ವಿಶ್ವದಲ್ಲೇ ಅತಿ ದೊಡ್ಡ ಕ್ರಿಪ್ಟೋ ಕಳ್ಳತನ: $610 ಮಿಲಿಯನ್‌ ಮೊತ್ತದ ಕ್ರಿಪ್ಟೋಕರೆನ್ಸಿ ಕದ್ದ ಹ್ಯಾಕರ್ಸ್‌!

ಕ್ರಿಪ್ಟೋಕರೆನ್ಸಿ ಇತಿಹಾಸದಲ್ಲಿಯೇ ಅತಿದೊಡ್ಡ ಹ್ಯಾಕ್ ಮಾಡಿದ್ದಾರೆ. ಕ್ರಿಪ್ಟೋ ಪ್ಲಾಟ್‌ಫಾರ್ಮ್ ಆಗಿರುವ ಪಾಲಿ ನೆಟ್‌ವರ್ಕ್‌ ಮೂಲಕ ಹ್ಯಾಕ್‌ ಮಾಡಲಾಗಿದೆ. $ 610 ಮಿಲಿಯನ್ ಮೌಲ್ಯದ ಕ್ರಿಪ್ಟೋನಾಣ್ಯಗಳ ಕಳುವಾಗಿವೆ.

ವಿಶ್ವದಲ್ಲೇ ಅತಿ ದೊಡ್ಡ ಕ್ರಿಪ್ಟೋ ಕಳ್ಳತನ: $610 ಮಿಲಿಯನ್‌ ಮೊತ್ತದ ಕ್ರಿಪ್ಟೋಕರೆನ್ಸಿ ಕದ್ದ ಹ್ಯಾಕರ್ಸ್‌!
Linkup
ಹೊಸದಿಲ್ಲಿ: ಕ್ರಿಪ್ಟೋ ಹ್ಯಾಕರ್‌ಗಳು ಇತಿಹಾಸದಲ್ಲಿಯೇ ಅತಿದೊಡ್ಡ ಹ್ಯಾಕ್ ಮಾಡಿದ್ದಾರೆ. ಕ್ರಿಪ್ಟೋ ಪ್ಲಾಟ್‌ಫಾರ್ಮ್ ಆಗಿರುವ ಪಾಲಿ ನೆಟ್‌ವರ್ಕ್‌ ಮೂಲಕ ಹ್ಯಾಕ್‌ ಮಾಡಲಾಗಿದೆ. ಇದು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿರುವವರಲ್ಲಿ ಆತಂಕ ಉಂಟುಮಾಡಿದೆ. ಬರೋಬ್ಬರಿ $ 610 ಮಿಲಿಯನ್ ಮೌಲ್ಯದ ಇಥೆರಿಯಮ್, ಬಿನಾನ್ಸ್ ಸ್ಮಾರ್ಟ್ ಚೈನ್ ಮತ್ತು ಯುಎಸ್‌ಡಿಸಿ (ಯುಎಸ್‌ಡಿ ಕಾಯಿನ್) ಟೋಕನ್‌ಗಳನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕನ್‌ಗಳನ್ನು ವರ್ಗಾಯಿಸಿದ ವಿಳಾಸಗಳ ವಿವರಗಳೊಟ್ಟಿಗೆ ಹ್ಯಾಕ್‌ ಆಗಿರುವ ವಿಚಾರವನ್ನು ಬ್ಲಾಕ್‌ಚೈನ್‌ ಸೆಕ್ಯೂರಿಟಿ ಸಂಸ್ಥೆ ಸ್ಲೋಮಿಸ್ಟ್‌ (Slowmist) ಟ್ವಿಟ್ಟರ್‌ನಲ್ಲಿ ಘೋಷಿಸಿತ್ತು. ಈ ವಿಳಾಸದಿಂದ ವರ್ಗಾವಣೆಯಾಗುವ ಟೋಪನ್‌ಗಳನ್ನು ಕಪ್ಪುಪಟ್ಟಿಗೆ (ಬ್ಲಾಕ್‌ಲಿಸ್ಟ್‌) ಸೇರಿಸುವಂತೆ ಹ್ಯಾಕ್‌ನಿಂದ ತೊಂದರೆಗೆ ಒಳಗಾಗಿರುವ ಮೈನರ್ಸ್‌ಗಳಿ ಕೇಳಿಕೊಳ್ಳಲಾಗಿದೆ. "ಕ್ರಾಸ್-ಚೈನ್ ಇಂಟರ್ ಆಪರೇಬಿಲಿಟಿ ಪ್ರೋಟೋಕಾಲ್ @PolyNetwork (The cross-chain interoperability protocol @PolyNetwork2) ಮೇಲೆ ಸೈಬರ್‌ ದಾಳಿ ಮಾಡಲಾಗಿದೆ. ಅಲ್ಲದೆ ಒಟ್ಟು 610 ಮಿಲಿಯನ್ ಡಾಲರ್‌ ಮೊತ್ತದ ಕ್ರಿಪ್ಟೋಕರೆನ್ಸಿಗಳನ್ನುಒಟ್ಟು 3 ವಿಳಾಸಗಳಿಗೆ ವರ್ಗಾಯಿಸಲಾಗಿದೆ" ಎಂದು ಸ್ಲೋಮಿಸ್ಟ್ ತಿಳಿಸಿದೆ. ಪಾಲಿ ನೆಟ್‌ವರ್ಕ್‌ನ ಗುತ್ತಿಗೆ ವ್ಯವಸ್ಥೆಯಲ್ಲಿ ಇದ್ದ ದುರ್ಬಲತೆ ಬಳಸಿ ಹ್ಯಾಕ್‌ ಮಾಡಲು ಬಳಸಿಕೊಳ್ಳಲು ಸಾಧ್ಯವಾಯಿತು. ಸಂಸ್ಥೆಯು ಮಾಡಿಕೊಂಡಿದ್ದ ಗುತ್ತಿಗೆ ಒಪ್ಪಂದಲ್ಲಿ ನಡುವೆ ದುರ್ಬಲತೆ ಇದೆ ಎಂದು ಕಂಪನಿ ಹೇಳಿದೆ. ಹ್ಯಾಕರ್ಸ್‌ ವಿರುದ್ಧ ಕಾನೂನು ಕ್ರಮದ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ. ಹ್ಯಾಕ್ ಮಾಡಿದ ಸ್ವತ್ತುಗಳನ್ನು ಹಿಂದಿರುಗಿಸುವಂತೆಯೂ ಪಾಲಿ ನೆಟ್‌ವರ್ಕ್‌ ಟ್ವಿಟರ್‌ನಲ್ಲಿ ಒತ್ತಾಯಿಸಿದೆ. "ನೀವು ಹ್ಯಾಕ್ ಮಾಡಿದ ಹಣದ ಮೊತ್ತವು ಡೆಫಿ ಇತಿಹಾಸದಲ್ಲಿಯೇ ದೊಡ್ಡದಾಗಿದೆ. ಯಾವುದೇ ದೇಶವಾದರೂ ಇದನ್ನು ಒಂದು ದೊಡ್ಡ ಆರ್ಥಿಕ ಅಪರಾಧವೆಂದು ಪರಿಗಣಿಸುತ್ತದೆ ಮತ್ತು ನಿಮ್ಮನ್ನು ಹಿಂಬಾಲಿಸಲಾಗುತ್ತದೆ. ನೀವು ಯಾವುದೇ ಹೆಚ್ಚಿನ ವಹಿವಾಟು ಮಾಡುವುದು ಬಹಳ ಅವಿವೇಕತನವಾಗಿದೆ. ನೀವು ಹಣ ಕದ್ದಿರುವುದು ಹತ್ತಾರು ಕ್ರಿಪ್ಟೋ ಸಮುದಾಯದ ಸದಸ್ಯರಿಂದ. ಪರಿಹಾರವನ್ನು ಕಂಡುಹಿಡಿಯಲು ನೀವು ನಮ್ಮೊಂದಿಗೆ ಮಾತನಾಡಬೇಕು ಎಂದು ಎಚ್ಚರಿಸಿದೆ.