ಕೋವಿಡ್‌ಗೆ ಕೋಮು ಹಣೆಪಟ್ಟಿ ನೀಡುವಂತಹ ವರದಿಗಳನ್ನು ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.