ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಯಾರಿಗೆಲ್ಲ ಸ್ಥಾನ ಸಿಗಬಹುದು?

2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಖಾಲಿ ಇರುವ 28 ಸ್ಥಾನಗಳಿಗೆ ಯಾರೆಲ್ಲ ರೇಸ್‌ನಲ್ಲಿದ್ದಾರೆ?

ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಯಾರಿಗೆಲ್ಲ ಸ್ಥಾನ ಸಿಗಬಹುದು?
Linkup
ಹೊಸದಿಲ್ಲಿ: ನೇತೃತ್ವದ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆ ನಡೆಯುತ್ತಿದೆ. ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಹಾಗೂ 2024ರ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿಯೇ ಕೇಂದ್ರ ಸಚಿವ ನಡೆಯುವ ಸಾಧ್ಯತೆ ಇದೆ. ಈ ಬಾರಿ ಹೊಸದಾಗಿ ಯಾರು ಸಚಿವ ಸ್ಥಾನಕ್ಕೆ ಬಡ್ತಿ ಪಡೆಯಲಿದ್ದಾರೆ ಮತ್ತು ಯಾರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಲ್ಲಿ ಬಂಡಾಯವೇಳುವ ಮೂಲಕ ಬಿಜೆಪಿಯು ಮಧ್ಯಪ್ರದೇಶದಲ್ಲಿ ಮರಳಿ ಅಧಿಕಾರಕ್ಕೆ ಬರಲು ನೆರವಾದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಂದ್ರ ಸಂಪುಟದಲ್ಲಿ ಮನ್ನಣೆ ದೊರಕುವ ನಿರೀಕ್ಷೆಯಿದೆ. ಇನ್ನು ಅಸ್ಸಾಂನಲ್ಲಿ ಸತತ ಎರಡನೆಯ ಬಾರಿ ಅಧಿಕಾರಕ್ಕೆ ಬಂದಿರುವ ಪಕ್ಷದ ಮುಖ್ಯಮಂತ್ರಿ ಸ್ಥಾನವನ್ನು ಹಿಮಾಂತ ಬಿಸ್ವ ಶರ್ಮಾ ಅವರಿಗೆ ಬಿಟ್ಟುಕೊಟ್ಟ ಸರ್ಬಾನಂದ ಸೋನೊವಾಲ್ ಅವರಿಗೂ ಆದ್ಯತೆ ಸಿಗಲಿದೆ ಎನ್ನಲಾಗಿದೆ. ಬಿಹಾರಕ್ಕೆ ಸಚಿವ ಸ್ಥಾನಗಳನ್ನು ನೀಡುವ ವಿಚಾರ ಹೆಚ್ಚು ಕುತೂಹಲ ಮೂಡಿಸಿದೆ. ನರೇಂದ್ರ ಮೋದಿ ಶ್ರೀರಾಮ, ತಾನು ಅವರ ಭಕ್ತ ಆಂಜನೇಯ ಎಂದು ಹೇಳಿಕೊಂಡಿರುವ ಎಲ್‌ಜೆಪಿಯ ಮಾಜಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ ಮೋದಿ ಸರಕಾರ ಅವಕಾಶ ನೀಡಲಿದೆಯೇ ಅಥವಾ ಕಳೆದ ತಿಂಗಳು ಪಕ್ಷದಲ್ಲಿ ಬಂಡಾಯವೆದ್ದು ಚಿರಾಗ್ ಅವರನ್ನು ಮುಖ್ಯಸ್ಥನ ಸ್ಥಾನದಿಂದ ಕೆಳಕ್ಕಿಳಿಸಿದ ಅವರ ಚಿಕ್ಕಪ್ಪ ಪಶುಪತಿ ಪರಸ್ ಅವರನ್ನು ಪರಿಗಣಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಕಳೆದ ವರ್ಷ ನಿಧನರಾದ ರಾಮ್ ವಿಲಾಸ್ ಪಾಸ್ವಾನ್ ಅವರ ಸ್ಥಾನಕ್ಕೆ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಬಿಹಾರದಲ್ಲಿ ಎನ್‌ಡಿಎ ಮಿತ್ರ ಪಕ್ಷವಾಗಿರುವ ನಿತೀಶ್ ಕುಮಾರ್ ಅವರ ಜೆಡಿಯು, ಸಂಪುಟದಲ್ಲಿ ಮರಳಿ ಸ್ಥಾನ ಪಡೆಯುವ ಸಂಭವವಿದೆ. 