ಶಶಿ ತರೂರ್‌, ಮನೀಶ್‌ ತಿವಾರಿ ಪೈಕಿ ಒಬ್ಬರಿಗೆ ಕಾಂಗ್ರೆಸ್‌ ಸಂಸದೀಯ ನಾಯಕನ ಪಟ್ಟ?

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಲವು ಗಳಿಸುವ ಉದ್ದೇಶದಿಂದ ಅಧೀರ್‌ರಂಜನ್‌ ಚೌಧರಿ ಬದಲಿಗೆ ಬೇರೊಬ್ಬರನ್ನು ಸಂಸದೀಯ ನಾಯಕ ಸ್ಥಾನಕ್ಕೆ ನೇಮಕ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಸ್ಥಾನಕ್ಕೆ ಶಶಿ ತರೂರ್‌ ಹಾಗೂ ಮನೀಶ್‌ ತಿವಾರಿ ಹೆಸರು ಬಲವಾಗಿ ಕೇಳಿಬಂದಿದೆ. ಇವರಿಬ್ಬರೂ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿರುವ 'ಜಿ-23' ಗುಂಪಿನಲ್ಲಿದ್ದವರು ಎನ್ನುವುದು ಗಮನಾರ್ಹ.

ಶಶಿ ತರೂರ್‌, ಮನೀಶ್‌ ತಿವಾರಿ ಪೈಕಿ ಒಬ್ಬರಿಗೆ ಕಾಂಗ್ರೆಸ್‌ ಸಂಸದೀಯ ನಾಯಕನ ಪಟ್ಟ?
Linkup
ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನವೇ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕನ ಬದಲಾವಣೆ ಬಹುತೇಕ ಖಚಿತವಾಗಿದೆ. ಈ ಸ್ಥಾನಕ್ಕೆ ಶಶಿ ತರೂರ್‌ ಹಾಗೂ ಮನೀಶ್‌ ತಿವಾರಿ ಹೆಸರು ಬಲವಾಗಿ ಕೇಳಿಬಂದಿದೆ. ಇವರಿಬ್ಬರೂ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿರುವ 'ಜಿ-23' ಗುಂಪಿನಲ್ಲಿದ್ದವರು ಎನ್ನುವುದು ಗಮನಾರ್ಹ. ಗೌರವ್‌ ಗೊಗೊಯ್‌, ರಣವೀತ್‌ ಸಿಂಗ್‌ ಬಿಟ್ಟೂ, ಉತ್ತಮ್‌ಕುಮಾರ್‌ ರೆಡ್ಡಿ ಹೆಸರು ಸಹ ಹೈಕಮಾಂಡ್‌ ಪರಿಶೀಲನೆಯಲ್ಲಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಲವು ಗಳಿಸುವ ಉದ್ದೇಶದಿಂದ ಅಧೀರ್‌ರಂಜನ್‌ ಚೌಧರಿ ಬದಲಿಗೆ ಬೇರೊಬ್ಬರನ್ನು ಸಂಸದೀಯ ನಾಯಕ ಸ್ಥಾನಕ್ಕೆ ನೇಮಕ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ. 19ರಿಂದ ಸಂಸತ್‌ ಅಧಿವೇಶನ; ಈ ಸಲ ಏಕಕಾಲದಲ್ಲಿ ಕಲಾಪಸಂಸತ್‌ನ ಮುಂಗಾರು ಅಧಿವೇಶನ ಜುಲೈ 19ರಿಂದ ಆಗಸ್ಟ್‌ 13ರವರೆಗೆ ನಡೆಯಲಿದೆ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಾರಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಏಕಕಾಲದಲ್ಲಿ ನಡೆಯಲಿವೆ. ನಿತ್ಯ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದೆ ಎಂದು ತಿಳಿಸಿದರು. ಕೊರೊನಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಲೋಕಸಭೆ ಸದಸ್ಯರ ಪೈಕಿ 323 ಮಂದಿ ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೆ, 23 ಜನ ವೈದ್ಯಕೀಯ ಕಾರಣಗಳಿಂದ ಒಂದೂ ಡೋಸ್‌ ಪಡೆದಿಲ್ಲ. ಉಳಿದವರು ಒಂದು ಡೋಸ್‌ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಕೊರೊನಾ ಕಾರಣದಿಂದ ಮುಂಗಾರು ಮತ್ತು ಬಜೆಟ್‌ ಅಧಿವೇಶನಗಳಲ್ಲಿ ಉಭಯ ಸದನಗಳ ಕಲಾಪವನ್ನು ಪಾಳಿಯಲ್ಲಿ ನಡೆಸಲಾಗಿತ್ತು.