ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆ ಬಳಿಕ ಜೀವಂತವಾಗಿ ಸಿಕ್ಕ ವ್ಯಕ್ತಿ..!

ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆ ಬಳಿಕ ಜೀವಂತವಾಗಿ ವ್ಯಕ್ತಿ ಸಿಕ್ಕ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಅದಾದ ಬಳಿಕ ಮೊರಾದಾಬಾದ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ವ್ಯಕ್ತಿ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.

ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆ ಬಳಿಕ ಜೀವಂತವಾಗಿ ಸಿಕ್ಕ ವ್ಯಕ್ತಿ..!
Linkup
ಲಖ್ನೋ: ಮೃತಪಟ್ಟಿದ್ದಾನೆ ಎಂದು ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇಟ್ಟಿದ್ದ ವ್ಯಕ್ತಿ ಬದುಕಿರುವ ಘಟನೆ ಉತ್ತರ ಪ್ರದೇಶದ ಜಿಲ್ಲೆಯಲ್ಲಿ ನಡೆದಿದೆ. ಇದಾದ ಬಳಿಕ ಮೊರಾದಾಬಾದ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಶ್ರೀಕೇಶ್‌ ಕುಮಾರ್‌ ಮಂಗಳವಾರ ಮೃತಪಟ್ಟಿದ್ದಾರೆ. ನವೆಂಬರ್‌ 18ರಂದು ನಡೆದ ಅಪಘಾತದಲ್ಲಿ ಗಾಯಗೊಂಡ ಶ್ರೀಕೇಶ್‌ ಕುಮಾರ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶ್ರೀಕೇಶ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿ ಮರಣೋತ್ತರ ಪರೀಕ್ಷೆಗೆ ಶವಾಗಾರದಲ್ಲಿ ಸುಮಾರು 7 ಗಂಟೆಗಳ ಕಾಲ ಇಡಲಾಗಿತ್ತು. ಮರುದಿನ ಬೆಳಗ್ಗೆ ಕುಟುಂಬಸ್ಥರು ಮೃತ ದೇಹವನ್ನು ಗುರುತಿಸಿ ಪಂಚನಾಮ ಮಾಡಲು ಪೊಲೀಸರೊಂದಿಗೆ ಆಸ್ಪತ್ರೆಗೆ ಬಂದಾಗ ವ್ಯಕ್ತಿ ಬದುಕಿರುವುದು ಗೊತ್ತಾಗಿದೆ. ಆಗ ತಕ್ಷಣ ಕುಟುಂಬಸ್ಥರು ವೈದ್ಯರಿಗೆ ಮಾಹಿತಿ ನೀಡಿದ್ದು, ಶ್ರೀಕೇಶ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಮಂಗಳವಾರ ಶ್ರೀಕೇಶ್‌ ಸಾವನ್ನಪ್ಪಿದ್ದಾರೆ. ಮಂಗಳವಾರ ಸಂಜೆ ಶ್ರೀಕೇಶ್‌ ಸಾವನ್ನಪ್ಪಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಮೊರಾದಾಬಾದ್‌ ಜಿಲ್ಲಾಸ್ಪತ್ರೆಯ ಸಿಎಂಎಸ್‌ ಡಾ.ಶಿವಸಿಂಗ್‌ ಹೇಳಿದ್ದಾರೆ. ವೈದ್ಯರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಶ್ರೀಕೇಶ್‌ ಸಾವನ್ನಪ್ಪಿದ್ದಾನೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ತುರ್ತು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಶ್ರೀಕೇಶ್‌ನನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸುವುದಕ್ಕೂ ಮೊದಲು ಮೂರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ನೀಡಿರಲಿಲ್ಲ. ತುರ್ತು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಶ್ರೀಕೇಶ್‌ನನ್ನು ಪರಿಶೀಲಿಸಿದರು. ಆದರೆ, ಚಿಕಿತ್ಸೆ ನೀಡಲಿಲ್ಲ. ಅವರಿಗೆ ನಾಡಿ ಮಿಡಿತ ಮತ್ತು ರಕ್ತದೊತ್ತಡ ಇಲ್ಲ, ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು ಎಂದು ಶ್ರೀಕೇಶ್‌ನ ಸಂಬಂಧಿಕ ಕಿಶೋರಿ ಲಾಲ್‌ ಆರೋಪಿಸಿದ್ದಾರೆ.