2019ರಲ್ಲಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ನಿತೀಶ್, ಕೇಂದ್ರ ಸಂಪುಟದಲ್ಲಿನ ಒಂದು ಸ್ಥಾನದ ಆಫರ್ ತಿರಸ್ಕರಿಸಿದ್ದರು. ಜೆಡಿಯು ಮುಖಂಡರಾದ ಲಲನ್ ಸಿಂಗ್, ರಾಮನಾಥ್ ಥಾಕೂರ್ ಮತ್ತು ಸಂತೋಷ್ ಕುಶ್ವಾಹ ರೇಸ್‌ನಲ್ಲಿದ್ದು, ಅವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನು ಬಿಹಾರ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ ಮತ್ತು ಗುಜರಾತ್ ಹಾಗೂ ಬಿಹಾರದ ಉಸ್ತುವಾರಿಯಾಗಿರುವ ಹಿರಿಯ ನಾಯಕ ಭೂಪೇಂದ್ರ ಯಾದವ್ ಅವರಿಗೂ ಮೋದಿ ಸಂಪುಟದಲ್ಲಿ ಸ್ಥಾನ ಸಿಗಬಹುದು. ಉತ್ತರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆವಿವಿಧ ಸಚಿವಾಲಯಗಳ ಕಾರ್ಯವೈಖರಿ ಮತ್ತು ದಕ್ಷತೆಯ ಬಗ್ಗೆ ಕಳೆದ ತಿಂಗಳು ಸತತ ಪರಾಮರ್ಶನಾ ಸಭೆಗಳನ್ನು ನಡೆಸಿದ್ದ ಪ್ರಧಾನಿ ಮೋದಿ, ಕೆಲವು ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿರುವುದರಿಂದ ವರುಣ್ ಗಾಂಧಿ, ರಾಮಶಂಕರ್ ಕಠೇರಿಯಾ, ಅನಿಲ್ ಜೈನ್, ರೀತಾ ಬಹುಗುಣ ಜೋಷಿ ಮತ್ತು ಜಾಫರ್ ಇಸ್ಲಾಂ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಅಲ್ಲದೆ, ಉತ್ತರ ಪ್ರದೇಶದ ಬಿಜೆಪಿ ಮಿತ್ರಪಕ್ಷ ಅಪ್ನಾದಳದ ಅನುಪ್ರಿಯಾ ಪಟೇಲ್ ಅವರನ್ನೂ ಸಂಪುಟಕ್ಕೆ ಆಹ್ವಾನಿಸಬಹುದು. ಪ್ರತಾಪ್ ಸಿಂಹಗೆ ಸ್ಥಾನ?ಕರ್ನಾಟಕದಿಂದ ಮೈಸೂರು ಸಂಸದ ಅವರ ಹೆಸರು ಕೇಳಿಬರುತ್ತಿದೆ. ಉತ್ತರಾಖಂಡದಿಂದ ಅಜಯ್ ಭಟ್ ಅಥವಾ ಅನಿಲ್ ಬಲೂನಿ ಸಚಿವ ಸ್ಥಾನಕ್ಕೆ ಏರಬಹುದು. ಬಂಗಾಳ ಚುನಾವಣೆಯಲ್ಲಿ ಪಕ್ಷದ ಪರವಾಗಿ ದುಡಿದಿದ್ದ ಜಗನ್ನಾಥ್ ಸರ್ಕಾರ್, ಶಂತನು ಠಾಕೂರ್ ಮತ್ತು ನಿಥೀಟ್ ಪ್ರಾಮಾಣಿಕ್ ಅವರ ಹೆಸರು ಹರಿದಾಡುತ್ತಿದೆ. ಜತೆಗೆ ಹರ್ಯಾಣದ ಬ್ರಿಜೇಂದ್ರ ಸಿಂಗ್, ರಾಜಸ್ಥಾನದ ರಾಹುಲ್ ಕಾಸ್ವಾನ್, ಒಡಿಶಾದ ಅಶ್ವನಿ ವೈಷ್ಣವ್, ಮಹಾರಾಷ್ಟ್ರದಿಂದ ಪೂನಂ ಮಹಾಜನ್ ಅಥವಾ ಪ್ರೀತಂ ಮುಂಡೆ ಮತ್ತು ದಿಲ್ಲಿಯಿಂದ ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖಿ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುವ ಇತರೆ ನಾಯಕರಾಗಿದ್ದಾರೆ. 28 ಸಚಿವ ಸ್ಥಾನಗಳು ಖಾಲಿಕೇಂದ್ರ ಸಂಪುಟವು ಗರಿಷ್ಠ 81 ಸಚಿವರನ್ನು ಹೊಂದಬಹುದಾಗಿದೆ. ಪ್ರಸ್ತುತ 53 ಸಚಿವರು ಮಾತ್ರ ಇದ್ದು, ಇನ್ನೂ 28 ಸಚಿವ ಸ್ಥಾನಗಳು ಖಾಲಿ ಇವೆ. ಹೊಸ ಸಚಿವರ ಸೇರ್ಪಡೆಯಿಂದ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಷವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರ ಮೇಲಿರುವ ಹೆಚ್ಚುವರಿ ಸಚಿವಾಲಯಗಳ ನಿರ್ವಹಣೆ ಹೊಣೆ ಹಂಚಿಕೆಯಾಗಲಿದೆ.