ವಿಶ್ವಕಪ್ ಚಾಂಪಿಯನ್ ತಂಡದ ಪರವಾಗಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್ ಮೆಸ್ಸಿ

ಫುಟ್ಬಾಲ್ ವಿಶ್ವಕಪ್ ಗೆಲ್ಲುವ ತಮ್ಮ ಜೀವಿತಾವಧಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿರುವ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನಲ್ ಮೆಸ್ಸಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ದೋಹಾ: ಫುಟ್ಬಾಲ್ ವಿಶ್ವಕಪ್ ಗೆಲ್ಲುವ ತಮ್ಮ ಜೀವಿತಾವಧಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿರುವ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನಲ್ ಮೆಸ್ಸಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ದೋಹಾದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ನಂತರ, ಅರ್ಜೆಂಟೀನಾದ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ 35 ವರ್ಷದ ಮೆಸ್ಸಿ, ಇನ್ನೂ ಒಂದಷ್ಟು ಕಾಲ ದೇಶಕ್ಕಾಗಿ ಆಡುವ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: 36 ವರ್ಷಗಳ ಬಳಿಕ 3ನೇ ಬಾರಿ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ, ಮೆಸ್ಸಿಗೆ ಗೆಲುವಿನ ವಿದಾಯ
'ನಾನು ವಿಶ್ವ ಚಾಂಪಿಯನ್ ಆಗಿ ಇನ್ನೂ ಕೆಲವು ಪಂದ್ಯಗಳನ್ನು ಆಡಲು ಬಯಸುತ್ತೇನೆ. ನಿಸ್ಸಂಶಯವಾಗಿ ನಾನು ನನ್ನ ವೃತ್ತಿಜೀವನವನ್ನು ಇದರೊಂದಿಗೆ (ಪ್ರಶಸ್ತಿಯೊಂದಿಗೆ) ಕೊನೆಗೊಳಿಸಲು ಬಯಸುತ್ತೇನೆ. ನಾನು ಹೆಚ್ಚಿನದನ್ನು ಕೇಳುವುದಿಲ್ಲ. ನನ್ನ ವೃತ್ತಿಜೀವನವು ಬಹುತೇಕ ಮುಗಿದಿದೆ. ಏಕೆಂದರೆ, ಫುಟ್‌ಬಾಲ್ ಕ್ರೀಡೆಯಲ್ಲಿ ಇದು ನನ್ನ ಕೊನೆಯ ದಿನಗಳು' ಎಂದೂ ಅವರು ಹೇಳಿದ್ದಾರೆ.
'ಹಾಲಿ ವಿಶ್ವಕಪ್ ಟೂರ್ನಿಯು ನನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ' ಎಂದು ಲಯೊನಲ್ ಮೆಸ್ಸಿ ಕೂಟ ಆರಂಭವಾಗುವುದಕ್ಕೂ ಮುನ್ನ ಹೇಳಿದ್ದರು.