ಬ್ರಾಹ್ಮಣರ ಹಿತಕ್ಕಾಗಿ ಕೆಲಸ ಮಾಡುವವರನ್ನೇ ಆಯ್ಕೆ ಮಾಡಿ; ಹೈಕೋರ್ಟ್‌ ನಿವೃತ್ತ ನ್ಯಾ. ಎನ್‌.ಕುಮಾರ್

ರಾಜ್ಯಾದ್ಯಂತ ಇರುವ ಬ್ರಾಹ್ಮಣರನ್ನು ಸಂಘಟಿಸುವ ಮತ್ತು ಅವರಿಗಾಗಿ ಕೆಲಸ ಮಾಡುವ ವ್ಯಕ್ತಿಯನ್ನೇ ಆಯ್ಕೆ ಮಾಡುವ ಅನಿವಾರ್ಯತೆ ಬ್ರಾಹ್ಮಣ ಸಮುದಾಯಕ್ಕೆ ಇದೆ. ರಾಜ್ಯಾದಾದ್ಯಂತ ಬ್ರಾಹ್ಮಣರನ್ನು ಸಂಘಟಿಸುವ ಮನಸ್ಸು ಹೊಂದಿರುವವರನ್ನು ಆಯ್ಕೆ ಮಾಡಿದರಷ್ಟೇ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಹೇಳಿದರು.

ಬ್ರಾಹ್ಮಣರ ಹಿತಕ್ಕಾಗಿ ಕೆಲಸ ಮಾಡುವವರನ್ನೇ ಆಯ್ಕೆ ಮಾಡಿ; ಹೈಕೋರ್ಟ್‌ ನಿವೃತ್ತ ನ್ಯಾ. ಎನ್‌.ಕುಮಾರ್
Linkup
ಬೆಂಗಳೂರು: ಸಮರ್ಥ, ಶಕ್ತಿಶಾಲಿಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವನ್ನು ಕಟ್ಟಿ ಬೆಳೆಸುವ ಅಗತ್ಯ ಇದ್ದು, ಅದಕ್ಕಾಗಿ ಬ್ರಾಹ್ಮಣರು ಸಂಘಟಿತರಾಗಬೇಕಾಗಿದೆ. ಬ್ರಾಹ್ಮಣರ ಹಿತಕ್ಕಾಗಿ ಕೆಲಸ ಮಾಡುವವರನ್ನೇ ಆಯ್ಕೆ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಅಭಿಪ್ರಾಯಪಟ್ಟರು.‌ ನಗರದ ಉತ್ತರಹಳ್ಳಿಯ ಶಾಂತಿಸಾಗರ ಸಭಾಭವನದಲ್ಲಿ ಶುಕ್ರವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್‌) ಚುನಾವಣಾ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಸವನಗುಡಿಯಿಂದ ಹೊರಬಂದು, ರಾಜ್ಯಾದ್ಯಂತ ಇರುವ ಬ್ರಾಹ್ಮಣರನ್ನು ಸಂಘಟಿಸುವ ಮತ್ತು ಅವರಿಗಾಗಿ ಕೆಲಸ ಮಾಡುವ ವ್ಯಕ್ತಿಯನ್ನೇ ಆಯ್ಕೆ ಮಾಡುವ ಅನಿವಾರ್ಯತೆ ಇದೆ. ರಾಜ್ಯಾದಾದ್ಯಂತ ಬ್ರಾಹ್ಮಣರನ್ನು ಸಂಘಟಿಸುವ ಮನಸ್ಸು ಹೊಂದಿರುವವರನ್ನು ಆಯ್ಕೆ ಮಾಡಿದರಷ್ಟೇ ಮಹಾಸಭಾ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದರು. ಮಹಾಸಭಾ ಸ್ಥಾಪನೆಗೊಂಡು ಆರ್ಧ ಶತಮಾನವಾಗುತ್ತ ಬಂದಿದೆ. ಸುಮಾರು 40 ಲಕ್ಷದಷ್ಟು ಜನರನ್ನು ಸಮರ್ಥವಾಗಿ ಪ್ರತಿನಿಧಿಸಬೇಕಿದ್ದ ಸಂಘಟನೆ ನಾಯಕತ್ವ ಕೊರತೆಯಿಂದ ಬಳಲುತ್ತಿದೆ. ಈ ನಿಟ್ಟಿನಲ್ಲಿ ಎಸ್‌.ರಘುನಾಥ್‌ ಅವರ ಆಯ್ಕೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಒಳತಾಗುವ ವಿಶ್ವಾಸ ಇದೆ ಎಂದು ಹೇಳಿದರು. ಎಕೆಬಿಎಂಎಸ್‌ ಅಧ್ಯಕ್ಷ ಆಕಾಂಕ್ಷಿ ಅಭ್ಯರ್ಥಿತ ಎಸ್‌.ರಘುನಾಥ್ ಮಾತನಾಡಿ, ತಮ್ಮ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಬ್ರಾಹ್ಮಣ ಸಮುದಾಯದ ಹಿತಕ್ಕಾಗಿ ಪಿಂಚಣಿ ಯೋಜನೆ, ಸಾಮೂಹಿಕ ಆರೋಗ್ಯ ವಿಮೆ, ಶಾಲೆ, ಕಾಲೇಜುಗಳ ಸ್ಥಾಪನೆ ಸಹಿತ ವಿವಿಧ ಕಾರ್ಯಗಳಿಗಾಗಿ 100 ಕೋಟಿ ರೂಪಾಯಿಗಳ ಕಾಪು ನಿಧಿ ಸ್ಥಾಪಿಸುವ ಚಿಂತನೆ ನಡೆಸಿರುವುದನ್ನು ಸಭೆಗೆ ತಿಳಿಸಿದರು. ತಮ್ಮನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಪೂರ್ಣಾವಧಿಗೆ ಕೆಲಸ ಮಾಡುವ ವಾಗ್ದಾನ ನೀಡಿದರು. ರಾಜ್ಯದಲ್ಲಿ ಪ್ರಭಾವ ಬೀರಲು ವಿಫಲವಾಗಿರುವುದಕ್ಕೆ ಸದಸ್ಯರ ಸಂಖ್ಯೆ ಕಡಿಮೆ ಇರುವುದು ಮತ್ತು ಎಲ್ಲಾ ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿಧಿತ್ವ ಸಿಗದೆ ಇರುವುದು ಕಾರಣ. ಹೀಗಾಗಿ ಸದಸ್ಯತ್ವವನ್ನು ಈಗಿನ 40 ಸಾವಿರದಿಂದ 5 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ ಎಂದರು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಮುಖಂಡರಾದ ವೇದಬ್ರಹ್ಮ ಡಾ.ದೇತಿ ಕೃಷ್ಣಮೂರ್ತಿ, ವಿ.ಮಂಜುನಾಥ್‌, ಶ್ರೀಮತಿ ಇಂದುಮತಿ, ಸುದರ್ಶನಂ, ವೈ.ಎನ್‌.ಶರ್ಮಾ, ವೃಕ್ಷಂ ಸುರೇಶ್‌ ಇದ್ದರು. ‘ಬ್ರಾಹ್ಮಣ ಮಹಾಸಭಾ ಕಳಂಕಿತರ ಕೈಗೊಂಬೆ’ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಶೋಕ ಹಾರ್ನಹಳ್ಳಿ ಅವರು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಏರುವ ಪ್ರಯತ್ನ ನಡೆಸಿದ್ದಾರೆ. ಸಹಕಾರ ಬ್ಯಾಂಕಿಗೆ ವಂಚಿಸಿದವರ ಕೈಗೊಂಬೆ ರೀತಿಯಲ್ಲಿ ಅವರು ನಡೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ, ಬ್ರಾಹ್ಮಣ ಸಮುದಾಯ ಇದೀಗ ಯೋಚಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಬುದ್ಧಿವಂತಿಕೆ ತೋರಿಸಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್ ಸಲಹೆ ನೀಡಿದರು. ತೀರಾ ಸಂಕುಚಿತವಾಗಿ ಬಸವನಗುಡಿಗೆ ಸೀಮಿತವಾಗಿ ಉಳಿದಿರುವ ಮಹಾಸಭಾವನ್ನು ರಾಜ್ಯದ 31 ಜಿಲ್ಲೆಗಳ ಪ್ರತಿನಿಧಿ ಸಂಸ್ಥೆಯಾಗಿ ಹಾಗೂ ಬ್ರಾಹ್ಮಣ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಮಹಾಸಭಾ ನಿರ್ಮಾಣ ಅಗತ್ಯವಾಗಿದ್ದು, ಅದಕ್ಕಾಗಿ ನಾಯಕತ್ವ ಬದಲಾವಣೆಯ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.