ಶೇ.90ರಷ್ಟು ಪೊಲೀಸರು ಭ್ರಷ್ಟರು, ಅಸಮರ್ಥರು; ಮದ್ರಾಸ್‌ ಹೈಕೋರ್ಟ್‌ ಅಸಮಾಧಾನ

ಹೈಕೋರ್ಟ್‌ ವಿಶೇಷ ಸೂಚನೆ ನೀಡಿದರೂ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರು ವಂಚನೆ ಕೇಸ್‌ ಒಂದರ ಕುರಿತು ಸರಿಯಾಗಿ ತನಿಖೆ ನಡೆಸದ ಪ್ರಕರಣ ವಿಲೇವಾರಿ ಮಾಡುವ ವೇಳೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಪಿ.ವೆಲ್‌ಮುರುಗನ್‌, ‘ಪೊಲೀಸ್‌ ಇಲಾಖೆಯಲ್ಲಿ ಶೇ.10ರಷ್ಟು ಅಧಿಕಾರಿಗಳು ಮಾತ್ರ ದಕ್ಷರಾಗಿದ್ದು, ಪ್ರಕರಣಗಳ ಕುರಿತು ತನಿಖೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಉಳಿದ ಶೇ. 90 ರಷ್ಟು ಅಧಿಕಾರಿಗಳು ಭ್ರಷ್ಟರು ಇಲ್ಲವೇ ತನಿಖೆ ನಡೆಸಲು ಅನರ್ಹರಾಗಿದ್ದಾರೆ’ ಎಂದು ಹೇಳಿದ್ದಾರೆ.

ಶೇ.90ರಷ್ಟು ಪೊಲೀಸರು ಭ್ರಷ್ಟರು, ಅಸಮರ್ಥರು; ಮದ್ರಾಸ್‌ ಹೈಕೋರ್ಟ್‌ ಅಸಮಾಧಾನ
Linkup
ಚೆನ್ನೈ: ‘ಪೊಲೀಸ್‌ ಇಲಾಖೆಯಲ್ಲಿರುವ ಶೇ. 90 ರಷ್ಟು ಭ್ರಷ್ಟರು ಅಥವಾ ಅಸಮರ್ಥರಾಗಿದ್ದಾರೆ’ ಎಂದು ಮದ್ರಾಸ್‌ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್‌ ವಿಶೇಷ ಸೂಚನೆ ನೀಡಿದರೂ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರು ವಂಚನೆ ಕೇಸ್‌ ಒಂದರ ಕುರಿತು ಸರಿಯಾಗಿ ತನಿಖೆ ನಡೆಸದ ಪ್ರಕರಣ ವಿಲೇವಾರಿ ಮಾಡುವ ವೇಳೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಪಿ.ವೆಲ್‌ಮುರುಗನ್‌, ‘ಪೊಲೀಸ್‌ ಇಲಾಖೆಯಲ್ಲಿ ಶೇ.10ರಷ್ಟು ಅಧಿಕಾರಿಗಳು ಮಾತ್ರ ದಕ್ಷರಾಗಿದ್ದು, ಪ್ರಕರಣಗಳ ಕುರಿತು ತನಿಖೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಉಳಿದ ಶೇ. 90 ರಷ್ಟು ಅಧಿಕಾರಿಗಳು ಭ್ರಷ್ಟರು ಇಲ್ಲವೇ ತನಿಖೆ ನಡೆಸಲು ಅನರ್ಹರಾಗಿದ್ದಾರೆ’ ಎಂದು ಹೇಳಿದ್ದಾರೆ. ‘ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಸಾಕ್ಷಿ ಎನಿಸಿದವರು ಮೃತಪಡುವ ತನಕ ಸರಿಯಾಗಿ ತನಿಖೆ ನಡೆಸುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಅವರು ತನಿಖೆ ನಡೆಸಿ ಯಾವುದೇ ಕ್ರಮ ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಆದರೂ ಸಮರ್ಪಕವಾಗಿ ತನಿಖೆ ಮಾತ್ರ ಮಾಡುವುದಿಲ್ಲ’ ಎಂದಿದ್ದಾರೆ. ವಂಚನೆ ಪ್ರಕರಣದ ಕುರಿತು 2011 ರಲ್ಲಿಯೇ ಎಫ್‌ಐಆರ್‌ ದಾಖಲಿಸಲಾಗಿದೆ. ತನಿಖೆ ಮುಗಿದ ಬಳಿಕ ಸತ್ಯಾಂಶ ಮರೆಮಾಚಿ 2014ರಲ್ಲಿ ಪ್ರಕರಣ ಖುಲಾಸೆಗೊಳಿಸಲಾಗಿದೆ. ಇದಾದ ಬಳಿಕ 2021 ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣದ ಕುರಿತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಕೋರ್ಟ್‌ ಸೂಚಿಸಿತ್ತು. ಹೀಗಿದ್ದರೂ ತನಿಖೆಗೆ ನಿರ್ಲಕ್ಷ್ಯ ವಹಿಸಿದ ಕಾರಣ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.