ಕೋವಿಡ್‌ 2ನೇ ಅಲೆಗೆ 300ಕ್ಕೂ ಹೆಚ್ಚು ವೈದ್ಯರ ಸಾವು: ಐಎಂಎ ವರದಿ

ಕೋವಿಡ್‌ 2ನೇ ಅಲೆಗೆ ಈವರೆಗೆ 329 ವೈದ್ಯರು ಸಾವನ್ನಪ್ಪಿದ್ದಾರೆ. ಈ ಪೈಕಿ 80 ವ್ಯದ್ಯರ ಸಾವುಗಳು ಬಿಹಾರ ರಾಜ್ಯ ಒಂದರಿಂದಲೇ ವರದಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಧಿಕೃತವಾಗಿ ತಿಳಿಸಿದೆ.

ಕೋವಿಡ್‌ 2ನೇ ಅಲೆಗೆ 300ಕ್ಕೂ ಹೆಚ್ಚು ವೈದ್ಯರ ಸಾವು: ಐಎಂಎ ವರದಿ
Linkup
ಹೊಸದಿಲ್ಲಿ: ದೇಶದಲ್ಲಿ ಕೋವಿಡ್‌ 2ನೇ ಅಲೆಗೆ 300ಕ್ಕೂ ಹೆಚ್ಚು ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಧಿಕೃತವಾಗಿ ತಿಳಿಸಿದೆ. ಕೋವಿಡ್‌ 2ನೇ ಅಲೆಗೆ ಈವರೆಗೆ 329 ವೈದ್ಯರು ಸಾವನ್ನಪ್ಪಿದ್ದಾರೆ. ಈ ಪೈಕಿ 80 ವ್ಯದ್ಯರ ಸಾವುಗಳು ಬಿಹಾರ ರಾಜ್ಯ ಒಂದರಿಂದಲೇ ವರದಿಯಾಗಿದೆ. ಕೋವಿಡ್ ಮೊದಲ ಅಲೆಗೆ ಹೋಲಿಸಿದರೆ, 2ನೇ ಅಲೆಯಲ್ಲಿ ಅತಿ ಹೆಚ್ಚು ವೈದ್ಯರ ಸಾವು ಸಂಭವಿಸಿದೆ ಎಂದು ಐಎಂಎ ತಿಳಿಸಿದೆ. ಕೋವಿಡ್ -19 ಪ್ರಕರಣಗಳ ತೀವ್ರ ಹೆಚ್ಚಳದಿಂದಾಗಿ ಏಪ್ರಿಲ್‌ನಲ್ಲಿ ಭಾರೀ ಬಿಕ್ಕಟ್ಟು ಎದುರಿಸಿದ್ದ ದಿಲ್ಲಿಯಲ್ಲಿ ಕನಿಷ್ಠ 73 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯರ ಸಂಘ ತಿಳಿಸಿದೆ. ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಕೆಲಸ ಮಾಡಿದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿವೆ. ಉತ್ತರ ಪ್ರದೇಶದಲ್ಲಿ ಕೋವಿಡ್‌ 2ನೇ ಅಲೆಗೆ ಕನಿಷ್ಠ 41 ವೈದ್ಯರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ತನ್ನ ವಿವಿಧ ಶಾಖೆಗಳಿಂದ ಬರುವ ಮಾಹಿತಿಯನ್ನು ಆದರಿಸಿ ವರದಿ ಮಾಡಲಾಗಿದೆ ಎಂದು ಐಎಂಎ ಹೇಳಿದೆ. ಕೋವಿಡ್ -19 ಕಾರಣದಿಂದಾಗಿ ದಿನಕ್ಕೆ ಕನಿಷ್ಠ 20 ವೈದ್ಯರು ಸಾಯುತ್ತಿದ್ದಾರೆ ಎಂದು ಅದು ಸೂಚಿಸಿದೆ. ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯರು ಕೂಡ ಮೃತಪಟ್ಟ ವೈದ್ಯರ ಪಟ್ಟಿಯಲ್ಲಿ ಸೇರಿದ್ದಾರೆ. ಮೇ 18ರಂದು 269 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಎಂಎ ತಿಳಿಸಿತ್ತು. ಆದರೆ ಮೇ 20ರ ಗುರುವಾರ ಹೊಸ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ವೈದ್ಯಕೀಯ ವೃತ್ತಿಪರರ ಸಾವು ವೇಗವಾಗಿ ಹೆಚ್ಚುತ್ತಿದೆ ಎಂಬುದು ಬೆಳಕಿಗೆ ಬಂದಿದೆ.