ಮುಂಬಯಿ ತ್ರಿವಳಿ ಸ್ಫೋಟ ಪ್ರಕರಣ: ಯಾಸಿನ್ ಭಟ್ಕಳ್ ವಿರುದ್ಧ ಆರೋಪ ನಿಗದಿಗೊಳಿಸಿದ ಕೋರ್ಟ್

2011ರ ಮುಂಬಯಿ ತ್ರಿವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ್ ವಿರುದ್ಧದ ಯುಎಪಿಎ, ಎಂಸಿಒಸಿಎ ಅಡಿ ಆರೋಪಗಳನ್ನು ಕೋರ್ಟ್ ನಿಗದಿಗೊಳಿಸಿದೆ.

ಮುಂಬಯಿ ತ್ರಿವಳಿ ಸ್ಫೋಟ ಪ್ರಕರಣ: ಯಾಸಿನ್ ಭಟ್ಕಳ್ ವಿರುದ್ಧ ಆರೋಪ ನಿಗದಿಗೊಳಿಸಿದ ಕೋರ್ಟ್
Linkup
ಮುಂಬಯಿ: ಮುಂಬೈನಲ್ಲಿ 2011ರಲ್ಲಿ ನಡೆದ ತ್ರಿವಳಿ ಸ್ಫೋಟದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸಂಘಟನೆಯ ಪ್ರಮುಖ ಉಗ್ರ ವಿರುದ್ಧದ ಆರೋಪಗಳನ್ನು ವಿಶೇಷ ನ್ಯಾಯಾಲಯ ನಿಗದಿಗೊಳಿಸಿದೆ. ಮತ್ತೊಬ್ಬ ಆರೋಪಿ ಅಜಾಜ್ ಸಯೀದ್ ಶೇಖ್ ವಿರುದ್ಧದ ಆರೋಪಗಳನ್ನೂ ನಿಗದಿಗೊಳಿಸಿದೆ. ಇತರೆ ಸ್ಫೋಟ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಯಾಸಿನ್ ಮತ್ತು ಶೇಖ್ ಇಬ್ಬರನ್ನೂ ಹೊಸದಿಲ್ಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ () ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ವಿವಿಧ ಸೆಕ್ಷನ್‌ಗಳ ಅಡಿ ಕೊಲೆ, ಅಪರಾಧ ಸಂಚು ಸೇರಿದಂತೆ ಹಲವು ಪ್ರಕರಣಗಳ ಆರೋಪಗಳನ್ನು ನ್ಯಾಯಾಲಯ ಸೋಮವಾರ ನಿಗದಿಗೊಳಿಸಿದೆ. ಈ ಪ್ರಕರಣದಲ್ಲಿ ಇಬ್ಬರೂ ತಾವು ತಪ್ಪಿತಸ್ಥರಲ್ಲ ಎಂದು ವಾದಿಸಿದ್ದಾರೆ. ಆರೋಪ ನಿಗದಿಗೊಳಿಸುವ ಪ್ರಕ್ರಿಯೆಗಾಗಿ ತಮ್ಮನ್ನು ಮುಂಬಯಿ ನ್ಯಾಯಾಲಯದಲ್ಲಿ ಹಾಜರುಪಡಿಸುವುದಕ್ಕೆ ಇಬ್ಬರೂ ಒತ್ತಾಯಿಸಿದ್ದರು. ಇಬ್ಬರೂ ಮರಣ ದಂಡನೆ ಶಿಕ್ಷೆ ಎದುರಿಸುತ್ತಿರುವುದರಿಂದ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ತನಗೆ ಅಧಿಕಾರವಿಲ್ಲ ಎಂದು ಮಹಾರಾಷ್ಟ್ರ ಸರಕಾರ ಹೇಳಿತ್ತು. ಇದರಂತೆ ಶೇಖ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಕಳೆದ ತಿಂಗಳು ವಜಾಗೊಳಿಸಿತ್ತು. ಸೋಮವಾರ ಯಾಸಿನ್ ಕೂಡ ತನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಬಗ್ಗೆ ಒತ್ತಾಯಿಸಿದ್ದ. ಆತನಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ನ್ಯಾಯಸಮ್ಮತ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸಿಂಗ್‌ಗಳಲ್ಲಿ ಆತನನ್ನು ನಿರಂತರವಾಗಿ ಸಂಪರ್ಕ ಒದಗಿಸಲಾಗಿದೆ. ಆರೋಪ ವಿಚಾರಣೆಗೆ ಆತ ಆರಂಭದಲ್ಲಿ ಪದೇ ಪದೇ ನಿರಾಕರಿಸಿದ್ದರಿಂದ ವಿಚಾರಣೆಯು ಅಗತ್ಯ ವೇಗದಲ್ಲಿ ನಡೆದಿಲ್ಲ ಎಂದು ಕೋರ್ಟ್ ಹೇಳಿತು. 2011ರಲ್ಲಿ ಮೂರು ಕಡೆ ನಡೆದ ಪ್ರಕರಣ ಸ್ಫೋಟದಲ್ಲಿ 27 ಮಂದಿ ಮೃತಪಟ್ಟು 127 ಮಂದಿ ಗಾಯಗೊಂಡಿದ್ದರು.