ಶಾಸಕ ಮುನಿರತ್ನಗೆ ಶೀಘ್ರದಲ್ಲೇ ಮಂತ್ರಿ ಪದವಿ: ಸಚಿವ ವಿ. ಸೋಮಣ್ಣ ಸುಳಿವು

'ಅಧಿಕಾರ, ಅಂತಸ್ತು, ಐಶ್ವರ್ಯ ಶಾಶ್ವತವಲ್ಲ. ಮತದಾರರು ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಜೀವಿತದ ಕೊನೆ ಉಸಿರಿರುವರೆಗೂ ಜನರ ಸೇವೆ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ' - ಶಾಸಕ ಮುನಿರತ್ನ

ಶಾಸಕ ಮುನಿರತ್ನಗೆ ಶೀಘ್ರದಲ್ಲೇ ಮಂತ್ರಿ ಪದವಿ: ಸಚಿವ ವಿ. ಸೋಮಣ್ಣ ಸುಳಿವು
Linkup
ಆರ್‌.ಆರ್‌.ನಗರ (): ಇನ್ನೊಂದು ವಾರದಲ್ಲಿ ಮುನಿರತ್ನ ಅವರು ಸಚಿವರಾಗಲಿದ್ದಾರೆ ಎಂದು ವಸತಿ ವಿ. ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರ ವಾರ್ಡ್‌ನ ಜಯಣ್ಣ ವೃತ್ತದಲ್ಲಿ ಶಾಸಕ ವತಿಯಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು. 'ಸಾಮಾನ್ಯ ಜನರ ಬಗ್ಗೆ ಮುನಿರತ್ನ ಅವರಲ್ಲಿರುವ ಕಾಳಜಿ, ಪ್ರೀತಿಯನ್ನು ಗುರುತಿಸಿ ಜನತೆ ಉಪಚುನಾವಣೆಯಲ್ಲಿ 60 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದ್ದಾರೆ. ಜನತೆಯ ನಿರೀಕ್ಷೆಯಂತೆಯೇ ಉತ್ತಮ ಅವಕಾಶಗಳು ಅವರಿಗೆ ದೊರಕಲಿವೆ' ಎಂದು ಸೋಮಣ್ಣ ಹೇಳಿದರು. 'ಖುದ್ದು ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಮುನಿರತ್ನ ಅವರು ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಬಡವರ ನೆರವಿಗೆ ಧಾವಿಸುತ್ತಿರುವುದು ಉತ್ತಮ ಕಾರ್ಯ' ಎಂದು ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕ ಮುನಿರತ್ನ ಮಾತನಾಡಿ, 'ಅಧಿಕಾರ, ಅಂತಸ್ತು, ಐಶ್ವರ್ಯ ಶಾಶ್ವತವಲ್ಲ. ಮತದಾರರು ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಜೀವಿತದ ಕೊನೆ ಉಸಿರಿರುವರೆಗೂ ಜನರ ಸೇವೆ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ' ಎಂದರು. ಪಾಲಿಕೆ ಮಾಜಿ ಸದಸ್ಯ ಜಿ. ಹೆಚ್‌. ರಾಮಚಂದ್ರ, ನಳಿನಿ ಮಂಜು, ಬಿಜೆಪಿ ಮುಖಂಡರಾದ ಆರ್‌. ಜಗದೀಶ್‌, ವಿ. ಸಿ. ಚಂದ್ರು, ವಿ. ನಾಗರಾಜ್‌, ಅರುಣ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.