'ಶಿವಸೇನಾ ಎಂದಿಗೂ ನಮ್ಮ ಶತ್ರು ಆಗಿರಲಿಲ್ಲ': ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್

ಶಿವಸೇನಾ ಹಿಂದೆ ಎಂದಿಗೂ ತಮ್ಮ ಶತ್ರುವಾಗಿರಲಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಸೇನಾ ಜತೆಗೆ ಮರು ಮೈತ್ರಿ ಬಗ್ಗೆ ಹಾರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ.

'ಶಿವಸೇನಾ ಎಂದಿಗೂ ನಮ್ಮ ಶತ್ರು ಆಗಿರಲಿಲ್ಲ': ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್
Linkup
ಮುಂಬಯಿ: ಮಹಾರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕಿತ್ತಾಡಿಕೊಂಡು ದೂರವಾಗಿದ್ದ ಮತ್ತು ನಡುವಿನ ಸಂಬಂಧಕ್ಕೆ ಮತ್ತೆ ಬೆಸುಗೆ ಹಾಕುವ ಪ್ರಯತ್ನಗಳು ನಡೆಯುತ್ತಿವೆಯೇ? ಹೀಗೊಂದು ಅನುಮಾನ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಉಭಯ ಪಕ್ಷಗಳ ನಾಯಕರ ಮಾತುಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಈ ಅನುಮಾನಗಳಿಗೆ ಬಿಜೆಪಿ ನಾಯಕ ಅವರು ನೀಡಿರುವ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ. ಶಿವಸೇನಾ ಹಿಂದೆ ಎಂದಿಗೂ ತನ್ನ ಶತ್ರು ಆಗಿರಲಿಲ್ಲ ಎಂದಿರುವ ಫಡ್ನವೀಸ್, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಮರು ಮೈತ್ರಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. 'ನಾವು ಎಂದಿಗೂ ಶತ್ರುಗಳಾಗಿರಲಿಲ್ಲ. ಅವರು ನಮ್ಮ ಸ್ನೇಹಿತರಾಗಿದ್ದರು ಮತ್ತು ಅವರು ಯಾವ ಜನರ ವಿರುದ್ಧ ಹೋರಾಡಿದ್ದರೂ ಅವರ ಜತೆಗೇ ಸೇರಿಕೊಂಡು ಸರ್ಕಾರ ರಚಿಸಿದರು ಹಾಗೂ ನಮ್ಮನ್ನು ಬಿಟ್ಟುಹೋದರು' ಎಂದು ಫಡ್ನವೀಸ್ ಹೇಳಿದ್ದಾರೆ. "ರಾಜಕಾರಣದಲ್ಲಿ 'ಒಂದು ವೇಳೆ' ಮತ್ತು 'ಆದರೆ'ಗಳು ಇರುವುದಿಲ್ಲ. ನಿರ್ಧಾರಗಳನ್ನು ಸನ್ನಿವೇಶಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ. ಬಿಜೆಪಿ ನಾಯಕರ ಜತೆಗಿನ ಸಂಬಂಧ ಈಗಲೂ ಚೆನ್ನಾಗಿಯೇ ಇದೆ ಎಂದು ಹೇಳಿಕೆ ನೀಡಿದ್ದ ಶಿವಸೇನಾ ಸಂಸದ ಸಂಜಯ್ ರಾವತ್, ಅತ್ತ ಮಹಾರಾಷ್ಟ್ರದಲ್ಲಿನ ಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರಕಾರ ಗಟ್ಟಿಯಾಗಿಯೇ ಇದೆ ಎಂದಿದ್ದರು. ಕಳೆದ ಒಂದು ತಿಂಗಳಿನಿಂದ ರಾಜಕಾರಣದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಕಳೆದ ವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು.